ಬೈಲಹೊಂಗಲ: ಸರ್ಕಾರಿ ಶಾಲಾ ವಿದ್ಯಾರ್ಥಿ ಗಳಿಗೆ ಸಮವಸ್ತ್ರ ವಿತರಣೆ

ಬೈಲಹೊಂಗಲ 27: ತಾಲೂಕಿನ ಕ್ಲಸ್ಟರ್ ವ್ಯಾಪ್ತಿಯ ಸರ್ಕಾ ರಿ ಪ್ರಾಥಮಿಕ ಹಾಗೂ ಪ್ರಾಢಶಾಲೆಗಳ ವಿದ್ಯಾರ್ಥಿ ಗಳಿಗೆ ಸರ್ಕಾರದ ಪ್ರೋತ್ಸಾಹಕ ಉಚಿತ ಸಮವಸ್ತ್ರ ವಿತರಿಸುವ ಕಾರ್ಯಕ್ಕೆ ಸೋಮವಾರ ಪಟ್ಟಣದ ವಿದ್ಯಾನಗರದ ಸರ್ಕಾರಿ  ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಚಾಲನೆ ನೀಡಲಾಯಿತು.

      ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ.ಸುಲ್ತಾನಬಾಯಿ ಮಾತನಾಡಿ, ಶಾಲಾ ಪ್ರಾರಂಭ ಪೂರ್ವದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜವಾಬ್ದಾರಿಯಿಂದಲೇ ಉಚಿತ ಸಮವಸ್ತ್ರ ವಿತರಿಸಲಾಗುತ್ತಿದ್ದು ಯಾವದೇ ವಿದ್ಯಾಥರ್ಿ ವಂಚಿತರಾಗಬಾರದೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ನೇರವಾಗಿ ಆಯಾ ಶಾಲೆಗಳಿಗೆ ತಲುಪಿಸಲಾಗುತ್ತಿದೆ ಎಂದರು.

        ಮುಖ್ಯೋಪಾಧ್ಯಾಯ ಅರುಣ ಹೋಮಕರ ಅವರಿಗೆ ವಿದ್ಯಾಥರ್ಿಗಳಿಗೆ ವಿತರಿಸುವ ಬಟ್ಟೆಗಳನ್ನು ಹಸ್ತಾಂತರಿಸಲಾಯಿತು.

        ಸಿಆರ್ಪಿ ಪಿ.ಪಿ.ಸೊಂಟಕ್ಕಿ, ಎಂ.ಜಿ.ಬಾಗೇವಾಡಿ, ನಂ 1 ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಬಿ.ಡಿ.ತಮ್ಮಣ್ಣವರ, ವಿ.ಬಿ.ಹಿರೂರ, ಜಡ್.ಎ.ಪಠಾಣ, ಎಂ.ಕೆ.ಹಾರುಗೊಪ್ಪ, ಎ.ವಾಯ್.ಮಲ್ಲಾಡಿ, ಹಾಗೂ ವಿವಿಧ ಶಾಲೆಗಳ ಶಿಕ್ಷಕ/ಶಿಕ್ಷಕಿಯರು ಉಪಸ್ಥಿತರಿದ್ದರು.