ನನ್ನ ಚಿತ್ರಗಳನ್ನು ವೀಕ್ಷಿಸಲು ಮಕ್ಕಳಿಗಿಲ್ಲ ಅನುಮತಿ: ಆಯುಷ್ಮಾನ್

  

ಮುಂಬಯಿ, ಮೇ 2  ತಮ್ಮ ಅಭಿನಯದ ಚಿತ್ರಗಳನ್ನು ವೀಕ್ಷಿಸಲು ಮಕ್ಕಳಿಗೆ ಅನುಮತಿ ಕೊಟ್ಟಿಲ್ಲವಂತೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ. 

ಆಯುಷ್ಮಾನ್ ಖುರಾನಾ, 'ವಿಕ್ಕಿ ಡೋನರ್' ಚಿತ್ರದಿಂದ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಕಳೆದ ವರ್ಷ ಅವರು ಅಭಿನಯದ 'ಅಂದಾಧುನ್' ಹಾಗೂ 'ಬಧಾಯಿ ಹೋ' ಚಿತ್ರಗಳು ಉತ್ತಮ ಪ್ರದರ್ಶನ ಕಂಡು ಗಲ್ಲಾ ಪೆಟ್ಟಿಗೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದವು. 

ಸುದ್ದಿಗಾರರೊಂದಿಗೆ ಆಯುಷ್ಮಾನ್ ಮಾತನಾಡಿ, ನನ್ನ ಚಿತ್ರಗಳನ್ನು ನೋಡಲು ಮಕ್ಕಳಿಗೆ ಅನುಮತಿ ಇಲ್ಲ. ನನ್ನ ಚಿತ್ರದ ಹೊರತಾಗಿ ಅವರು 'ಗಲ್ಲಿ ಬಾಯ್', ವರುಣ್ ಧವನ್ ಅಭಿನಯದ ಚಿತ್ರಗಳನ್ನು ನೋಡಬಹುದು. ಏಕೆಂದರೆ ನಾನು ಅಭಿನಯದ ಎಲ್ಲಾ ಚಿತ್ರಗಳಲ್ಲಿ ಚುಂಬನ ದೃಶ್ಯವಿದೆ. ಹೀಗಾಗಿ ತಮ್ಮ ತಂದೆ ಇನ್ನೊಬ್ಬ ಮಹಿಳೆಗೆ ಮುತ್ತು ಕೊಡುತ್ತಿದ್ದಾರೆಂದು ಅವರು ಭಾವಿಸಬಾರದೆಂಬ ಕಾರಣಕ್ಕೆ ಮಕ್ಕಳಿಗೆ ಅನುಮತಿ ನೀಡಿಲ್ಲ ಎಂದಿದ್ದಾರೆ.