ಡಿ.31 ರಂದು ಮಧ್ಯರಾತ್ರಿ ಹೊಸ ವರ್ಷದ ಹೆಸರಿನಲ್ಲಿ ನಡೆಯುವ ತಪ್ಪು ಆಚರಣೆ ತಡೆಯಲು ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಗೋಕಾಕ, 27: ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಡಿಸೆಂಬರ್ 31 ರಂದು ಮಧ್ಯರಾತ್ರಿ ಹೊಸ ವರ್ಷದ ಹೆಸರಿನಲ್ಲಿ ನಡೆಯುವ ತಪ್ಪು ಆಚರಣೆಯನ್ನು ತಡೆಯಬೇಕೆಂದು ಆಗ್ರಹಿಸಿ ಶನಿವಾರದಂದು ಹಿಂದು ಜನ ಜಾಗೃತಿ ಸಮಿತಿಯ ಕಾರ್ಯಕರ್ತರು ಗ್ರೇಡ-2 ತಹಶೀಲದಾರ ಎಸ್.ಕೆ.ಕುಲಕಣರ್ಿ ಅವರಿಗೆ ಮನವಿ ಸಲ್ಲಿಸಿದರು.

ಸದ್ಯ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ನಮ್ಮ ದೇಶದಲ್ಲಿಯೂ ಹೊಸ ವರ್ಷವನ್ನು ಯುಗಾದಿಯ ಬದಲು ಡಿಸೆಂಬರ್ 31 ರಂದು ಮಧ್ಯರಾತ್ರಿ 12 ಗಂಟೆಗೆ ಆಚರಿಸಿಸುತ್ತಿರುವ ಕೆಟ್ಟ ರೂಢಿಯಾಗಿದೆ. ಈ ರಾತ್ರಿ ಯುವಕರು ಮದ್ಯಪಾನ, ಅಮುಲು ಪದಾರ್ಥಗಳ ಸೇವನೆ ಮಾಡಿ ವೇಗದಿಂದ ವಾಹನಗಳನ್ನು ಓಡಿಸುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿವೆ. ಕೆಲವೊಂದು ಕಡೆ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಪ್ರದೂಷಣೆ ಮಾಡಲಾಗುತ್ತಿದೆ. ಕರ್ಕಶ ಧ್ವನಿವರ್ಧಕ ಹಚ್ಚಿ ಅದರ ತಾಳಕ್ಕೆ ಅಶ್ಲೀಲ ಅಂಗಪ್ರದರ್ಶನ ಮಾಡಿ ನೃತ್ಯ ಮಾಡಲಾಗುತ್ತದೆ.ಅವಾಚ್ಯ ಬೈಗೂಳಗಳನ್ನೂ ನೀಡ;ಆಗುತ್ತದೆ. ಯುವತಿಯರನ್ನು ಛೇಡಿಸುವ ಪ್ರಕರಣಗಳು ನಡೆದು ಕಾನೂನು ಸುವ್ಯವಸ್ಥೆ ಸಂದರ್ಭದಲ್ಲಿ ಗಂಭೀರ ಪರಿಸ್ಥಿತಿ ನಿಮರ್ಾಣವಾಗುತ್ತಿದೆ. ಇದರಿಂದಾಗಿ ಪೊಲೀಸರು ಮತ್ತು ಆಡಳಿತವರ್ಗದ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ.ಇಂತಹ ಪ್ರಕರಣಗಳಿಂದ ಅನೇಕ ನಾಗರಿಕರು, ಸ್ತ್ರೀಯರು, ಯುವತಿಯರು ಮನೆ ಹೊರಗೆ ಹೋಗುವುದು ಕಠಿಣವಾಗಿದೆ ಮತ್ತು ರಾಷ್ಟ್ರದ ಯುವಪೀಳಿಗೆ  ಅವನತಿಯ ಮಾರ್ಗದಲ್ಲಿದೆ. ಇಂತಹ ತಪ್ಪು ಪ್ರಕರಣಗಳನ್ನು ನಡೆಯದಂತೆ ರಾತ್ರಿ ಪೋಲಿಸರು ಗಸ್ತು ಪ್ರಾರಂಭಿಸಬೇಕು. ತಪ್ಪು ಆಚರಣೆ ಮಾಡುವ ಯುವಕರನ್ನು ಬಂಧಿಸಬೇಕು. ಡಿ.31ರಂದು ನಡೆಯುವ ತಪ್ಪು ಆಚರಣೆಗಳನ್ನು ಪ್ರತಿಬಂಧಿಸುವ ಆಂದೋಲನಕ್ಕೆ ಸಹಾಯ ಮಾಡಬೇಕೆಂದು ಮನವಿ ತಿಳಿಸಿದ್ದಾರೆ.

ಹಿಂದು ಜನಜಾಗೃತಿ ಸಮಿತಿಯ ಶ್ರೀಕಾಂತ ಹುಲ್ಲೋಳಿ, ಮಂಜುನಾಥ ಶಿರಾಳಕರ, ಸರಿತಾ ಮುಗಳಿ, ಕವಿತಾ ಹುಬಳಿಕರ, ಸಂತೋಷ ನಿಲಜಗಿ,ಜ್ಯೋತಿ ಬಾರಿಮನಿ, ಪಾರ್ವತಿ ಗುಲಗಂಜಿ, ಜ್ಯೋತಿ ಆಚಾರ್ಯ ಸೇರಿದಂತೆ ಇತರರು ಇದ್ದರು.