‘ದಿ. ಡಾ. ಶಿವಾನಂದ ಶಾಂತಪ್ಪ ಗಾಳಿ ದತ್ತಿ’ ಕಾರ್ಯಕ್ರಮ
‘The. Dr. Shivananda Shantappa Gaali Datti’ program
ಧಾರವಾಡ 31 : ಕರ್ನಾಟಕ ವಿದ್ಯಾವರ್ಧಕ ಸಂಘವು, ‘ದಿ. ಡಾ. ಶಿವಾನಂದ ಶಾಂತಪ್ಪ ಗಾಳಿ ದತ್ತಿ’ ದಿನಾಂಕ: 1-2-2026 ರಂದು ರವಿವಾರ ಸಂಜೆ 6 ಗಂಟೆಗೆ ಸಂಘದ ನಾಡೋಜಡಾ. ಪಾಟೀಲ ಪುಟ್ಟಪ್ಪ ಸಭಾಭವನದಲಿ ್ಲ‘ಪಸರಿಪ ಕನ್ನಡಕ್ಕೊಡೆಯನೋರ್ವನೆ ಪಂಪನಾವಗಂ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಹುಬ್ಬಳ್ಳಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ಎಸ್. ಕೌಜಲಗಿ ಅತಿಥಿ ಉಪನ್ಯಾಸ ನೀಡುವರು.
ಅಧ್ಯಕ್ಷತೆಯನ್ನು ಹುಬ್ಬಳ್ಳಿಯ ಶಶಿ ಸಾಲಿ ಅಧ್ಯಕ್ಷತೆ ವಹಿಸುವರು. ಧಾರವಾಡದ ಸುಜಾತಾ ಹಡಗಲಿ ಹಾಗೂ ಕ.ವಿ.ವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯಡಾ.ಜಿನ ದತ್ತ ಅ. ಹಡಗಲಿ ಗೌರವ ಉಪಸ್ಥಿತರಿರುವರು.
ಕು.ಶೃತಿತಡಸ ಹಾಗೂ ಸಂಗಡಿಗರಿಂದ ನೃತ್ಯ ಕಾರ್ಯಕ್ರಮ ಏರಿ್ಡಸಲಾಗಿದೆ. ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ದಿ. ಡಾ. ಶಿವಾನಂದ ಶಾಂತಪ್ಪ ಗಾಳಿ
ಮೂಲತಃ ನವಲಗುಂದ ತಾಲೂಕಿನ ಗುಡಿ ಸಾಗರ ಗ್ರಾಮದಲ್ಲಿ ದಿನಾಂಕ: 1-2-1946 ರಂದು ಜನಿಸಿದ ಶ್ರೀಯುತರು ಧಾರವಾಡದ ಜೆ.ಎಸ್.ಎಸ್. ಕಾಲೇಜು ಹಾಗೂ ಕ.ವಿ.ವಿ. ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ, ಕ.ವಿ.ವಿ. ಪ್ರಸಾರಾಂಗದ ಪ್ರಭಾರಿ ನಿರ್ದೇಶಕರಾಗಿ, ಜೈನಅಧ್ಯಯನ ಪೀಠದ ಸಂಯೋಜಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.
ಕ.ವಿ.ವಿ. ಸಿನೇಟ್ ಹಾಗೂ ಅಕ್ಯಾಡೆಮಿಕ್ ಕೌನ್ಸಿಲ್‌ದ ಸದಸ್ಯರಾಗಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಲ್ಕು ಅವಧಿಗೆ ಆಯ್ಕೆಯಾಗಿ ಹಲವಾರು ತಾಲೂಕಾ ಹಾಗೂ ಜಿಲ್ಲಾ ಸಮಾವೇಶಗಳನ್ನು ಆಯೋಜಿಸುವುದರೊಂದಿಗೆ ಹುಬ್ಬಳ್ಳಿಯಲ್ಲಿ ನಡೆದ 59 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ಯಶಸ್ವಿಯಾಗಿ ಸಂಘಟಿಸಿದವರು. ಈ ಸಮ್ಮೇಳನದಲ್ಲಿ ಉಳಿದ ಹಣದೊಂದಿಗೆ ಸರಕಾರದಿಂದ ಇನ್ನಷ್ಟು ಅನುದಾನ ಪಡೆದು ಧಾರವಾಡದಲ್ಲೊಂದು ಸಾಹಿತ್ಯ ಭವನ ನಿರ್ಮಿಸಲು ಕಾರಣರಾದವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಕಾರ‌್ಯದರ್ಶಿಯಾಗಿ ಅನೇಕ ವರ್ಷಗಳವರೆಗೆ ಕಾರ್ಯ ಮಾಡಿದವರು.
‘ಸುಂದರ ಪುಸ್ತಕ ಪ್ರಕಾಶನ’ದ ಮೂಲಕ ಹಲವಾರು ಕೃತಿಗಳನ್ನು ಪ್ರಕಟಿಸಿ ಹೊಸ ಹೊಸ ಲೇಖಕರಿಗೆ ಪ್ರೇರಣೆ ನೀಡಿದವರು. ಅಭಿಮಾನಿಗಳಿಂದ ‘ಸಾಹಿತ್ಯ ಪರಿಚಾರಕ’ ಎಂಬ ನಾಮಧೇಯಕ್ಕೆ ಭಾಜನರಾದವರು. ಅವರು ದಿನಾಂಕ 07-03-2018 ರಂದು ನಿಧನರಾದರು. ಇವರ ಮಗಳು ಸುಜಾತಾ ಹಾಗೂ ಅಳಿಯ ಡಾ.ಜಿನದತ್ತ ಹಡಗಲಿ ಅವರು 2013 ರಲ್ಲಿ ಈ ದತ್ತಿಇಟ್ಟು ಸಾಹಿತ್ಯಿಕ ಪರಿಚಾರಕರಿಗೆ ಗೌರವ ಸಲ್ಲುವಂತೆ ಮಾಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 