ಪಿ.ಯು.ಸಿ ಫಲಿತಾಂಶಗಳು: ದೇವಿಕ ಕಾಲೇಜ್ ವಿದ್ಯಾರ್ಥಿಗಳ ಸಾಧನೆ

ಲೋಕದರ್ಶನವರದಿ

ರಾಣೇಬೆನ್ನೂರು15: ಸ್ಥಳೀಯ ಪ್ರತಿಷ್ಠಿತ ಶ್ರೀವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ದೇವಿಕಾ ವಿಜ್ಞಾನ ಮಹಾವಿದ್ಯಾಲಯದ ದ್ವೀತಿಯ ಪಿಯುಸಿ ಪರೀಕ್ಷಾ ಫಲಿತಾಂಶವು ಶೇ.85 ರಷ್ಟಾಗಿದೆ. ಒಟ್ಟು 180 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 26 ವಿದ್ಯಾಥರ್ಿಗಳು ಅತ್ತುನ್ಯತ ಶ್ರೇಣಿ (ಡಿಸ್ಟಿಂಕ್ಷನ್),  98 ಪ್ರಥಮ, 31 ವಿದ್ಯಾಥರ್ಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಒಟ್ಟು 155 ವಿದ್ಯಾಥರ್ಿಗಳು ತೇರ್ಗಡೆ ಹೊಂದಿದ್ದಾರೆ. 

    ಗೌಸೀಯಾ ಹೊನ್ನಳ್ಳಿ (ಶೇ.95)  568 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಕವಿತಾ ಮಾಳಗುಡ್ಡಪ್ಪನವರ (ಶೇ.94)  ದ್ವಿತೀಯ, ಬಿಂದೂರಾಣಿ ಬೆಳಕೇರಿ (ಶೇ.93.6)  ತೃತೀಯ  ಸ್ಥಾನ ಪಡೆದಿದ್ದಾಳೆ. ಸಾಧನೆಗೈದ ಎಲ್ಲ ವಿದ್ಯಾಥರ್ಿಗಳಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಆರ್.ಪಾಟೀಲ, ಆಡಳಿತಾಧಿಕಾರಿ ವಿಜಯಾ ಪಾಟೀಲ, ಪ್ರಾಚಾರ್ಯ ದಯಾನಂದ ಹರಿಹರ ಅಭಿನಂದಿಸಿದ್ದಾರೆ.