ಹೂವಿನಹಡಗಲಿ: ಹೊಳಗುಂದಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಸಪ್ತ ಭಜನೆ

ಲೋಕದರ್ಶನ ವರದಿ

ಹೂವಿನಹಡಗಲಿ 27: ತಾಲೂಕಿನ ಹೊಳಗುಂದಿ ಗ್ರಾಮದ ಆರಾಧ್ಯದೈವ ಶ್ರೀಸಿದ್ದೇಶ್ವರ ದೇವಸ್ಥಾನದಲ್ಲಿ ಮಡಿಸ್ನಾನ ಮಾಡಿ ಅರೆಬೆತ್ತಲೆಯಲ್ಲಿ ರೈತರು ನಿರಂತರ ಹಗಲು-ರಾತ್ರಿ ಏಳು ದಿನಗಳ ಕಾಲ ಸಪ್ತ ಭಜನೆ ಮಾಡುವ ಮೂಲಕ ವರುಣನ ಓಲೈಕೆಗೆ ಮುಂದಾಗಿದ್ದಾರೆ.

ಗ್ರಾಮದ ಆರಾಧ್ಯದೈವ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ವೀರೇಶ್ವರ ಭಜನಾ ಸಂಘದವರು, ಗ್ರಾಮಸ್ಥರು ಪ್ರತಿನಿತ್ಯ  ನಿರಂತರ ದೇವಸ್ಥಾನದಲ್ಲಿ ಯುವಕರು ಸಪ್ತ ಭಜನೆ ಮಾಡುತ್ತಾ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ  ಕೆಂಪು ಜಮೀನಿನಲ್ಲಿ ಈಗಾಗಲೇ ಬಿತ್ತಿದ ಬೆಳೆಗೆ ಹಾಗೂ ಇನ್ನು ಬಿತ್ತನೆಗಾಗಿ ಮಳೆಯ ಅಗತ್ಯವಾಗಿ ಬೇಕಾಗಿರುವುದರಿಂದ ಮಳೆಗಾಗಿ ತಾಲೂಕಿನಲ್ಲಿ ರೈತರು ವಿವಿಧ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವರುಣನಿಗೆ ಮೊರೆಯಿಡುತ್ತಿದ್ದಾರೆ. ಈಗಾಗಲೇ ಬಾವಿಹಳ್ಳಿ, ಗ್ರಾಮದಿಂದ ರೈತರು ಸಪ್ತಭಜನೆಯಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ.

ಇಲ್ಲಿನ ದೇಗುಲದ ಶ್ರೀಸಿದ್ದಲಿಂಗೇಶ್ವ ಸ್ವಾಮಿಗಳು, ದೇಗುಲ ಕಮಿಟಿ ಅಧ್ಯಕ್ಷ ಎಸ್.ಮಹೇಶ್ವರಪ್ಪ,ಕಾರ್ಯದರ್ಶಿ ಬಿ.ವೀರೇಶೆ,  ಎಂ.ಗುರುಸಿದ್ದಪ್ಪ, ಎಂ.ವೀರಭದ್ರಪ್ಪ, ಎಚ್.ಎಂ.ಮಲ್ಲಿಕಾರ್ಜುನಯ್ಯ ಯು.ಎಂ.ಮಹಾಸ್ವಾಮಿ, ಪರಮೇಶ್ವರಪ್ಪ, ಎಂ.ವಾಮದೇವಪ್ಪ, ಎಚ್.ಸಿದ್ಲಿಂಗಪ್ಪ, ಕೆ.ಕೊಟ್ರೇಶ ಸೇರಿದಂತೆ ನಾನಾ ಯುವಕ ಸಂಘದ ಪದಾಧಿಕಾರಿಗಳು, ಭಜನ ಸಂಘದವರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ದಿನ ನಿತ್ಯ ದಾಸೋಹ ಕಾರ್ಯಕ್ರಮ ನಡೆದಿದೆ.ಗುರುವಾರ ಸ್ವಲ್ಪ ತುಂತುರು ಮಳೆ ಪ್ರಾರಂಭವಾಗಿದೆ.

ಕಳೆದ ಒಂದು ತಿಂಗಳಿಂದ ಮಳೆ ಬಾರದೇ ಇರುವುದರಿಂದ ಮುಂಗಾರು ಬಿತ್ತನೆಯಾದ ನಾನಾ ಬೆಳೆಗಳು ಒಣಗುತ್ತಿದ್ದು ಹಾಗೂ ಬಿತ್ತನೆಗಾಗಿ ರೈತರು ಇದೀಗ ವರುಣನ ಕೃಪೆಗಾಗಿ ಗ್ರಾಮದಲ್ಲ್ಲಿ ಮಳೆಗಾಗಿ ಪ್ರಾರ್ಥಿಸಿ  ಗುಡಿ ಕಲ್ಲಿಗೆ ನೀರೆರೆಯುವುದು,ಗುಜರ್ಿ ಹೊರುವುದು ಗುರ್ಜಿ  ಪೂಜೆ, ಮಹಿಳೆಯರು ಚನ್ನಮ್ಮನ ಪದ ಸೇರಿದಂತೆ ಹಲವಾರು ಧಾಮರ್ಿಕ ಆಚರಣೆ ನಡೆದು ಇದೀಗ ಹೊಳಗುಂದಿಯಲ್ಲಿ 7ದಿನಗಳು ಅರೆ ಬೆತ್ತಲೆ ಸಪ್ತ ಭಟನೆ ನಡೆಯುತ್ತಿದೆ.