ಲೋಕದರ್ಶನ ವರದಿ
ಹೂವಿನಹಡಗಲಿ 12: ಕಾಲ ಎಷ್ಟೇ ಮುಂದುವರಿದರೂ ಆಧುನಿಕ ಜೀವನ ಪದ್ದತಿ ಕಂಡು ಬಂದರೂ ಭಕ್ತರು ತಮ್ಮದೇ ರೀತಿಯಲ್ಲಿ ಭಕ್ತಿಯ ಅರ್ಪಣೆ ಮಾಡುತ್ತಿದ್ದಾರೆ ಎಂದು ಮುಂಡರಗಿಯ ಡಾ.ಅನ್ನದಾನಿಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಬುಧವಾರ ಶಂಕರಸ್ವಾಮಿ ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡ ಸೋಮಶಂಕರ ಸ್ವಾಮೀಜಿಗೆ ಚಿನ್ಮಯ ಅನುಗ್ರಹ ದೀಕ್ಷೆ ನೀಡಿ ಅವರು ಮಾಡತನಾಡಿದ ಅವರು ಈಚೆಗೆ ನಾನಾ ಕಾರಣಗಳಿಂದ ಸಮಾಜದ ಸಾಮರಸ್ಯ ಹದಗೇಡುತ್ತಿದೆ ಎಂದರು.
ಹೊಸಪೇಟೆಯ ಡಾ.ಸಂಗನಬಸವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ಮಠಕ್ಕೆ ಅನುಭವಿ ಸ್ವಾಮೀಜಿ ದೊರೆತಿರುವುದು ಇಲ್ಲಿನ ಭಕ್ತರ ಭಾಗ್ಯ ಹಿರಿಯ ಸ್ವಾಮೀಜಿ ಶಂಕರಸ್ವಾಮೀಜಿ ಮಾರ್ಗದರ್ಶನದಲ್ಲಿ ಶರಣ ಸಂಸ್ಕೃತಿ ಬೆಳೆಸುವ ಕೆಲಸವನ್ನು ಮುಂದುವರಿಸಬೇಕು ಎಂದರು,
ಮಠದ ಶಂಕರಸ್ವಾಮೀಜಿ, ನಂದಿಪುರ ಪುಣ್ಯಕ್ಷೇತ್ರ ಮಹೇಶ್ವರ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಚನ್ನಬಸವಸ್ವಾಮೀಜಿ, ಗದ್ದಿಕೆರೆ ಹಿರೇಮಠದ ಚರಂತೇಶ್ವರ ಸ್ವಾಮೀಜಿ, ಮೈನಹಳ್ಳಿ ಸಿದ್ದೇಶ್ವರ ಸ್ವಾಮೀಜಿ, ಹಂಪಸಾಗರ ಶಿವಲಿಂಗಸ್ವಾಮೀಜಿ, ನುಗ್ಗೇನಹಳ್ಳಿ ಮಹೇಶ್ವರ ಸ್ವಾಮೀಜಿ,ಹೊಸಹಳ್ಳಿ ಶಂಭುಲಿಂಗ ಸ್ವಾಮೀಜಿ, ಲಿಂಗನಾಯ್ಕನಹಳ್ಳಿ ಚನ್ನವೀರಸ್ವಾಮೀಜಿ, ಗವಿಮಠದ ಡಾ.ಹಿರಿಶಾಂತವೀರಸ್ವಾಮೀಜಿ, ಹಾಲಶಂಕರ ಸ್ವಾಮೀಜಿ ಇದ್ದರು. ಪಟ್ಟಾಧಿಕಾರ ಮಹೋತ್ಸವದ ಸಮಿತಿ ಪದಾಧಿಕಾರಿಗಳು ಇದ್ದರು. ಪಟ್ಟಾಧಿಕಾರ ಮಹೋತ್ಸವ ನಂತರ ಗ್ರಾಮದ ಮುಖ್ಯ ಬೀದಿಗಳಲ್ಲಿ ನೂತನ ಸ್ವಾಮೀಜಿಯ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು