ಚಿಕ್ಕೋಡಿಗೆ ನಾಳೆ ಪ್ರಧಾನಿ ಮೋದಿ ಭೇಟಿ


ಬೆಳಗಾವಿ, ಏ 17ರಾಜ್ಯದಲ್ಲಿ  ನಾಳೆ ಮೊದಲ ಹಂತದ ಚುನಾವಣೆ ನಡೆಯುತ್ತಿರುವ   ಸಮಯದಲ್ಲೇ ಮುಂಬಯಿ-ಕನರ್ಾಟಕ ಪ್ರದೇಶದ ಆರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆ ನಡೆಸಿ ಮತಯಾಚಿಸಲಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಇದು ಅವರ ಮೂರನೆ ರಾಜ್ಯ ಭೇಟಿಯಾಗಿದೆ. ಮೊದಲಿಗೆ ಮೈಸೂರು, ಚಿತ್ರದರ್ಗಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ್ದು. ನಂತರ ಮಂಗಳೂರು  ಹಾಗು ಬೆಂಗಳೂರಿನಲ್ಲಿ ಬೃಹತ್ ಚುನಾವಣೆ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಈಗ ಮೂರನೆ ಬಾರಿಗೆ ಚಿಕ್ಕೋಡಿಗೆ ಆಗಮಿಸಲಿದ್ದಾರೆ ಎಂದು ಪಕ್ಷದ ನಾಯಕ ಮಹಂತೇಶ್ ಕವಟಗಿ ಮಠ ಸುದ್ದಿಗಾರರಿಗೆ ತಿಳಿಸಿದರು. ನಾಳಿನ ಸಭೆಯಲ್ಲಿ  ಎರಡು ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಎಂಬ ನಿರೀಕ್ಷೆಯಿದೆ. ಬೆಳಗಾವಿ, ಚಿಕ್ಕೋಡಿ, ಧಾರವಾಡ ಮತ್ತು ಗದಗ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ  ಎಂದು ಅವರು ಹೇಳಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ ಐದು ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು ಎಂದು ಅವರು ಹೇಳಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ತೆಕ್ಕೆಯಲ್ಲಿರುವ  ಚಿಕ್ಕೋಡಿ ಕ್ಷೇತ್ರವನ್ನು ಗೆಲ್ಲಲು ಹೆಚ್ಚಿನ ಶ್ರಮ ಹಾಕಬೇಕಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥರ್ಿ ಪ್ರಕಾಶ್ ಹುಕ್ಕೇರಿ ಅವರು ಬಿಜೆಪಿ ವಿರುದ್ಧ  3000 ಮತಗಳ ಗೆಲುವು ಸಾಧಿಸಿದ್ದರು. ಮೋದಿ ಅವರು ಚಿಕ್ಕೋಡಿಗೆ ನೀಡುತ್ತಿರುವ ಎರಡನೆ ಭೇಟಿಯಾಗಿದೆ. ಈ ಮೊದಲು  ಅವರು 2018 ರ ವಿಧಾನಸಭಾ ಚುನಾವಣಾ ಸಮಯದಲ್ಲಿ  ಬೃಹತ್ ರೈತರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ್ದರು.  ಈ ನಡುವೆ ನಾಳೆ ರಾಜ್ಯದಲ್ಲಿ ಮತದಾನ ನಡೆಯುತ್ತಿರುವ ಸಮಯದಲ್ಲಿ ಮೋದಿ ಅವರ ಭಾಷಣ ಜನತೆ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಇದಕ್ಕೆ ಆಯೋಗ ಅನುಮತಿ ಕೊಡಬಾರದು ಎಂದು ಕಾಂಗ್ರೆಸ್ ಅಪಸ್ವರ ಎತ್ತಿ ದೂರು ನೀಡಿದೆ.