ಹೂವಿನಹಡಗಲಿ: ಮುಕ್ತಿ ರಥ ವಾಹನ ಲೋಕಾರ್ಪಣೆ

ಲೋಕದರ್ಶನ ವರದಿ

ಹೂವಿನಹಡಗಲಿ 25: ಇಲ್ಲಿನ ಪುರಸಭೆಯ 14ನೇ ಹಣಕಾಸಿನ ಯೋಜನೆ ಅಡಿಯಲ್ಲಿ 10.85 ಲಕ್ಷ ವೆಚ್ಚದಲ್ಲಿ ಉಚಿತ ಮುಕ್ತಿ ರಥವಾಹನವನ್ನು ಸಚಿವ ಪಿ.ಟಿ.ಪರಮೇಶ್ವರನಾಯ್ಕ ಪಟ್ಟಣದ ನಾಗರಿಕರಿಗೆ ಲೋಕಾರ್ಪಣೆಯನ್ನು ಮಾಡಿದರು.

ಪಟ್ಟಣದಲ್ಲಿ ಜನ ಸಂಖ್ಯೆ ಹೆಚ್ಚುತ್ತಿದ್ದಂತೆ ಸ್ಮಶಾನಕ್ಕೆ ಶವವನ್ನು ತೆಗೆದುಕೊಂಡು ಹೋಗಲು ನೂತನ ಮುಕ್ತಿ ರಥವಾಹನವನ್ನು ಸಚಿವರು ಚಾಲನೆ ನೀಡಿ ಮಾತನಾಡಿದ ಅವರು ಈಗಾಗಲೇ ಸ್ಮಶಾನ ಮೂಲ ಭೂತ ಸೌಲಭ್ಯವನ್ನು ಕಲ್ಪಿಸಲು 1ಕೋಟಿ ಅಭಿವೃದ್ದಿ ಅನುದಾನ ಬಿಡುಗಡೆಯಾಗಿದೆ.ಸಾರ್ವಜನಿಕರು ಹಗಲು-ರಾತ್ರಿ ಅಂತ್ಯಕ್ರಿಯೆ ಮಾಡಲು ಬೆಳಕಿನ ವ್ಯವಸ್ಥೆ,ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಲಾಗಿದೆ ಎಂದರು. ತಹಶೀಲ್ದಾರ ಕೆ.ರಾಘವೇಂದ್ರರಾವ್, ಮುಖಂಡರಾದ ಬಸವನಗೌಡ ಪಾಟೀಲ, ಸೊಪ್ಪಿನ ಮಂಜುನಾಥ, ಕೆ.ಎಸ್.ಶಾಂತನಗೌಡ, ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ವೀರಣ್ಣ, ಆರೋಗ್ಯ ನಿರೀಕ್ಷಕ ಶ್ರೀನಿವಾಸ ಇದ್ದರು.