ಮುಂಬೈ, ಏ 16 ಬಾಲಿವುಡ್ ಖಿಲಾಡಿ ಅಕ್ಷಯ ಕುಮಾರ್ ಹಾಗೂ ಪರಿಣಿತಿ ಚೋಪ್ರಾ ಅಭಿನಯದ "ಕೇಸರಿ" ಚಿತ್ರ ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದಿದ್ದು, 150 ಕೋಟಿ ರೂಪಾಯಿ ಕ್ಲಬ್ ಗೆ ಸೇರ್ಪಡೆಯಾಗಿದೆ. 2019 ಸಾಲಿನಲ್ಲಿ ತೆರೆಕಂಡಿದ್ದ ಬಹುನಿರೀಕ್ಷತ ಚಿತ್ರಗಳಲ್ಲಿ "ಕೇಸರಿ" ಚಿತ್ರ ಕೂಡ ಒಂದಾಗಿದ್ದು, ಮಾರ್ಚ್ 22ರಂದು ಬಿಡುಗಡೆಗೊಂಡಿತ್ತು. 1987ರಲ್ಲಿ ಬ್ರಿಟಿಷರ ಭಾರತೀಯ ಸೇನೆ ಹಾಗೂ ಅಪ್ಘಾನಿಸ್ತಾನ್ ಸೇನೆಯ ಮಧ್ಯೆ ನಡೆದ ಸಾರಾಗಡಿ ಯುದ್ಧ ಸನ್ನಿವೇಶ ಆಧಾರಿಸಿ ಚಿತ್ರ ನಿಮರ್ಿಸಲಾಗಿದೆ. ಈ ಯುದ್ಧದಲ್ಲಿ ಬ್ರಿಟಿಷ್ ಸೇನೆಯ 21 ಸಿಖ್ ಯೋಧರು, 10 ಸಾವಿರ ಸಂಖ್ಯೆಯಲ್ಲಿದ್ದ ಅಪ್ಘಾನಿಸ್ತಾನ ಸೇನೆಯನ್ನು ಎದುರಿಸಿ ಸದೆಬಡೆದಿದ್ದರು. ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯಕುಮಾರ್ ಹಾಗೂ ಪರಿಣಿತಿ ಚೋಪ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಕಂಡ ಮೊದಲ ವಾರದಲ್ಲೇ 105 ಕೋಟಿ ಗಳಿಕೆ ಮಾಡಿದ್ದ ಕೇಸರಿ ಚಿತ್ರ ಇದುವರೆಗೆ 150 ಕೋಟಿ ರೂಪಾಯಿ ಆದಾಯ ಗಳಿಸಿದೆ. ಪ್ರಸಕ್ತ ವರ್ಷ ತೆರೆ ಕಂಡಿರುವ "ಉರಿ ದ ಸರ್ಜಿಕಲ್ ಸ್ಟ್ರೈಕ್ " ಹಾಗೂ "ಟೋಟಲ್ ಧಮಾಲ್" ಚಿತ್ರಗಳು ಕೂಡ 150 ಕೋಟಿ ರೂಪಾಯಿ ಗಳಕೆ ಮಾಡಿವೆ.