ಕಂಪ್ಲಿ: ಎಟಿಎಂ ಕೈಕೊಟ್ಟಾಗ ಮಿನಿ ಎಟಿಎಂ ವರದಾನ

ಲೋಕದರ್ಶನ ವರದಿ

ಕಂಪ್ಲಿ 27: ನಗದುರಹಿತ  ಗ್ರಾಮೀಣ ಜನತೆಗೆ ವರದಾನವಾಗಲಿರುವ ವೆಬ್ಟಾಕ್ ಮಿನಿ ಎಟಿಎಂ ವ್ಯವಸ್ಥೆಯನ್ನು ಅಳವಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳಿ  ಎಂದು ಪುರಸಭೆ ಅಧ್ಯಕ್ಷ ಎಂ.ಸುಧೀರ್ ಹೇಳಿದರು. 

ಪೇಟೆ ಬಸವೇಶ್ವರ ತೇರಿನ ಮನೆ ಆವರಣದಲ್ಲಿ, ವೆಬ್ಟಾಕ್ ಮಿನಿ ಎಟಿಎಂನ್ನು ಬಿಡುಗಡೆಗೊಳಿಸಿ ಮಾತನಾಡಿ, ಮಿನಿ ಎಟಿಎಂ ಗ್ರಾಮೀಣ ಪಟ್ಟಣದಲ್ಲೂ ಎಟಿಎಂ ವ್ಯವಸ್ಥೆ ಕೈಕೊಟ್ಟಾಗ ಮಿನಿ ಎಟಿಎಂ ವರದಾನವಾಗಲಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಜನತೆ ಮಿನಿ ಎಟಿಎಂ ವ್ಯವಸ್ಥೆ ಪಡೆದುಕೊಂಡು ಹಣಗಳಿಸಬಹುದಾಗಿದೆ ಎಂದು ಹೇಳಿದರು. 

ಕ್ಷೇತ್ರ ಮಾರಾಟ ನಿರ್ವಾಹಕ ಆರ್.ಎಂ.ಚಂದ್ರಶೇಖರ್ ಮಾತನಾಡಿ, ಕಂಪ್ಲಿ ತಾಲ್ಲೂಕಿನಲ್ಲಿ ಮಿನಿಎಟಿಎಂ ವ್ಯವಸ್ಥೆ ಜಾರಿಗೊಳಿಸಿದೆ. ಇದರಿಂದ  ಯಾವುದೇ ಬ್ಯಾಂಕಿನ ಖಾತೆಗೆ ಜಮೆ ಮಾಡುವ, ಬ್ಯಾಲೆನ್ಸ್ ವಿತರ  ಪಡೆಯುವ, ಹಣ ವಗರ್ಾವಣೆ ಮಾಡುವ, ಯಾವುದೇ ಡೆಬಿಟ್ ಕಾಡರ್್ನಿಂದ ಹಣ ಹಿಂಪಡೆಯುವ, ಮೊಬೈಲ್ ಕರೆನ್ಸಿ, ಡಿಟಿಎಚ್ ರಿಜಾರ್ಚ್  ಮಾಡುವ ಸೇರಿ ನಾನಾ ಸೌಲಭ್ಯಗಳಿವೆ. ಗ್ರಾಮೀಣ ಪ್ರದೇಶಗಳ ಜನತೆ ಸದುಪಯೋಗ ಪಡೆದುಕೊಳ್ಳುವಲ್ಲಿ ಮುಂದಾಗಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪುರಸಭೆಯ ಸಮುದಾಯ ಸಂಘಟಕಿ ಎಂ.ವಸಂತಮ್ಮ, ಎಮ್ಮಿಗನೂರಿನ ಜಡೆ ಸಿದ್ಧೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಜಡೇಶ್, ಉಪಾಧ್ಯಕ್ಷ ಅಡಿವೆಯ್ಯಸ್ವಾಮಿ, ಪಿ. ಶರಬಣ್ಣ ಶ್ರೇಷ್ಠಿ, ಕಾಂಗ್ರೇಸ್ ಗ್ರಾಮೀಣ ಉಪಾಧ್ಯಕ್ಷ ಬಿಡ್ಡಪ್ಪ, ಜಡೆಪ್ಪ, ಕೆ.ಪಿ.ಶಿವಕುಮಾರ್ ಸೇರಿ ಅನೇಕರು ಉಪಸ್ಥಿತರಿದ್ದರು.