“ಎನ್‌. ಎಸ್‌. ಎಸ್‌. ದಿನಾಚರಣೆಯ ಅಂಗವಾಗಿ ಧ್ವಜಾರೋಹಣ”

“ಎನ್‌. ಎಸ್‌. ಎಸ್‌. ದಿನಾಚರಣೆಯ ಅಂಗವಾಗಿ ಧ್ವಜಾರೋಹಣ”  “N. S. S. Flag hoisting as part of the Day celebrations”

“ಎನ್‌. ಎಸ್‌. ಎಸ್‌. ದಿನಾಚರಣೆಯ ಅಂಗವಾಗಿ ಧ್ವಜಾರೋಹಣ”  

ಗದಗ 24: ನಗರದ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ದಿ.24 ಬುಧವಾರ ರಂದು ಎನ್‌. ಎಸ್‌. ಎಸ್‌. ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮಾಡಲಾಹಿತು. ಮಹಾವಿದ್ಯಾಲಯದ ಪ್ರಾಚಾರ್ಯರಾದ   ಡಾ. ಎ. ಕೆ. ಮಠ ಅವರು ಧ್ವಜಾರೋಹಣ ಮಾಡಿದರು ಮತ್ತು ತಂಡ 02 ರ ನಾಯಕನಾದ ಕುಮಾರ. ಮುತ್ತಪ್ಪ ನೈನಾಪೂರ ಅವರು ಪರೇಡ್ ಮೂಲಕ ಧ್ವಜಾರೋಹಣವನ್ನು ನೆಡೆಸಿಕೊಟ್ಟರು.   

ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ವಾಗೀಶ ಗು. ರೇಶ್ಮಿ ಅವರು ಎಲ್ಲರನ್ನು ಸ್ವಾಗತಿಸಿದರು, ಎನ್‌. ಎಸ್‌. ಎಸ್‌. ಘಟಕದ ಸ್ವಯಂ ಸೇವಕರು ರಾಷ್ಟ್ರಗೀತೆ ಮತ್ತು ಎನ್‌. ಎಸ್‌. ಎಸ್‌. ಗೀತೆಯನ್ನು ಹಾಡಿದರು. ಎನ್‌. ಎಸ್‌. ಎಸ್‌. ಘಟಕದ ಕಾರ್ಯನಿರ್ವಾಹಕರಾದ ಕುಮಾರ. ಅಪ್ಪಣ್ಣ ಹಡಪದ,   ನೀಲಮ್ಮ ಸೀತಾರಳ್ಳಿ, ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಭಂದಿ ವರ್ಗದವರು ಹಾಗೂ ಎನ್‌. ಎಸ್‌. ಎಸ್‌. ಘಟಕದ ಎಲ್ಲ ಸ್ವಯಂ ಸೇವಕ ಮತ್ತು ಸೇವಕಿಯರು ಉಪಸ್ಥಿತರಿದ್ದರು.