“ವಿಜ್ಞಾನ ವಿಸ್ಮಯ ಹಿ 2025” ವಿಜ್ಞಾನ ಮಾದರಿಗಳ ಪ್ರದರ್ಶನ

“ವಿಜ್ಞಾನ ವಿಸ್ಮಯ ಹಿ 2025” ವಿಜ್ಞಾನ ಮಾದರಿಗಳ ಪ್ರದರ್ಶನ “Science Wonder 2025” Science Model Exhibition

 ಧಾರವಾಡ 29: ವಿಜ್ಞಾನವು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಚಿಂತನೆ, ಸಂಶೋಧನಾ ಮನೋಭಾವ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಇಂತಹ ವಿಜ್ಞಾನ ವಿಸ್ಮಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸಲು ಅತ್ಯಂತ ಅಗತ್ಯವೆಂದು ಪ್ರೊ. ಬಿ. ಜಿ. ಮೂಲಿಮನಿ ನಿವೃತ್ತ ಉಪಕುಲಪತಿಗಳು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಹಾಗೂ ಬಿ.ಎಲ್‌.ಡಿ.ಇ ವಿಶ್ವವಿದ್ಯಾಲಯ, ವಿಜಯಪುರ) ಅಭಿಪ್ರಾಯಪಟ್ಟರು.

ಅವರು ಹೊಂಬೆಳಕು ಪ್ರತಿಷ್ಠಾನ (ರಿ), ಧಾರವಾಡದಿಂದ ಆಯೋಜಿಸಲಾದ “ವಿಜ್ಞಾನ ವಿಸ್ಮಯ ಹಿ 2025” ಎಂಬ ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ಸ್ಪರ್ಧೆ “ಶ್ರೀ ಸಾಯಿ ಯುವ ವಿಜ್ಞಾನಿ ಹಿ 2025” ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.ಅಧ್ಯಕ್ಷತೆಯನ್ನು ಡಾ. ವೀಣಾ ಬಿರಾದಾರ, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಿ ಶ್ರೀ ಸಾಯಿ ಮಹಾವಿದ್ಯಾಲಯ ಹಾಗೂ ಹೊಂಬೆಳಕು ಪ್ರತಿಷ್ಠಾನ (ರಿ), ಧಾರವಾಡ ಅವರು ವಹಿಸಿ, ಇಂತಹ ಸ್ಪರ್ಧಾತ್ಮಕ ವೇದಿಕೆಗಳು ಯುವ ವಿಜ್ಞಾನಿಗಳನ್ನು ರೂಪಿಸಲು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.  

ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ವಿಭಿನ್ನ ವಿನ್ಯಾಸದ, ನವೀನ ಹಾಗೂ ಉಪಯುಕ್ತ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಇಂಧನ, ಆರೋಗ್ಯ, ತಂತ್ರಜ್ಞಾನ, ಕೃಷಿ ಹಾಗೂ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವೈಜ್ಞಾನಿಕ ಆವಿಷ್ಕಾರಗಳು ಎಲ್ಲರ ಗಮನ ಸೆಳೆದವು.  

ಕಾರ್ಯಕ್ರಮದ ನಿರ್ಣಾಯಕರಾಗಿ ಮಹೇಶ್ ಪಾಟೀಲ, ಕಾರ್ಯದರ್ಶಿಗಳು ಹಿ ಮಿತ್ರ ಎಜ್ಯುಕೇಶನ್ ಸೊಸೈಟಿ, ಧಾರವಾಡ ಹಾಗೂ ವೈಷ್ಣವಿ ಎಂ. ತೆತಂಬಿ, ಉಪನ್ಯಾಸಕರು ಹಿ ಕಿಟಲ್ ಪದವಿ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.