ಧಾರವಾಡ 17: ಕೂಲಿಕಾರ್ಮಿ ಕರು, ಬಡವರು, ಆರ್ಥಿ ಕಕತೆಯಿಂದ ಹಿಂದುಳಿದವರ ಮಕ್ಕಳ ಶಾಲೆ ಎಂದರೆ ಅದು ಸರ್ಕಾ ರಿ ಶಾಲೆ ಎನ್ನುವಂತಾಗಿದೆ. ಎಲ್ಲ ವರ್ಗದ ಮಕ್ಕಳು ಸರ್ಕಾ ರಿ ಶಾಲೆಗೆ ಹೋಗುವಂತಹ ವಾತವರಣ ನಿರ್ಮಾ ಣ ಮಾಡಬೇಕಾಗಿದೆ. ಸರ್ಕಾ ರಿ ಕನ್ನಡ ಶಾಲೆಗಳು ಮುಚ್ಚದಂತೆ ಕ್ರಮವಹಿಸಬೇಕು ಎಂದು ಎಸ್ ಸಿ, ಎಸ್ ಟಿ, ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಭಜಂತ್ರಿ ಹೇಳಿದರು.
ಅವರು ನಗರದ ಅಪರ ಆಯುಕ್ತರ ಕಚೇರಿಗೆ ನೂತನವಾಗಿ ನಿರ್ದೇ ಶಕರ ಹುದ್ದೆಗೆ ಬಡ್ತಿ ಪಡೆದ ಡಾ// ಬಿಕೆಎಸ್ ವರ್ಧನ್ ಅವರನ್ನು ಎಸ್ ಸಿ/ಎಸ್ ಟಿ, ಶಿಕ್ಷಕರ ಸಂಘದಿಂದ ಗೌರವಿಸಿ ಸನ್ಮಾನಿಸಿ ಮಾತನಾಡಿದರು.
ಪ್ರತಿಯೊಂದು ಮಗುವಿಗೂ ಶಿಕ್ಷಣ ಪಡೆಯುವುದು ಅವರ ಹಕ್ಕಾಗಿದೆ. ಮಗು, ಕುಟುಂಬ ವಾಸ ಇರುವ ಕಡೆಗೆ ಶಾಲೆಗಳನ್ನು ತೆರೆಯವುದು ಮುಖ್ಯವಾಗಿದೆ. ಇಂಗ್ಲೀಷ ವ್ಯಾಮೋಹದಿಂದ ಕನ್ನಡ ಭಾಷಗೆ ದಕ್ಕೆಯಾಗಬಾರದು. ಧಾರವಾಡ ಮತ್ತು ಗುಲ್ಬರ್ಗಾ ದಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ತೆರೆಯುವಂತೆ ಈ ನಾಡಿನ ಸಾಹಿತಿಗಳು, ಶಿಕ್ಷಕರ ಸಂಘಟನೆಗಳು ಹೋರಾಟವನ್ನು ಮಾಡಿದ್ದರ ಫಲವಾಗಿ ಇಂದು ನಮಗೆ ಇವು ದೊರತಿವೆ. ಇದರಿಂದ ಆಡಳಿತದಲ್ಲಿ ಸುಧಾರಣೆಯಾಗಿ ಪ್ರಾದೇಶಿಕವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲು ಸಾದ್ಯವಾಗಿದೆ. ಎಂದು ಹೇಳಿದರು.
ನಿರ್ದೇ ಶಕ ಡಾ. ಬಿಕೆಎಸ್ ವರ್ಧನ್ ಮತ್ತು ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಬೆಳಗಾವಿ ವಿಭಾಗದಲ್ಲಿ ಶಾಲೆಗಳ ಭಲವರ್ಧನೆಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು, ಬಿಗಿಯಾದ ಕಟ್ಟು ನಿಟ್ಟಿನ ಕ್ರಮದೊಂದಿಗೆ ಇಲಾಖೆಯನ್ನು ಚುರುಕುಗೊಳಿಸಿದ್ದಾರೆ. ಇಂತಹ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ಕನ್ನಡ ಶಾಲೆಗಳು ಬಲವರ್ಧನೆಯಾಗಲು ಸಾದ್ಯ ಎಂದು ಅಧಿಕಾರಿಗಳ ಸಹಕಾರವನ್ನು ಸ್ಮರಿಸಿದರು.
ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಶೆರೆವಾಡ ಸ್ವಾಗತಿಸಿದರು. ಕಾರ್ಯದರ್ಶಿ ಮಾರುತಿ ಭಜಂತ್ರಿ ವಂದಿಸಿದರು. ರೇಣುಕಾ ಡೊಂಬರ ನಿರೂಪಿಸಿದರು. ಗುರು ಪೋಳ ಹಾಗೂ ಮುಂತಾದವರು ಇದ್ದರು.