ಆಕಸ್ಮಿಕ ದಾಳಿ; ತಂಬಾಕು ಪದಾರ್ಥ ವಶ

accidental attack; Possession of tobacco

ಆಕಸ್ಮಿಕ ದಾಳಿ; ತಂಬಾಕು ಪದಾರ್ಥ ವಶ 

ಬಳ್ಳಾರಿ 01: ಅಪರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ 100 ಮೀಟರ್ ಒಳಗಡೆ ತಂಬಾಕು  ಮಾರಾಟ ಮಾಡುತ್ತಿದ್ದ ಸ್ವಾಮಿ ಟೀ ಸ್ಟಾಲ್ ಮತ್ತು ಟಿಫನ್ ಸೆಂಟರ್ ಹೋಟೆಲಿನ ಅಂಗಡಿಯ ಮೇಲೆ ಆಕಸ್ಮಿಕ ದಾಳಿ ನಡೆಸಿ ಶಾಲೆಯ ಮುಂಭಾಗದಲ್ಲಿ ಮಾರಾಟ ಮಾಡುತ್ತಿದ್ದ ತಂಬಾಕು ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಇದೇ ಸಂದರ್ಭದಲ್ಲಿ ಯುವಕರಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಇನ್ನು ಮುಂದೆ ಶಾಲೆಯ ಮೀಟರ್ ಒಳಗಡೆ ತಂಬಾಕು ಮಾರಾಟ ಮಾಡದಂತೆ ಸೂಚಿಸಲಾಯಿತು.ಈ ಸಂರ್ದಭದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನೀರೀಕ್ಷಕ ಗಡ್ಡಂ ಗೋವಿಂದಪ್ಪ, ಜಿಲ್ಲಾ ಸಲಹೆಗಾರ  ಪ್ರಶಾಂತ್ ಕುಮಾರ, ಸಮಾಜ ಕಾರ್ಯಕರ್ತರಾದ ಸರಸ್ವತಿ, ಆಪ್ತ ಸಮಾಲೋಚಕರಾದ ಮಲ್ಲೇಶಪ್ಪ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ (ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾಧ್ಯಮ) ಮುಖ್ಯ ಗುರುಗಳಾದ ಗಿರಿಜಾ, ತಿಮ್ಮಾರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಶಂಭು, ಪೊಲೀಸ್ ಇಲಾಖೆಯ ಅನಿಲ್ ಹಾಜರಿದ್ದರು.