ಹಿಪ್ಪರಗಿ ಆಣೆಕಟ್ಟಿನಿಂದ ಕೆಳ ಭಾಗಕ್ಕೆ 0.25 ಟಿ.ಎಮ್‌.ಸಿ ನೀರು ಹರಿಸಲಾಗುವುದು: ಶಾಸಕ ಸವದಿ

0.25 TMC of water will be released from Hipparagi Dam to the lower reaches: MLA Savadi

ಅಥಣಿ 06: ಹಿಪ್ಪರಗಿ ಆಣೆಕಟ್ಟಿನಿಂದ ಇದೇ ಗುರುವಾರ ಎಪ್ರಿಲ್ 10 ರಂದು ಕೆಳ ಭಾಗಕ್ಕೆ 0.25 ಟಿ.ಎಮ್‌.ಸಿ ನೀರು ಹರಿಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.  

ಅವರು ನಂದಗಾಂವ ಗ್ರಾಮದ ಹೊರವಲಯದಲ್ಲಿ ಲೋಕೋಪಯೋಗಿ ಇಲಾಖೆಯ 5 ಕೋಟಿ ಅನುದಾನದ ನಂದಗಾಂವ ಶಿರಹಟ್ಟಿ ರಸ್ತೆ ಸುಧಾರಣೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಹಿಪ್ಪರಗಿ ಆಣೆಕಟ್ಟಿನಿಂದ ನೀರು ಹರಿಸುವುದರಿಂದ ಕೆಳಭಾಗದಲ್ಲಿರುವ ಸವದಿ, ಶಿರಹಟ್ಟಿ, ಝುಂಜರವಾಡ ಸೇರಿದಂತೆ ಜಮಖಂಡಿ ತಾಲೂಕಿನ ಕೆಲ ಗ್ರಾಮಗಳ ರೈತರಿಗೆ ಅನಕೂಲವಾಗುತ್ತದೆ ಮತ್ತು  ಕುಡಿಯುವ ನೀರಿನ ಕೊರತೆ ನೀಗುತ್ತದೆ ಎಂದ ಅವರು ಈ ಸಂಬಂಧ ನಾನು ಈಗಾಗಲೇ ರೀಸನಲ್ ಕಮೀಶ್ನರ ಜೊತೆ ಚರ್ಚಿಸಿರುವೆ ಎಂದರು.       ಮಹಾರಾಷ್ಟ್ರದಿಂದ 700. ಕ್ಯೂಸೇಕ್ಸ ನೀರು ಹರಿದು ಬರುತ್ತಿದ್ದು, ಬೇಸಿಗೆ ಅವಧಿಯಲ್ಲಿಯೂ ನದಿಯಲ್ಲಿ ನೀರಿನ ಮಟ್ಟ  ಉಳಿದುಕೊಂಡಿರುವುದರಿಂದ  ಬೇಸಿಗೆ ಅವಧಿಯಲ್ಲಿ ನೀರಿನ ತೊಂದರೆ ಉಂಟಾಗುವುದಿಲ್ಲ ಎಂದರು.          

ಲೋಕೋಪಯೋಗಿ ಇಲಾಖೆಯ ಜಯಾನಂದ ಹಿರೇಮಠ, ಗುತ್ತಿಗೆದಾರ ಮಲ್ಲಿಕಾರ್ಜುನ ಕುಂಬಾರ, ಧುರೀಣರಾದ  ಉಮೇಶ ಕಟ್ಟಿಮನಿ, ಶಾಂತಿನಾಥ ನಂದೇಶ್ವರ,  ಮುತ್ತಣ್ಣಾ ಕಾತ್ರಾಳ, ಸುರೇಶ ಪಾಟೀಲ, ಅಪ್ಪು ನೇಮಗೌಡ, ದೀಲೀಪ ಕಾಂಬಳೆ, ಅಪ್ಪಾಸಾಬ ದಾನಗೊಂಡ, ಬಾಹುಬಲಿ ಕೊಕಟನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

ಕೊಟ್ಟಲಗಿ-ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಜಾಕವೆಲ್ ಕಮ್ ಪಂಪಹೌಸ್ ನ ರಾಫ್ಟ ಕಾಂಕ್ರೀಟ್ ಕಾಮಗಾರಿಯ ಪೂಜಾ ಸಮಾರಂಭವನ್ನು ಎಪ್ರಿಲ್ 7 ಸೋಮವಾರದಂದು  ಮುಂಜಾನೆ 9.30 ಕ್ಕೆ ಝುಂಜರವಾಡ ಗ್ರಾಮದಲ್ಲಿ ಶಾಸಕ ಲಕ್ಷ್ಮಣ ಸವದಿ ನೆರವೇರಿಸುವರು ಎಂದು  ನೀರಾವರಿ ಇಲಾಖೆಯ ಪ್ರವೀಣ ಹುಣಸಿಕಟ್ಟಿ ತಿಳಿಸಿದ್ದಾರೆ.