ಕಾರು ಮರಕ್ಕೆ ಡಿಕ್ಕಿ ಓರ್ವನ ಸಜೀವ ದಹನ

ಲೋಕದರ್ಶನವರದಿ

ರಾಣೇಬೆನ್ನೂರ 26: ವೇಗವಾಗಿ ಚಲಿಸುತ್ತಿದ್ದ ಕಾರೊಂದು ಏಕಾಏಕಿಯಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ತಗುಲಿದ್ದರಿಂದ ಚಾಲಕ ಸ್ಥಳದಲ್ಲಿಯೇ ಸಜೀವ ದಹನವಾದ ಘಟನೆ ತಾಲೂಕಿನ ಚಳಗೇರಿ ಗ್ರಾಮದ ಬಳಿ ಹೆದ್ದಾರಿ ಬಳಿ ನಡೆದಿದೆ.

  ಮೃತನನ್ನು ದಾವಣಗೇರಿ ಮೂಲದ ಮೃತ್ಯುಂಜಯ ಬನ್ಣದ(40)ಎಂದು ಗುರುತಿಸಲಾಗಿದೆ. ಈ ಬಗ್ಗೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕೆಣ ದಾಖಲುಗೊಂಡಿದೆ.