ಕಂಪ್ಲಿ: ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ಶಾಸಕ ಗಣೇಶ

ಲೋಕದರ್ಶನ ವರದಿ

ಕಂಪ್ಲಿ 03: ನಗರದ ಪ್ರತಿಯೊಂದು ವಾರ್ಡಗಳಲ್ಲಿ  ರಸ್ತೆ.ಚರಂಡಿ.ಹಾಗೂಇನ್ನಿತರ  ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ .ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು  ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. 

   ಅವರು ಮಂಗಳವಾರ ಇಲ್ಲಿನ ಕೋಟೆಯ 1 ಮತ್ತು 13, ಗಂಗಾನಗರ ಪಟ್ಣ ಯಲ್ಲಮ್ಮನ ಗುಡಿ ಬಳಿಯ 18 ಮತ್ತು 19 ಹಾಗೂ 17ನೇ ವಾರ್ಡಗಳಲ್ಲಿ ಶಾಸಕರು ಅಧಿಕಾರಿಗಳೊಂದಿಗೆ ಸಂಚರಿಸಿ ಜನರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಕೇಳಿದರು. ಅಲ್ಲದೆ ಶೀಘ್ರವೇ ಇತ್ಯರ್ಥಗೊಳಿಸಲು ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಪಟ್ಟಣದ ಐದು ವಾರ್ಡಗಳಲ್ಲಿ  ಸಂಚರಿಸಲಾಗಿದ್ದು ಚರಂಡಿ ಸ್ವಚ್ಚತೆ, ಚರಂಡಿ ನೀರು ಹರಿದು ಸಾಗಲು ಸೂಕ್ತ ವ್ಯವಸ್ಥೆ, ಮನೆಗಳ ಮೇಲೆ ಹಾದು ಹೋದ ವಿದ್ಯುತ್ ತಂತಿಗಳ ತೆರವು, ಬೀದಿ ದೀಪ, ವಸತಿ, ನಿವೇಶನ ನೀಡಿಕೆ, ಕೋಟೆ ಪ್ರದೇಶದಲ್ಲಿ ದಿನದ 24ತಾಸಿನ ಕುಡಿವ ನೀರು, ಸಾರ್ವಜನಿಕ ಶೌಚಾಲಯಗಳ ದುರಸ್ತಿ, ಸಾರ್ವಜನಿಕ ಕುಂದು ಕೊರತೆಗಳನ್ನು ಪಟ್ಟಿ ಮಾಡಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.  

ಪಟ್ಟಣದ 23 ವಾರ್ಡಗಳಲ್ಲಿನ  ಕಡು ಬಡವರಿಗೆ ವಸತಿ ಯೋಜನಡಿ 1500 ಮನೆಗಳನ್ನು ನಿರ್ಮಿಸಲು, ಪಟ್ಟಣದಲ್ಲಿ ಹತ್ತು ಎಕರೆ ಭೂಮಿಯನ್ನು ಖರೀದಿಸಲು ಯೋಜಿಸಿದ್ದು ಭೂಮಿ ಹುಡುಕಾಟದಲ್ಲಿದ್ದೇವೆ. ಆಸಕ್ತ ರೈತರಿಂದ ಸರ್ಕಾರ  ನಿಗಧಿಪಡಿಸಿದ ಧರದ ಮೂರುಪಟ್ಟು ಹಣ ನೀಡಿ ಖರೀದಿಸಲಾಗುವುದು. ಈಗಾಗಲೇ ಕುರುಗೋಡಿನಲ್ಲಿ 20.93ಎಕರೆಯಷ್ಟು ಸಕರ್ಾರಿ ಇದ್ದು ಕಂಪ್ಲಿಯಲ್ಲಿ ಭೂಮಿ ಖರೀದಿಸಬೇಕಾಗಿದ್ದು ಪಟ್ಟಣದ ಅಭಿವೃದ್ದಿಗಾಗಿ ರೈತರು ಭೂಮಿ ನೀಡಲು ಮುಂದೆ ಬರಬೇಕು ಎಂದು ಕೋರಿದರು.  ಹಂಪಾದೇವನಹಳ್ಳಿ ಗ್ರಾಮದಲ್ಲಿ 38ಎಕರೆ ಸರ್ಕಾರ  ಭೂಮಿ ಗುರುತಿಸಿದ್ದು ಸವರ್ೇ ಮಾಡಿಸಿ, ವಿದ್ಯಾಥರ್ಿಗಳ ವಸತಿ ನಿಲಯ, ವಸತಿ ಶಾಲೆ ಸೇರಿ ಶೈಕ್ಷಣಿಕ ಸೌಲಭ್ಯ(ಎಜ್ಯುಕೇಷನಹಬ್)ಒದಗಿಸಲು ಉದ್ದೇಶಿಸಿದೆ. ಶ್ರೀರಾಮರಂಗಾಪುರ ಭಾಗದಲ್ಲಿ ಮೆಣಸಿನಕಾಯಿ ಶಿಥಲ ಗೃಹ ನಿರ್ಮಿಸಲು  ಸಕರ್ಾರ ಉತ್ಸುಕತೆ ತೋರಿದೆ. ಆದರೆ, ಜಮೀನು ನೀಡಲುರೈತರು ಮುಂದೆ ಬರುತ್ತಿಲ್ಲ ಎಂದರು. 

     ಗಂಗಾನಗರ, ಮುಲ್ಲಾರ ಓಣಿ, ಬಣಗಾರ ಓಣಿ, ಸುಣಗಾರ ಓಣಿ, ವೀರತ್ ಪೇಟೆ ಮೊದಲಾದ ಓಣಿಗಳಲ್ಲಿ ಶಾಸಕರು ಸಂಚರಿಸಿ ವಾಸ್ತವ ಚಿತ್ರಣ ವೀಕ್ಷಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಸ್.ಸುರೇಶ್, ಸಪ್ಪರದ ರಾಘವೇಂದ್ರ, ಭಟ್ಟ ಪ್ರಸಾದ್, ಮುಖಂಡರಾದ ಕರೇಕಲ್ ಮನೋಹರ, ಬಾರಕೀರ ಈರಪ್ಪ, ಜೆ.ಜಿ.ಬಸವರಾಜ, ಬಿ.ಜಾಫರ್, ವೀರಾಂಜನೇಯಲು, ಎಸ್.ಆರ್.ಭಾಷ, ಯೂನಿಸ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಜೆಇ ಗೋಪಾಲ್, ಲೆಕ್ಕಿಗ ರಮೇಶ್ ಬೆಳಂಕರ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ವೆಂಕೋಬಾ, ಗ್ರಾಲೆ ಆತೀಫ್, ಗಿರೀಶ್ಬಾಬು ಸೇರಿ ಅನೇಕರು ಉಪಸ್ಥಿತರಿದ್ದರು.