ಧಾರವಾಡ : ಮುಂಬರುವ ವರ್ಷಗಳಲ್ಲಿ ಪ್ರವಾಹ ಮತ್ತು ಬರಗಾಲದಂತಹ ದುರಂತಗಳು ಹೆಚ್ಚುತ್ತಲೇ ಹೋಗುವ ಅನಿವಾರ್ಯತೆಗೆ ನಾವು ತಲುಪಿದ್ದೇವೆ ಎಂದು ಕೃಷಿ ವಿಶ್ವವಿದ್ಯಾಲಯದ ಹವಾಮಾನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವಿ. ಎಚ್. ಪಾಟೀಲ ಇಲ್ಲಿ ಎಚ್ಚರಿಕೆ ನೀಡಿದರು.
ಕನರ್ಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಆಶ್ರಯದಲ್ಲಿ `ಮಳೆ.. ಮಳೆ.. ಈ ವರ್ಷ ಯಾಕಿಷ್ಟು ಮಳೆ...' ಎಂಬ ವಿಷಯದ ಬಗ್ಗೆ ಪರಿಣಿತ ಭಾಷಣವನ್ನು ಅವರು ಮಾತನಾಡುತ್ತಿದ್ದರು.
ಜಾಗತಿಕ ತಾಪಮಾನ ಹೆಚ್ಚುತ್ತಲೇ ಇರುವುದರಿಂದಾಗಿ ವಿಶ್ವದ ಮಳೆಗಾಲದ ಚಕ್ರದ ತೀವ್ರತೆಯಲ್ಲಿ ಏರುಪೇರಾಗಿದೆ. ಇದರಿಂದ ಪ್ರವಾಹ ಮತ್ತು ಬರಗಾಲ ಹೆಚ್ಚುತ್ತಲೇ ಹೋಗುವುದೇ ಹೊರತು ಹಿಂದಿನ ವರ್ಷಗಳ ಹಾಗೆ ಸುಖಿ ಮಳೆಗಾಲದ ದಿನಗಳನ್ನು ನೆನೆಸುವ ಸ್ಥಿತಿ ಮಾತ್ರ ಬರುತ್ತದೆ ಎಂದರು. ಹವಾಮಾನ ವೈಪರಿತ್ಯದಿಂದಾಗಿ ನಮ್ಮ ದೇಶದಲ್ಲಿ ಪ್ರತಿವರುಷ ಹದಿನೈದು ಬಿಲಿಯನ್ ಅಮೇರಿಕೆ ಡಾಲರ್ಗಳಷ್ಟು ಹಾನಿಯಾಗುತ್ತಲಿದೆ. ಇದಕ್ಕೆಲ್ಲ ಕಾರಣ ಜನಸಂಖ್ಯೆ ಹೆಚ್ಚಳ, ನೈಸಗರ್ಿಕ ಸಂಪನ್ಮೂಲಗಳನ್ನು ಮನುಷ್ಯ ತನ್ನ ಐಷಾರಾಮಿ ಜೀವನಕ್ಕೆ ಧ್ವಂಸ ಮಾಡುವ ಪ್ರಕ್ರಿಯೆಗಳೇ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. ಭೂಮಿಯ ಮೇಲ್ಪದರಾದ ಮಣ್ಣಿನಲ್ಲಿ ಅನೇಕ ಸೂಕ್ಷ್ಮಾಣು ಜೀವಿಗಳು ಇವೆ. ಇಂಥ ಒಂದು ಅಂಗುಲ ಮಣ್ಣು ತಯಾರಿಕೆಗೆ ನಾನೂರು ವರ್ಷಗಳೇ ಬೇಕು. ಆದರೆ ಇದು ಕೊಚ್ಚಿ ಹೋಗಲು ಒಂದು ದೊಡ್ಡ ಮಳೆಯೇ ಸಾಕು ಎಂದರು.
ಮನುಷ್ಯನ ಜೀವನ ಶೈಲಿ ಬದಲಾಗಿದೆ. ನದಿಗಳ ಪಾತ್ರ ಮತ್ತು ಕೆರೆ, ಹಳ್ಳ ಇವುಗಳ ಹರಿಯುವಿಕೆಯನ್ನು ತಡೆಗಟ್ಟಿ ಮಾನವ ತನ್ನ ಇರುವಿಕೆಗೆ ಸ್ಥಳ ದೋಚುತ್ತಿದ್ದಾನೆ ಎಂದು ಹೇಳಿ ವಿಷಾದಿಸಿದ ಅವರು, ಹೆದ್ದಾರಿಗಳಂತೆ ಪ್ರತಿ ನದಿ, ಹಳ್ಳ, ಕೆರೆಗಳ ಬದಿಗೆ ಗಿಡಗಳ ಮರಗಳ ಸಾಲು ಅವಶ್ಯ ಬೇಕೇಬೇಕು. ಇದರಿಂದ ಪ್ರವಾಹ ತಂತಾನೆ ನಿಯಂತ್ರಣ ಆಗುವುದಲ್ಲದೇ ಮಣ್ಣಿನ ಫಲವತ್ತತೆಯೂ ಸಹ ಹರಿದು ಹೋಗಲಾರದು.
ನಿಸರ್ಗದ ಸಂಗಡ ಹೊಂದಿಕೊಂಡು ಹೋದರೆ ನಷ್ಟ ಕಡಿಮೆ. ವಿರುದ್ಧ ಹೋದರೆ ಈ ವರ್ಷದ ಮಳೆಗಾಲದಂತೆ ಭಾರಿ ನಷ್ಟಕ್ಕೆ ಗುರಿಯಾಗಬೇಕಾದೀತು ಎಂದು ಎಚ್ಚರಿಸಿದರು. ಹಳ್ಳಿಗಳಿಂದ ನಗರಕ್ಕೆ ವಲಸೆ ಬರುವವರ ಪ್ರಮಾಣ ನಿಯಂತ್ರಣದಲ್ಲಿ ಇರಬೇಕು. ನಗರಗಳಲ್ಲಿ ಯೋಜನಾ ಪ್ರಾಧಿಕಾರಗಳು ನಿಯಮಕ್ಕೆ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿಯವರು ಮಾತನಾಡಿ, ನಾವು ಜಾಗೃತರಾಗಬೇಕಾಗಿದೆ. ನಮ್ಮ ಹಿರಿಯರು ಪೂರ್ವಜರು ನಿಸರ್ಗದೊಂದಿಗೆ ಬಾಳಿ ಬದುಕುತ್ತಿದ್ದರು. ಪ್ರಕೃತಿಯೇ ಅವರ ಉಸಿರಾಗಿತ್ತು. ಮಣ್ಣಿನಲ್ಲಿಯೇ ಹುಟ್ಟಿ, ಮಣ್ಣಿನಲ್ಲಿಯೇ ಬದುಕಿ ಕೊನೆಗೆ ಮಣ್ಣಿನಲ್ಲಿಯೇ ಒಂದಾಗುತ್ತಿದ್ದರು. ಇಂದು ಎಲ್ಲ ಬದಲಾಗುತ್ತಿದೆ. ನಿಸರ್ಗವನ್ನು ಅಸಡ್ಡೆ ಮಾಡುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಯಲ್ಲಿ ನಿಸರ್ಗ ಪ್ರಿಯತೆ ಮತ್ತು ರಕ್ಷಣೆಯ ಮನೋಭಾವ ಹೆಚ್ಚಿಸಬೇಕಾಗಿದೆ. ಇಂಥ ವಿಚಾರಗಳಲ್ಲಿ ಮಾರ್ಗದರ್ಶನವೂ ಬೇಕಾಗುತ್ತದೆ ಎಂದು ಹೇಳಿದರು.
ವಿಜ್ಞಾನ ಮಂಟಪದ ಸಂಚಾಲಕ ಮನೋಜ ಪಾಟೀಲ ಸ್ವಾಗತಿಸಿ, ವಂದಿಸಿದರು. ವಿಜ್ಞಾನ ಮಂಟಪದ ಸಲಹಾ ಸಮಿತಿ ಸದಸ್ಯ ವಸಂತ ಅಕರ್ಾಚಾರ ಹಾಗೂ ಸಂಘದ ಗೌರವ ಉಪಾಧ್ಯಕ್ಷ ಸೇತುರಾಮ ಹುನಗಂದ, ಮಹಾದೇವ ಸಿದ್ನಾಳ ಪುಸ್ತಕಾರ್ಪಣೆ ಮಾಡಿದರು. ವೇದಿಕೆ ಮೇಲೆ ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಉಪಸ್ಥಿತರಿದ್ದರು.
ಸಭೆಯಲ್ಲಿ ಶ್ರೀನಿವಾಸ ವಾಡಪ್ಪಿ, ರಾಜು ಪಾಟೀಲಕುಲಕಣರ್ಿ, ಮಧುಮತಿ ಸಣಕಲ್ಲ, ವೀರಣ್ಣ ಒಡ್ಡೀನ, ಜಿ.ಬಿ. ಹೊಂಬಳ, ಲಕ್ಷ್ಮಣ ಬಕ್ಕಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.