ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ‘ಜಾನಪದ ಗೀತೆಗಳ’ ಕಾರ್ಯಕ್ರಮ

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ‘ಜಾನಪದ ಗೀತೆಗಳ’ ಕಾರ್ಯಕ್ರಮ  ‘Folk Songs’ program by Karnataka Vidyavardhaka Sangha


       ಧಾರವಾಡ 17 : ನಮ್ಮ ಜನಪದರು ನಿರಕ್ಷರಿಗಳಾದರೂ ಜಾನಪದ ಹಾಡುಗಳನ್ನು ಭಾವನಾತ್ಮಕವಾಗಿರಾಗ ಬದ್ಧವಾಗಿ ಹಾಡುವ ಕಲೆ ಕರಗತ ಮಾಡಿಕೊಂಡಿದ್ದರು. ಎಲ್ಲಾ ಸಾಹಿತ್ಯಕ್ಕೆ ಜಾನಪದವೇ ಜೀವಾಳ ಎಂದು ಸಾಹಿತಿಗಳಾದ ಲೀಲಾ ಕಲಕೋಟಿ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು, ಸುಶೀಲಾ ಮಲ್ಲೇಶಪ್ಪ ಅಪ್ಪಾಜಿದತ್ತಿ ಅಂಗವಾಗಿ ಸಾಹಿತಿ, ರಂಗಕರ್ಮಿಡಾ. ಶೋಭಾ ಆರ್‌. ಬನಶಂಕರಿ ಹಾಗೂ ಬೆಳಗಾವಿಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ರಾಮನಾಥ ಬಿ. ಬನಶಂಕರಿ ದಂಪತಿಗಳಿಂದ ಆಯೋಜಿಸಿದ್ದ  ‘ಜಾನಪದ ಗೀತೆಗಳ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಜನಪದ ಸಾಹಿತ್ಯದಲ್ಲಿ ಮಹಿಳೆಯರದೇ ಸಿಂಹಪಾಲು. ಕುಟ್ಟುವಾಗ, ಬೀಸುವಾಗ, ಸೋಬಾನೆ ಸಂದರ್ಭದಲ್ಲಿ, ಹಾಡು ಹಾಡಿ ಮನಸ್ಸಿನ ಬೇಸರ ಕಳೆದುಕೊಳ್ಳುತ್ತಿದ್ದರು.  ಸುಶೀಲಾ  ಅಪ್ಪಾಜಿಯವರು ಹೆಚ್ಚು ಕಲಿಯದಿದ್ದರೂ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದವರಾಗಿದ್ದರು. ಜೀವನದಲ್ಲಿ ಎದುರಾದ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಸ್ವಾವಲಂಭ ಬದುಕು ಸಾಗಿಸಿದ ಸ್ವಾಭಿಮಾನಿಯಾಗಿದ್ದರು. ಜೀವನದ ಕೊನೆ ಉಸಿರು ಇರುವವರೆಗೆ ಸಂಗೀತವೇ ಅವರ ಜೀವನವಾಗಿತ್ತು. 

ಡಾ. ಶೋಭಾ ಬನಶಂಕರಿ ಹಾಗೂ ರಾಮನಾಥ ಬನಶಂಕರಿ ವೃತ್ತಿಜಾನ ಪದಕಲಾವಿದರಲ್ಲದಿದ್ದರೂ ಹವ್ಯಾಸಿ ಕಲಾವಿದರಾಗಿ ಸೊಗಸಾದ ಹಾಡುಗಳನ್ನು ಹಾಡಿದ್ದಾರೆ.ಆ ಕಲಾವಿದರು ಇನ್ನೂ ಹೆಚ್ಚು ಜಾನಪದ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು. ದತ್ತಿ ದಾನಿಗಳ ಪರವಾಗಿ ಉದಯೋನ್ಮುಖ ಕಲಾವಿದರನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಪ್ರಾರಂಭದಲ್ಲಿ ಸಿಂಚನಾ ಕಟ್ಟಿಮನಿ ಹಾಗೂ ಸಾನ್ವಿ ನಾಯಕ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ಬೀನಾ ಹಿರೇಮಠ ಪ್ರಾರ್ಥಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಸತೀಶತುರಮರಿ  ವಂದಿಸಿದರು. ಕಾರ್ಯಕ್ರಮದಲ್ಲಿ ವೀರಣ್ಣಒಡ್ಡೀನ, ಕೆ.ಎಚ್‌.ನಾಯಕ, ಎಂ.ಎಂ.ಚಿಕ್ಕಮಠ, ಪ್ರೊ.ಬಿ.ಎಚ್‌.ಕೋಟಿಗೌಡರ, ಕೆ.ಎಂ. ಅಂಗಡಿ, ವಸಂತ ಲೋಖಂಡೆ ಸೇರಿದಂತೆ ಕಟ್ಟಿಮನಿ ಪರಿವಾರದವರು ಇದ್ದರು.