ಹೂವಿನಹಡಗಲಿ: ಸಿ.ಎಂ ಆಗಲು ಜನರ ಆಶೀರ್ವಾದ ಬೇಕು: ಸಿದ್ದರಾಮಯ್ಯ

ಲೋಕದರ್ಶನ ವರದಿ

ಹೂವಿನಹಡಗಲಿ 08: ಮತ್ತೆ ರಾಜ ರಾಜಕಾರಣದಲ್ಲಿ ಮುಖ್ಯಮಂತ್ರಿ ಆಗಲು ಜನರ ಆಶೀವರ್ಾದಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಮೈಲಾರದಲ್ಲಿ ಬುಧವಾರ ಕನಕ ಗುರುಪೀಠ ಶಾಖಾ ಮಠದ ಏಳುಕೋಟಿ ಭಕ್ತರ ಕುಟೀರ ಲೋಕಾರ್ಪಣೆ, ಸ್ಪಟಿಕ ಶಿವಲಿಂಗ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿ ಮತ್ತೆ ಜನರು ಆಶೀರ್ವಾದ  ಮಾಡಿದರೆ ಮುಖ್ಯಮಂತ್ರಿ ಆಗ್ತೀನಿ ಎಂದರು.

1992ರಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡಿ ಕುರುಬ ಸಮಾಜದಿಂದ ಸುಮಾರು 70ರಿಂದ80 ಲಕ್ಷ ದೇಣಿಗೆ ಸಂಗ್ರಹಿಸಿ ಕಾಗಿನೆಲೆಯಲ್ಲಿ ಗುರುಪೀಠ ನಿಮರ್ಿಸಲಾಗಿದೆ. ಕೆಲವರು ಟೀಕೆ ಮಾಡುವರು ಮೂರು ಪೈಸೆ ಕಾಸು ಕೊಡುಗೆ ಇಲ್ಲ ಎಂದು ಪರೋಕ್ಷವಾಗಿ ಈಶ್ವರಪ್ಪರ ಹೆಸರು ಹೇಳದೇ ಆರೋಪಿಸಿದ ಅವರು ಇತಿಹಾಸ ಗೊತ್ತಿಲ್ಲದವರು ಭವಿಷ್ಯನಿರ್ಮಾಣ  ಅಸಾಧ್ಯ ಎಂದರು.ಹಿಂದುಳಿದ, ಶೋಷಿತ ವರ್ಗದ ಮಕ್ಕಳು ಸಹ ಗುಣಮಟ್ಟದ ಶಿಕ್ಷಣವನ್ನು ಕೊಡಬೇಕು ಜತೆಗೆ ಜಾತಿವ್ಯವಸ್ಥೆ,ಮೂಢನಂಬಿಕೆ ಹೋಗಬೇಕು ಎಂದರು.

ಸಚಿವ ಪಿ.ಟಿ.ಪರಮೇಶ್ವರನಾಯ್ಕ, ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು. ಸಮಾಜದ ಅಧ್ಯಕ್ಷ ಗುರುವಿನ ಕೊಟ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಹೊಸದುರ್ಗ ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮಿಜಿ, ತಿಂಥಣಿ ಸಿದ್ದರಾಮನಂದಪುರು ಸ್ವಾಮಿಜಿ ಸಾನಿಧ್ಯವಹಿಸಿದ್ದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮಿಜಿ ಪ್ರಾಸ್ತಾವಿಕ ಮಾತನಾಡಿದರು.

ಶಾಸಕರಾದ ಭೀಮಾನಾಯ್ಕ, ಎಸ್.ರಾಮಪ್ಪ, ವಿಧಾನ ಪರಿಷತ ಸದಸ್ಯ ಪ್ರಸನ್ನಕುಮಾರ, ಮಾಜಿ ಸಂಸದ ವಿರುಪಾಕ್ಷಪ್ಪ, ಮಾಜಿ ಸಚಿವ ಬಸವರಾಜಶಿವಣ್ಣ, ಮಾಜಿ ಶಾಸಕ ಸೋಮಶೇಖರ, ಬಸವರಾಜ ಹಿಟ್ನಾಳ, ಹಾವೇರಿ ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣ,ಜಿ.ಪಂ.ಸದಸ್ಯ ಎಸ್.ಕೊಟ್ರೇಶ, ಸಮಾಜದ ಮುಖಂಡರಾದ ಎಂ.ಪರಮೇಶ್ವರಪ್ಪ, ಬಿ.ಹನುಮಂತಪ್ಪ, ಫಕ್ಕೀರಪ್ಪ, ಈಟಿ.ಲಿಂಗರಾಜ, ಈಟಿ.ಹನುಮೇಶ, ಮಲ್ಲಿಕಾರ್ಜುನ, ಗೋವಿಂದಪ್ಪ, ಕರ್ನಾಟಕದ  ಗೊರವಯ್ಯ ರಾಮಣ್ಣ,ತಾಲೂಕು ಕುರುಬರ ಸಂಘದ ಅಧ್ಯಕ್ಷ ಹೆಚ್.ಬೀರಪ್ಪ ಇತರರಿದ್ದರು. ಈ ಸಂದರ್ಭದಲ್ಲಿ ದಾನಿಗಳ ನಾಮಫಲಕವನ್ನು ಸಚಿವ ಪಿ.ಟಿ.ಪರಮೇಶ್ವರನಾಯ್ಕ ಉದ್ಘಾಟಿಸಿದರು.ದಾನಿಗಳನ್ನು ಸನ್ಮಾನಿಸಲಾಯಿತು.