‘ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಮಾಹಿತಿ ಕಾರ್ಯಾಗಾರ’

‘Information Workshop on Preparation for Competitive Exams’

‘ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಮಾಹಿತಿ ಕಾರ್ಯಾಗಾರ’ 

ಗದಗ : ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗವು ನೆಹರು ಯುವಕೇಂದ್ರ, ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪೂರ್ವ ಸಿದ್ಧತೆ’ ಕುರಿತು ಕಾರ್ಯಾಗಾರವನ್ನು ದಿನಾಂಕ 17/06/2022 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಚಾಣಕ್ಯ ಅಕಾಡೆಮಿಯ ನಿರ್ದೇಶಕರಾದ ಪ್ರದೀಪ ಗುಡ್ಡದ ಮಾತನಾಡಿ ‘ಇಂದಿನ ದಿನಮಾನವು ತಾಂತ್ರಿಕತೆ ಮತ್ತು ಸ್ಪರ್ಧಾತ್ಮಕತೆ ಇಂದ ಕೂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ಗುರಿಯ ದೃಢನಿರ್ಧಾರ, ಸಾಧಿಸುವ  ಛಲ, ನಿರಂತರ ಪರಿಶ್ರಮ, ಸಮಯ ಪಾಲನೆಯ ಶಿಸ್ತು ಬದ್ಧತೆಯೊಂದಿಗೆ ಪ್ರಚಲಿತ ವಿದ್ಯಮಾನಗಳ ನಿಖರವಾದ ಅಗತ್ಯವಾದ ಮಾಹಿತಿಗಳನ್ನು ಸಂಗ್ರಹಿಸಿ ದಾಖಲಿಸಿಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದರು. ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ  ಬರಬಹುದಾದ ವಿವಿಧ ಸ್ಪರ್ಧಾತ್ಮಕ  ಪರೀಕ್ಷೆಗಳಾದ ಖಃಋ, ಋಕಖ, ಖಖಅ, ಅಉಐ, ಖಖಃ, ಖಃಋ, ಮುಂತಾದವುಗಳ ಕುರಿತು ಪರೀಕ್ಷೆಗಳ ಪೂರ್ವತಯಾರಿ, ಅರ್ಜಿ ಹಾಕುವ ವಿಧಾನ ಹಾಗೂ ಪ್ರಸ್ತುತದಲ್ಲಿ ಅಹ್ವಾನಿಸಿದ ಪರೀಕ್ಷೆಗಳ ಮಾಹಿತಿ ಮುಂತಾದವುಗಳ ಬಗೆಗೆ ಅತ್ಯಂತ ಉಪಯುಕ್ತವಾದ ವಿವರಗಳನ್ನು ಅವರು ತಿಳಿಸಿಕೊಟ್ಟರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಹೇಮಂತ ಕರ್ಜಗಿ ಮಾತನಾಡಿ ಪರೀಕ್ಷೆಗೆ ಸಿದ್ಧತೆ ನಡೆಸಲು ಬೇಕಿರುವುದು ಆತ್ಮವಿಶ್ವಾಸವೇ ಹೊರತು ಮತ್ತೇನೂ ಅಲ್ಲ. ಗ್ರಾಮೀಣ ಪ್ರದೇಶದವರು ಎಂಬ ಕೀಳರಿಮೆ ಬಿಟ್ಟು ಐಎಎಸ್, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕು. ಇಂಗ್ಲಿಷ್ ಬರುವುದಿಲ್ಲ ಎಂಬ ಮನೋಭಾವದಿಂದ ವಿದ್ಯಾರ್ಥಿಗಳು ಬಹುತೇಕ ಪರೀಕ್ಷೆಗಳ ಬಗ್ಗೆ ಭಯಪಡುತ್ತಾರೆ. ಇಂಗ್ಲಿಷ್ ಜ್ಞಾನವಿಲ್ಲ ಎಂಬುದು ಯಾವ ಪರೀಕ್ಷೆಗೂ ಅನ್ವಯಿಸುವುದಿಲ್ಲ. ನಮ್ಮಲ್ಲಿರುವ ಜ್ಞಾನದ ಸದ್ಬಳಕೆಯಾಗಬೇಕು ಎಂದು ವಿವರಿಸಿದರು.ಕಾರ್ಯಾಗಾರದ ಸಂಚಾಲಕರಾದ ಪ್ರೊ. ಶ್ವೇತಾ ರಾಚಯ್ಯನವರ  ಅವರು ಕೆಎಎಸ್, ಐಎಎಸ್ ಪರೀಕ್ಷೆಗಳಿಗೆ ಹೇಗೆ ಸಿದ್ಧರಾಗಬೇಕು ಎಂಬ ಬಗ್ಗೆ ವಿಶ್ಲೇಷಣೆ ನೀಡುತ್ತಾ, ಮೊದಲು ಪ್ರಿಲಿಮ್ಸ್‌ಗೆ ಸಿದ್ಧರಾಗಿ ಯಶಸ್ಸು ಪಡೆಯಬೇಕು. ನಂತರ ಮೇನ್ಸ್‌ ಹಾಗೂ ಸಂದರ್ಶನದ ಬಗ್ಗೆ ಚಿಂತನೆ ಮಾಡಬೇಕು. ಸಾಮಾನ್ಯ ಜ್ಞಾನ, ಪದವಿಯಲ್ಲಿ ಮಾಡಿದ ಅಧ್ಯಯನ ಯಶಸ್ಸಿಗೆ ಸದಾ ಪೂರಕವಾಗುತ್ತವೆ. ಗುಂಪು ಚರ್ಚೆ, ಆಕರ ಪುಸ್ತಕಗಳ ಅಧ್ಯಯನದಿಂದ ಪರೀಕ್ಷೆ ಎದುರಿಸಲು ತಂತ್ರಗಾರಿಕೆ ಗೊತ್ತಾಗುತ್ತವೆ ಎಂದರು. ಇಡೀ ಜಗತ್ತೆ ಯುವಜನರ ಕೈಯಲ್ಲಿದೆ. ಯಾವುದೇ ಕ್ಷ ಣದಲ್ಲಿ ಜಗತ್ತಿನಲ್ಲಿ ಏನಾಗುತ್ತಿದೆ ಎಂಬ ತಿಳುವಳಿಕೆ ಹೊಂದುವ ಅವಕಾಶವಿದೆ. ಜ್ಞಾನ ಸಂಪಾದನೆ ಕಡೆಗೆ ಯುವ ಜನರು ಹೆಚ್ಚು ಆಸಕ್ತಿ ತೋರಬೇಕು. ಕಲಿತ ವಿದ್ಯೆಯನ್ನು ಸಮಾಜದ ಏಳ್ಗೆಗೆ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಉಪಸ್ಥಿತಿ ವಹಿಸಿದ್ದ ಪ್ರೊ. ವಿಶಾಲ ತೆಳಗಡೆ ಮಾತನಾಡಿ ನಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಲು ಹಲವಾರು ಅವಕಾಶಗಳು ಎದುರಾಗುತ್ತವೆ. ಆದರೆ ಸಿದ್ಧತೆಯ ಕೊರತೆ ಮತ್ತು ಉದಾಸೀನ ಮನೋಭಾವದಿಂದ ನಮ್ಮ ಕೈ ತಪ್ಪಿ ಹೋಗುತ್ತವೆ. ಸತತ ಪ್ರಯತ್ನ ನಡೆಸುತ್ತಿದ್ದರೆ ಒಂದು ಅವಕಾಶ ಕಳೆದುಕೊಂಡರೂ ಮತ್ತೊಂದು ಉತ್ತಮ ಅವಕಾಶ ನಮ್ಮದಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವೈಫಲ್ಯದಿಂದ ನಿರಾಶರಾಗದೆ ಧನಾತ್ಮಕ ಮನೋಭಾವದಿಂದ ಪ್ರಯತ್ನ ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಎ. ಕೆ. ಮಠ ಮಾತನಾಡಿ ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು, ಉತ್ತಮ ವ್ಯಕ್ತಿತ್ವ ನಿರ್ಮಾಣದ ಗುಣಗಳಾದ ಜೀವನಕ್ಕೊಂದು ಗುರಿ, ಸಾಧನೆ ಅಗತ್ಯ. ಕಠಿಣ ಪರಿಶ್ರಮ, ಶಿಸ್ತು, ಸಮಯ ಪಾಲನೆ, ಬದ್ಧತೆಯನ್ನು ಮೈಗೂಡಿಸಿಕೊಳ್ಳಬೇಕು. ಇಲ್ಲದಿದ್ದರೆ ಗುರಿ ಇರದ ಬದುಕು ಚುಕ್ಕಾಣಿ ಇಲ್ಲದ ಹಡಗಿನಂತಾಗುತ್ತದೆ ಎಂದು ತಿಳಿಸಿದರು. ಪ್ರೊ.ಹರ್ಷ ನಿಲೂಗಲ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಪ್ರೊ.ಗೌರ ಯಳಮಲಿ ವಂದಿಸಿದರು ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದರು.