28ರಂದು ಗದಗಿನಲ್ಲಿ ಪಂಚಮಸಾಲಿ ಮತ ಗ್ರಂಥ ಉತಸ್ವ, ಲೋಕಾರ್ಪಣೆ

ಲೋಕದರ್ಶನ ವರದಿ

ಕೊಪ್ಪಳ 21: ಪಕ್ಕದ ಗದಗ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇದೇ ದಿ. 28ರ ರವಿವಾರ ಬೆಳಿಗ್ಗೆ 11:00 ಗಂಟೆಗೆ ಪಂಚಮಸಾಲಿ ಸೇವಾ ಸಮಿತಿವತಿಯಿಂದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಪಂಚಮಸಾಲಿ ಸಮಾಜದ ಗ್ರಂಥವಾಗಿರುವ ಡಾ. ಡಿ.ಎ.ಉಪಾಧ್ಯ ವಿಚಿತ ಪಂಜಮಸಾಲಿ ಮತ ಗ್ರಂಥ ಉತ್ಸವ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಎರ್ಪಡಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಪ್ರಧಾನ ಕಾಯದಶರ್ಿ ಎಂ.ಎಸ್.ಚಿನ್ನುರ ತಿಳಿಸಿದರು.

ಅವರು ರವಿವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ಧಿಘೊಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಆದರೇ, ಸಮಾಜಕ್ಕೆ ಗ್ರಂಥ ಇರಲಿಲ್ಲ. ಇದರ ಬಗ್ಗೆ ಚಿಂತನೆ ಪ್ರಾರಂಭಿಸಿ ಈಗ ಡಾ. ಡಿ.ಎ. ಉಪಾಧ್ಯಯವರು ಸೂಮಾರು ಒಂದುವರೆ ವರ್ಷ ಅಧ್ಯಾಯನ ನೆಡೆಸಿ 524 ಪುಟಗಳ ಪಂಚಮಸಾಲಿ ಮತ ಎಂಬ ಗ್ರಂಥ ರಚಿಸಿದ್ದಾರೆ. ಇದನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲು, ಗ್ರಂಥ ಉತ್ಸವ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ಮುಂದುವರೆದ ಮಾತನಾಡಿದ ಅವರು ಇದರ ಉದ್ಘಾಟನೆ ವಿಜಯಪುರ ಶಾಸಕ ಬಸವರಾಜ ಪಾಟೀಲ್ ಎತ್ನಾಳ ನೆರೆವೆರಿಸಲಿದ್ದು, ನರಗುಂದ ಶಾಸಕ ಸಿ.ಸಿ.ಪಾಟೀಲ್ರವರು ಗ್ರಂಥ ಅನಾವರಣ ಮಾಡಲಿದ್ದರೆ. ಬಿಳಿಗಿ ಶಾಸಕ ಮುರುಗೇಶ ನೀರಾಣಿ ಗ್ರಂಥ ಬಿಡುಗಡೆ ಮಾಡಲಿದ್ದು, ನಿವೃತ್ತ ಉಪನ್ಯಾಸಕ ಗ್ರಂಥ ರಚನೆಕಾರರಾದ ಡಾ. ಡಿ.ಎ.ಉಪಾಧ್ಯ ಅಬ್ಬಿಗೇರಿರವರು ಗೌರವ ಸಮರ್ಪಣೆ ಮಾಡಲಿದ್ದರೆ. ಡಾ. ಎಲ್.ವಿ.ಪಾಟೀಲ್ ಉಪನ್ಯಾಸ ನೀಡಲಿದ್ದು, ರೋಣ ಶಾಸಕ ಕಳಕಪ್ಪ ಬಂಡಿ ಸಾಧಕರಿಗೆ ಸನ್ಮಾನ ಮಾಡಲಿದ್ದರೆ, ಮಾಜಿ ಸಚಿವ ವಿನಯ ಕುಲ್ಕರಣಿ ಗ್ರಂಥ ಲೇಖಕರಿಗೆ ಸನ್ಮಾನಿಸಲಿದ್ದು, ವಿಜಯ ಕುಮಾರ ಗಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿದಂತೆ. ಗದಗ ಜಿ.ಪಂ. ಅಧ್ಯಕ್ಷ ಎಸ್.ಪಿ.ಬಳೆಗಾರ ಶಾಸಕರಾದ ಶಂಕರ ಪಾಟೀಲ್, ಮೂನೇನಕೊಪ್ಪ, ವಿರುಪಾಕ್ಷೇಪ್ಪ ಬಳ್ಳಾರಿ, ಮಾಜಿ ಶಾಸಕರಾದ ಶ್ರೀಶಯಲಪ್ಪ ಬೀದರೂರ್, ನಂದಿಹಳ್ಳಿ ಹಾಲಪ್ಪ, ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಗದಗ ನಗರದಲ್ಲಿ ಗ್ರಂಥದ ಮೇರವಣಿಗೆ ನಡೆಸಲಾಗುವುದು. ದಾನಿದಳಿಗೆ ಸನ್ಮಾನಿಸಲಾಗುವುದು. ಕಾರ್ಯಕ್ರಮದ ಯಶಸ್ವಿಗೆ ವಿವಿಧ ಸಮಿತಿಗಳನ್ನು, ಅಂದರೆ, ಸ್ವಾಗತ ಸಮಿತಿ, ಮೇರವಣಿಗೆ ಸಮಿತಿ, ದಾಸೋಹ ಸಮೀತಿ ಹಾಗೂ ಮಹಿಳಾ ಘಟಕ, ಯುವ ಘಟಕ, ಸಲಹ ಸಮೀತಿ ಮತ್ತು ಸಭಾಂಗಣ ಸಮಿತಿ ರಚಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಪ್ರಧಾನ ಕಾಯದಶರ್ಿ ಎಂ.ಎಸ್.ಚಿನ್ನುರ ರವರು ವಿವರಿಸಿ ಜಿಲ್ಲೆಯ ಪಂಚಮಸಾಲಿ ಸಮಾಜಬಾಂಧರನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಲು ತಿಳಿಸಿ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದ ಈ ಸಂದರ್ಭದಲ್ಲಿ ಪ್ರಮೂಖ ಸಂಘಟಕರಾದ ಸಿದ್ದು ಪಲ್ಲೇದ್, ಮಹೇಶ ಕಬರ್ೇವು ಗದುಗಿನ್, ಮಹಾಂತೇಶ ನೆಲ್ವಡಿ, ಬಸವರಾಜ ತುಂಗಳ, ಶರಣಪ್ಪ ಹ್ಯಾಟಿ ಹಾಗೂ ವೀರೇಶ ಪಲ್ಲೆದ್ ಅನೇಕರು ಉಪಸ್ಥಿತರಿದ್ದರು.