ಬೆಳಗಾವಿ, ಜೂ.1: ಭಾರತವನ್ನು 2022ರೊಳಗೆ ಮಲೇರಿಯಾ ಮುಕ್ತ ಮಾಡಬೇಕಾಗಿದ್ದು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ. ಎಂ. ಎಸ್. ಪಲ್ಲೇದ ಅವರು ಹೇಳಿದರು.
ಜಿಲ್ಲಾ ಮಟ್ಟದ ಮಲೇರಿಯಾ ಮಾಸಾಚರಣೆ ಪ್ರಯುಕ್ತ ಮಲಪ್ರಭಾ ನಗರ ಹಾಗೂ ವಡಗಾವಿಯ ಮಾಧವಪೂರದಲ್ಲಿ ಜೂ. 01 ರಂದು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಲೇರಿಯಾ ನಿಮರ್ೂಲನೆ ಕಾರ್ಯ "ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ" ಎನ್ನುವ ಘೋಷಣೆಯೊಂದಿಗೆ ಪ್ರಾರಂಭವಾಗಿದ್ದು ಮಲೇರಿಯಾ ನಿಮರ್ೂಲನೆಯಲ್ಲಿ ಪ್ರಮುಖವಾಗಿ ಸೊಳ್ಳೆಗಳ ನಿಯಂತ್ರಣ, ಜೈವಿಕ ಪರಿಸರ ನಿಯಂತ್ರಣ ಕ್ರಮಗಳು ಪರಿಸರ ನೈರ್ಮಲ್ಯ, ಪತ್ತೆಗೊಂಡ ರೋಗಿಗಳಿಗೆ ಶೀಘ್ರ ಚಿಕಿತ್ಸೆ ನೀಡುವುದು. ಮುಖ್ಯವಾಗಿ ಸಮುದಾಯದ ಸಹಭಾಗಿತ್ವದಿಂದ ಮಲೇರಿಯಾ ನಿಮರ್ೂಲನೆ ಸಾಧ್ಯವಾಗುವುದು. 2018 ರಲ್ಲಿ 24 ಕೇಸುಗಳಾಗಿದ್ದು ಮಲೆರಿಯಾ ಪ್ರಕರಣಗಳು ಇಳಿಮುಖವಾಗುತ್ತಿದೆ ಎಂದರು.
ರತನ ಮಾಸೇಕರವರು ಮಲೇರಿಯಾ ಮಾಸಾಚರಣೆಯ ಆರೋಗ್ಯ ಶಿಕ್ಷಣಕ್ಕೆ ಸಂಬಂಧಪಟ್ಟ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕೀಟ ಶಾಸ್ತ್ರ ತಜ್ಞರಾದ ಗಣಪತಿ ಬಾಕರ್ಿ, ಕೀಟ ಶಾಸ್ತ್ರ ತಜ್ಞರಾದ ಶಿಲ್ಪಾ ಹಳೆಮನಿ, ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಅಂಗನವಾಡಿ, ಆಶಾ ಕಾರ್ಯಕತರ್ೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಸವರಾಜ ಯಲಿಗಾರ ಸ್ವಾಗತಿಸಿದರು. ಸಿ.ಜಿ. ಅಗ್ನಿಹೋತ್ರಿ ಇವರು ವಂದಿಸಿದರು. ಅಹ್ಮದ ಕಲೀಮುಲ್ಲಾ ಇವರು ನಿರೂಪಿಸಿದರು.
ಜಾಥಾ ಕಾರ್ಯಕ್ರಮ:
ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಾದ ರಮೇಶ ಸೊಂಟಕ್ಕಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ. ಎಂ. ಎಸ್. ಪಲ್ಲೇದ, ಐ.ಸಿ.ಎಂ.ಆರ್. ಅಧಿಕಾರಿಗಳಾದ ಡಾ. ಬನಪ್ಪಾ ಉಂಗುರ, ಜಿಲ್ಲಾ ಸವರ್ೇಕ್ಷಣಾಧಿಕಾರಿಗಳಾದ ಡಾ. ಬಿ.ಎನ್.ತುಕ್ಕಾರ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಎಸ್. ಆರ್. ಡುಮ್ಮಗೋಳ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಅಂಗನವಾಡಿ, ಆಶಾ ಕಾರ್ಯಕತರ್ೆಯರು ಹಾಗೂ 14 ನೇ ನಂ ಶಾಲೆಯ ಶಿಕ್ಷಕ ವೃಂದದವರು, ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು.