ಚಿಂಚಲಿ 21: ರಣ ರಣ ಬಿಸಿಲು.. ಅಂರ್ತಗತವಾಗುತ್ತಿರುವ ಅಂತರ್ಜಲ... ಬತ್ತಿದ ಜೀವನದಿ, ಕಾಣೆಯಾದ ಕೆರೆ ಕುಂಟೆಗಳಲ್ಲಿನ ನೀರು .. ಈ ಎಲ್ಲದರ ಪರಿಣಾಮ ಕುಡಿಯುವ ನೀರಿಗಾಗಿ ಹಾಹಾಕಾರ.. ಪ್ರತಿದಿನ ಪರದಾಟ ತೀವ್ರವಾಗಿದೆ. ಕಳೆದ ಮೂರು ತಿಂಗಳಿನಿಂದ ನೀರಿನ ಕೊರತೆ ಸಾರ್ವಜನಿಕರನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ನೀರನ್ನು ಈಗ ಅಮೃತದಂತೆ ಬಳಸುವಂತಾಗುತ್ತಿದೆ. ಟ್ಯಾಂಕರ್ ನಲ್ಲಿಯಲ್ಲಿ ನೀರು ಬರುವುದನ್ನೇ ಕಾಯುತ್ತಾ 10 ದಿನ ಕಳೆದರು ಕೂಡ ಒಂದು ಹನಿ ನೀರು ಮಾತ್ರ ಪೂರೈಕೆ ಮಾಡದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಕಾಯರ್ಾಲಯಕ್ಕೆ ಬಾರದೇ ಮನೆಯಲ್ಲಿ ಕಾಲ ಹರಣ ಮಾಡುತ್ತಿದ್ದಾರೆ.
ಹೌದು ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯಾಧಿಕಾರಿ ಕೆ.ಎಮ್. ಖಿಲಾರೆ. ಅವರು ಸಾರ್ವಜನಿಕರು ಕುಡಿಯುವ ನೀರಿನ ವ್ಯವಸ್ಥೆ ಮಾಡಿರಿ ಎಂದು ದೂರವಾಣಿ ಮೂಲಕ ಕೇಳಿದರೆ ಮುಖ್ಯಾಧಿಕಾರಿ ಕುಡಿಯುವ ನೀರಿನ ಟೆಂಡರ್ ಕರೆಯುವುದು ಮತ್ತು ಅದರ ಯೋಜನೆ ರೂಪಿಸಿದ ಬಳಿಕ ಪಟ್ಟಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದೆಂದು ಬೇಜವ್ದಾರಿಯಿಂದ ಉತ್ತರ ನೀಡುವ ಮುಖ್ಯಾಧಿಕಾರಿ. ಪಟ್ಟಣದಲ್ಲಿ ನೀರಿಗಾಗಿ ಜನ ಹಾತೊರೆಯುತ್ತಿದ್ದಾರೆ. ಪ್ರಾಣ ಹೋದ ಮೇಲೆ ನೀರಿನ ವ್ಯವಸ್ಥೆ ಮಾಡಿ ಎನು ಪ್ರಯೋಜನ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ತಾಲೂಕಿನ ತಹಶೀಲ್ದಾರ ಅವರು ಶನಿವಾರ ದಿ. 18 ರಂದು ಕುಡಿಯುವ ನೀರಿಗಾಗಿ ಸಭೆಯನ್ನು ತಕ್ಷಣ ಕರೆದು ಸಾರ್ವಜನಿಕರಿಗೆ ಕುಡಿಯುವ ನೀರಿನ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಿ ಮತ್ತು ಪಟ್ಟಣ ಪಂಚಾಯತಿಯ ಕುಡಿಯುವ ನೀರಿನ ಸಮಸ್ಯೆಯಿದಲ್ಲಿ ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಎಂದು ಮೇಲಾಧಿಕಾರಿಗಳು ಹೇಳಿದರು ಸಹ ಚಿಂಚಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮೇಲಾಧಿಕಾರಿಗಳ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಕುಡಿಯುವ ನೀರಿಗೆ ಮತ್ತು ಮುಖ್ಯಾಧಿಕಾರಿಗಳಿಗೆ ಯಾವುದೇ ಸಂಬಂಧವಿಲ್ಲದಂತೆ ವತರ್ಿಸುತ್ತಿದ್ದಾರೆ. ಮುಖ್ಯಾಧಿಕಾರಿ ಕಾಯರ್ಾಲಯಕ್ಕೆ ಬಾರದೆ ಮನೆಯಲ್ಲಿ ಕುಳಿತರೆ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವವರು ಪಟ್ಟಣದಲ್ಲಿ ಯಾರು ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಕುಡಿಯುವ ನೀರಿಗಾಗಿ ಪರದಾಟ ನೋಡಲಾರದೆ ಪಟ್ಟಣದ ಸಮಾಜ ಸೇವಕರು ಅಲ್ಲೊಂದು ಇಲ್ಲೊಂದು ನೀರಿನ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡುತ್ತಿದ್ದಾರೆ. ಆದರೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಸರಿಗೆ ಮಾತ್ರ ಪಟ್ಟಣದಲ್ಲಿದ್ದಾರೆ. ಜನಸಾಮಾನ್ಯರು ತೆರಿಗೆ ಹಣ ಪಟ್ಟಣದಲ್ಲಿ ಸೂಕ್ತವಾಗಿ ಉಪಯೋಗವಾಗುತ್ತಿಲ್ಲ.
ತಕ್ಷಣ ಪಟ್ಟಣ ಪಂಚಾಯತಿಯಿಂದ ಕುಡಿಯುವ ನೀರಿನ ವ್ಯವಸ್ಥೆಯ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಪಂಚಾಯತಿ ಮುಂದೆ ಕುಡಿಯುವ ನೀರಿಗಾಗಿ ಅಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಪಟ್ಟಣದ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪತ್ರಿಕೆಯ ಮುಂದೆ ಆಕ್ರೋಶದಿಂದ ಹೇಳಿದ್ದಾರೆ.
ಫೋಟೋ ಶಿಷರ್ಿಕೆ: ಚಿಂಚಲಿ ಟ್ಯಾಂಕರ್ ನೀರಿಗಾಗಿ ಪರದಾಡುತ್ತಿರುವ ಮಹಿಳೆಯರು ಹಾಗೂ ನೀರು ಸಿಗದೆ ಖಾಲಿ ಕೊಡ ಹಿಡಿದುಕೊಂಡು ಮುಖ್ಯಾಧಿಕಾರಿಗೆ ಹಿಡಿಶಾಪ ಹಾಕಿ ಮನೆಗೆ ಹೋಗುತ್ತಿದ್ದಾರೆ ಮತ್ತು ಮುಖ್ಯಾಧಿಕಾರಿ ಕೆ.ಎಮ್. ಖಿಲಾರೆ ಕಾಣಬಹುದು.