ಲೋಕದರ್ಶನ ವರದಿ
ಕಂಪ್ಲಿ 24: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗೋಪಾಲಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಸೋಮವಾರ, ಪ್ರತಿಷ್ಠಾಪನೆಯ ನಂತರದ ಮೊದಲ ಮಂಡಲ ಪೂಜೆ ಹಾಗೂ ರಾಜ್ಯದಲ್ಲಿ ಸಮೃದ್ಧ ಮಳೆಗಾಗಿ ಪರ್ಜನ್ಯ ಹೋಮ ಜರುಗಿತು.
ಆನೆಗುಂದಿಯ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದ ವಾದಿರಾಜಸ್ವಾಮಿಗಳ ಪೌರೋಹಿತ್ಯದಲ್ಲಿ ಹೋಮ ಹವನಾದಿ, ಮಂಡಲ ಪೂಜಾದಿಗಳು ಶ್ರದ್ಧಾಭಕ್ತಿಗಳಿಂದ ಜರುಗಿದವು.
ಈ ಸಂದರ್ಭದಲ್ಲಿ ಮೆಟ್ರಿ ಗ್ರಾಮದ ಗೋಪಾಲಕೃಷ್ಣಸ್ವಾಮಿ ದೇವಸ್ಥಾನದ ಸದ್ಭಕ್ತರು, ಮುಖಂಡರು ಶ್ರದ್ಧಾಭಕ್ತಿಗಳಿಂದ ಪಾಲ್ಗೊಂಡಿದ್ದರು.