“ನಯ, ವಿನಯ, ಸರಳತೆಗಳ ಸಾಕಾರ ಮೂರ್ತಿ, ಕಥನಕವನಗಳ ಸರದಾರ ಕವಿ ಸುಬ್ಬಣ್ಣ ರಂ. ಎಕ್ಕುಂಡಿ”
“The embodiment of elegance, modesty, and simplicity, the master of narrative poetry, poet Subbanna
ಧಾರವಾಡ 21: ನಯ, ವಿನಯ, ಸರಳತೆಗಳ ಸಾಕಾರಮೂರ್ತಿ, ಕಾದಹಂಚಿನ ಮೇಲಿನ ಕಡು ಬಡತನದಕಾವುಗಳಿಂದ ರೂಪುಗೊಂಡ ಕವಿ ಸು.ರಂ.ಎಕ್ಕುಂಡಿ ಕಥೆ, ವಿಮರ್ಶೆ, ಜೀವನ ಚರಿತ್ರೆ, ಅನುವಾದಗಳಂತಹ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಗೈದ ಅತ್ಯಪರೂಪದ ಕನ್ನಡದ ಮಹತ್ವದ ಕವಿ ಎನಿಸಿಕೊಂಡವರು. ಯಾವುದೇ ಪಂಥ, ಪ್ರಚಾರಗಳಿಗೆ ಆಸೆಪಡದೇ ಕೊನೆತನಕ ತಾನು ನಂಬಿದ ಮಾರ್ಗಗಳ ನಿಷ್ಠಾವಂತ ಪ್ರತಿಪಾದಕರಾಗಿ ನಮ್ಮೆಲ್ಲರಿಗೂ ಪ್ರಾತ:ಸ್ಮರಣೀಯರಾಗಿದ್ದಾರೆ ಎಂದು ಹಿರೇಮಲ್ಲೂರ ಈಶ್ವರನ್ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಶಶಿಧರ ತೋಡಕರ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ಕವಿ ಸು.ರಂ.ಎಕ್ಕುಂಡಿಯವರ ಜನ್ಮದಿನದಂಗವಾಗಿ ದಿ: 20.01.2026 ರಂದು ಸಾಧನಕೇರಿಯ ‘ಚೈತ್ರ’ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಸುರಮ್ಯಕವಿ ಸು.ರಂ.ಎಕ್ಕುಂಡಿ : ಬದುಕು-ಬರೆಹ” ಈ ವಿಷಯ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡಿ ಗುರುವರ‌್ಯ ಡಾಽಽ ವಿನಾಯಕ ಕೃ. ಗೋಕಾಕ ಹಾಗೂ ರಂ.ಶ್ರೀ. ಮುಗುಳಿಯವರಂಥ ಸಾಹಿತ್ಯ ದಿಗ್ಗಜರಿದ್ದ ಸಾಂಗ್ಲಿಯ ವರುಣಕುಂಜ ವರ್ತುಲದ ಸಾಹಿತ್ಯಿಕ ಸಿಂಚನ ಪಡೆದ ಕವಿ ಸು.ರಂ. ಎಕ್ಕುಂಡಿ ಮುಂದೆ ಸೃಜನಶೀಲ ಸಾಹಿತ್ಯದ ಮಹತ್ವದ ಕವಿಯಾಗಿ ಹೆಸರು ಮಾಡಿದರು. ಮಧ್ವಾಚಾರ್ಯರ ವಿಚಾರಧಾರೆ, ಮಾರ್ಕ್ಸವಾದಿ ಚಿಂತನೆಗಳು ಇವರ ಕಾವ್ಯನಿರ್ಮಿತಿಯ ಸ್ಫೂರ್ತಿ ಕೇಂದ್ರಗಳಾಗಿದ್ದವು ಎಂದು ಎಕ್ಕುಂಡಿಯವರ ಅನೇಕ ಮಹತ್ವದ ಕಾವ್ಯದ ಸಾಲುಗಳನ್ನು ಸ್ಮರಿಸಿಕೊಂಡರು.
ನಿವೃತ್ತ ಬ್ಯಾಂಕ ಅಧಿಕಾರಿ ಅನಂತ ಸಿದ್ಧೇಶ್ವರ ಅವರು ತಮ್ಮ ವಿದ್ಯಾರ್ಥಿ ಜೀವನ ಕಾಲದ ಗುರು ಸು.ರಂ. ಎಕ್ಕುಂಡಿ ಯವರ ಶಿಷ್ಯವಾತ್ಸಲ್ಯ, ಸಹಾಯಹಸ್ತ ನೀಡುವಿಕೆ ಮುಂತಾದ ಗುಣವಿಶೇಷಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾಽಽ ಬಾಳಣ್ಣ ಶೀಗೀಹಳ್ಳಿಯವರು ಮಾತನಾಡಿ ವಿಭಿನ್ನವಾದ ಅಪರೂಪದ ಕಥನ ಕವನಗಳ ಮೂಲಕ ಹೆಸರು ಮಾಡಿದ ಕವಿ ಸು.ರಂ. ಎಕ್ಕುಂಡಿಯವರ ಪ್ರಕೃತಿಯ ಕುರಿತಾದ ಆರಾಧನಾಭಾವದ ಕವಿತೆಗಳು ಅಗಾಧವಾದ ಕಲ್ಪಕ ಶಕ್ತಿಯಿಂದ ಕೂಡಿದ್ದು “ಅತ್ಯಂತ ಪ್ರಯೋಗಶೀಲ ಕವಿ” ಎಂದೇ ಕಾವ್ಯಾಸಕ್ತರ ಮನಸೆಳೆದ ಕವಿ ಇವರು ಎಂದರು.
ಪ್ರತಿಭಾನ್ವಿತ ಪ್ರೌಢಶಾಲಾ ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮೀ ಮ. ಸಲಕಿ ಇವರಿಗೆ “ಪ್ರತಿಭಾ ಪುರಸ್ಕಾರ-2026" ಪ್ರಮಾಣ ಪತ್ರ, ಹಾಗೂ ಶಿಷ್ಯವೇತನ ನಿಧಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅನ್ವೇಷಣಕೂಟವನ್ನು ಬಹಕಾಲದಿಂದ ನಿರಂತರವಾಗಿ ನಡೆಸಿಕೊಂಡು ಬಂದ ನರಸಿಂಹ ಪರಾಂಜಪೆ-ಸೀಮಾ ಪರಾಂಜಪೆ ದಂಪತಿಗಳನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅನಿಲ ಕಾಖಂಡಿಕಿ ಕಾರ್ಯಕ್ರಮ ನಿರೂಪಿಸಿದರು. ರಾಜೀವ ಪಾಟೀಲ ಕುಲಕರ್ಣಿ ವಂದಿಸಿದರು.
ಗಣ್ಯರಾದ ಹರ್ಷ ಡಂಬಳ, ಡಾಽಽ ಹ.ವೆಂ. ಕಾಖಂಡಿಕಿ, ಪ್ರಹ್ಲಾದ ಯಾವಗಲ್ಲ, ಡಾಽಽ ಅರವಿಂದ ಯಾಳಗಿ, ಜಿ.ಆರ್. ಭಟ್ಟ, ಜಯತೀರ್ಥ ಜಹಗೀರದಾರ, ಕೃಷ್ಣ ಬಾಗಲವಾಡಿ, ಎಂ.ಎಸ್. ಪರಮೇಶ್ವರ, ಟಿ.ಬಿ. ಚವ್ಹಾಣ, ಸತೀಶ ಬಂಕಾಪುರ, ರಮೇಶ ನಾಡಗೀರ, ಆರ್.ಎನ್. ಕುಲಕರ್ಣಿ, ಶಿವಾಜಿ ಪವಾರ, ಎಸ್.ಜಿ. ಮುಮ್ಮಿಗಟ್ಟಿ, ಅಭಿಜಿತ್ ಪರಾಂಜಪೆ, ಬದರೀವಿಶಾಲ ಪರ‌್ವತೀಕರ, ಆರ್.ಎಮ್. ಹೊಸಮನಿ, ಎಸ್.ಎಮ್. ದೇಶಪಾಂಡೆ, ಶ್ರೀಪಾದ ನಾಡಗೀರ, ಬಿ.ಜಿ. ಗುಂಡೂರ, ಎಚ್.ಎಮ್. ಪಾಟೀಲ, ಸರೋಜಾ ಕುಲಕರ್ಣಿ, ವಿದ್ಯಾ ಪರ್ವತೀಕರ, ಆರೋಹಿ ಪರಾಂಜಪೆ, ಜಯಲಕ್ಷ್ಮೀ ಸಿದ್ಧೇಶ್ವರ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 