ಮತ್ತೆ ನಿರ್ದೇಶನ ದತ್ತ ಕಂಗನಾ


ಮುಂಬಯಿ, ಏ 10  ಇತ್ತೀಚೆಗಷ್ಟೇ ಹಿಂದಿಯಲ್ಲಿ 'ಮಣಿಕರ್ಣಿಕಾ  ಅರ್ಧ ಭಾಗವನ್ನು ನಿರ್ದೇಶಿಸಿ ಜನಮೆಚ್ಚುಗೆಗೆ ಪಾತ್ರವಾದ ಬಾಲಿವುಡ್ ಕ್ವೀನ್ ಕಂಗನಾ ರಣಾವತ್, ಈಗ ಮತ್ತೊಂದು ಚಿತ್ರದ ನಿದರ್ೆಶನ ಮಾಡಲು ಸಿದ್ಧರಾಗಿದ್ದಾರೆ. ಇದೊಂದು ಪೌರಾಣಿಕ ಚಿತ್ರವಾಗಿರಲಿದ್ದು, ಈಗಾಗಲೇ ಚಿತ್ರಕಥೆ ಅಂತಿಮಗೊಳಿಸಲಾಗಿದೆ ಎಂಬ ಮಾತುಗಳು ಬಿಟೌನ್ ನಿಂದ ಕೇಳಿಬರುತ್ತಿವೆ.  ಈ ಕುರಿತು ಪ್ರತಿಕ್ರಿಯಿಸಿದ ಕಂಗನಾ,ತುಂಬಾ ಸಮಯದಿಂದ ಮತ್ತೊಮ್ಮೆ ಚಿತ್ರ ನಿರ್ದೇಶಿಸ  ಎಂದು ಯೋಚಿಸುತ್ತಿದೆ. ಈಗ ಅಂತಿಮವಾಗಿ ಪೌರಾಣಿಕ ಕಥಾ ಹಂದರವಿರುವ ಚಿತ್ರ ನಿರ್ದೇಶನ   ಬೇಕೆಂದು ನಿರ್ಣಯ ಕೈಗೊಂಡಿದ್ದಾನೆ. ಇದೊಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ಮಹಿಳಾ ಮುಖ್ಯಭೂಮಿಕೆಯ ಚಿತ್ರ ಎನ್ನುವುದು ಇನ್ನೊಂದು ವಿಶೇಷವಾಗಿದೆ. ಅನೇಕ ಮಹಿಳಾ ಪ್ರಧಾನ  ಚಿತ್ರಗಳಲ್ಲಿ ನಟಿಸಿದ ನಾನು ಗಲ್ಲಾಪೆಟ್ಟಿಗೆ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು. 'ಪಂಗಾ' ಚಿತ್ರೀಕರಣದ ನಂತರ, ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ 'ಜಯಲಲಿತಾ' ಅವರ ಜೀವನಾಧಾರಿತ ಚಿತ್ರ ಪೂರ್ಣಗೊಳಿಸಲಿದ್ದು, ನಂತರವೇ ಈ ಚಿತ್ರದ  ಹೊರಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ, ಚಿತ್ರದ ಮುಖ್ಯ ಪಾತ್ರದಲ್ಲಿನ ನಟ ಅಥವಾ ನಟಿಯ ಹೆಸರಾಗಲೀ, ಪೌರಾಣಿಕ ಚಿತ್ರ ಏನನ್ನು ಆಧರಿಸಿದೆ ಎಂಬ ಗುಟ್ಟನ್ನು ಮಾತ್ರ ಕಂಗನಾ ಬಿಟ್ಟು ಕೊಟ್ಟಿಲ್ಲ.