ಕಾಗವಾಡ 28: ಕಳೆದ 17 ವರ್ಷಗಳಿಂದ ಅಥಣಿ ತಾಲೂಕಿನ ಬಡ ಕುಟುಂಬಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಅನೇಕ ಬಡ ಹೆಣ್ಣು ಮಕ್ಕಳಿಗೆ ಉಡುಗರೆ, ಬಟ್ಟೆ, ಶೈಕ್ಷಣಿಕ ಸಾಹಿತ್ಯ ಹೀಗೆ ಪ್ರತಿವರ್ಷ ಸುಮಾರು 20 ಲಕ್ಷ ರೂ.ಗಳಷ್ಟು ಸಾಹಿತ್ಯ ದಾನವಾಗಿ ನೀಡಿ ಸಹಾಯ ಹಸ್ತ ಚಾಚಿದ್ದಾರೆ. 510 ವಿದ್ಯಾಥರ್ಿಗಳನ್ನು ಹೊಂದಿರುವ ಉಗಾರದ ಜೈನ ಶಿಕ್ಷಣ ಸಂಸ್ಥೆಗೆ ಗಣಕಯಂತ್ರ, ಝೆರಾಕ್ಸ್ ಯಂತ್ರ, ಶೈಕ್ಷಣಿಕ ಸಾಹಿತ್ಯ ದಾನವಾಗಿ ನೀಡಿರುವ ಮಹಾವೀರ ಪಡನಾಡ ಇವರು ಇಂದಿನ ದಾನಶೂರಕರ್ಣ ಎಂದು ಜೈನ ಸಮಾಜ ಶಿಕ್ಷಣ ಸಂಸ್ಥೆ ನಿದರ್ೇಶಕ ಶೀತಲ ಪಾಟೀಲ ಹೇಳಿದರು.
ಮಂಗಳವಾರ ದಿ.27ರಂದು ಉಗಾರ ಖುರ್ದ ಜೈನ ಸಮಾಜ ಶಿಕ್ಷಣ ಸಂಸ್ಥೆ ಸಭಾ ಭವನದಲ್ಲಿ ವಿದ್ಯಾಥರ್ಿಗಳಿಗೆ ಅವಶ್ಯಕತೆ ಇರುವ ಗಣಕಯಂತ್ರಗಳು, ಝೆರಾಕ್ಸ್ ಯಂತ್ರ, ಶೈಕ್ಷಣಿಕ ಸಾಹಿತ್ಯ ದಾನಿಗಳಾದ ಮಹಾವೀರ ಪಡನಾಡ ಇವರು ಸಂಸ್ಥೆಯ ಆಧ್ಯಕ್ಷ ಅಣ್ಣಾಸಾಹೇಬ ಸಾಂಗಲೆ ಇವರಿಗೆ ನೀಡಿದರು.
ಅತಿಥಿಗಳಾಗಿ ಸಂಸ್ಥೆಯ ನಿದರ್ೇಶಕ ಮತ್ತು ಉಗಾರ ಬಿ.ಕೆ ಗ್ರಾಮದ ಪದ್ಮಾವತಿ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಶೀತಲ ಪಾಟೀಲ ಆಗಮಿಸಿ, ವಿದ್ಯಾಥರ್ಿಗಳಿಗೆ ವಿಶೇಷ ಮಾರ್ಗದರ್ಶನ ನೀಡಿದರು.
ಮಹಾವೀರ ಪಡನಾಡ ಇವರು ಮಾತನಾಡಿ, ಸಮಾಜದಲ್ಲಿ ಯಾವುದೇ ಜಾತಿ, ಮತ ಅನ್ನದೇ ಸಮಸ್ಯೆಯಲ್ಲಿದ್ದ ಬಡ ಕುಟುಂಬಗಳಿಗೆ ನೆರವಾಗಿ ದಾನನೀಡಿದಾಗ ನನ್ನ ಹೃದಯ ತುಂಬಿ ಬರುತ್ತಿದೆ. ನನ್ನ ತಂದೆ ದಿವಂಗತ ಬಾಬುರಾವ ಪಡನಾಡ ಇವರ ಸ್ಮರಣಾರ್ಥವಾಗಿ 17 ವರ್ಷಗಳಿಂದ ಬಡ ಕುಟುಂಬಗಳಿಗೆ ಸಹಾಯ ನೀಡುತ್ತಿದ್ದೇನೆ. ಇದು ನನಗೆ ತೃಪ್ತಿ ತಂದಿದೆ. ವಿದ್ಯಾಥರ್ಿಗಳು ನಾನು ಶಿಕ್ಷಣಕ್ಕಾಗಿ ನೀಡಿರುವ ಸಹಾಯ ಸದುಪಯೋಗವಾಗಬೇಕು. ಬಡ ಕುಟುಂಬದ ವಿದ್ಯಾಥರ್ಿಗಳು ಉನ್ನತ ಸ್ಥಾನದಲ್ಲಿ ಹೋದನಂತರ ನನ್ನ ಮನಸ್ಸಿಗೆ ತೃಪ್ತಿ ತರುತ್ತದೆ ಎಂದರು.
ಶಿಕ್ಷಣ ಸಂಸ್ಥೆಯ ನಿದರ್ೇಶಕ ಜಯೇಂದ್ರ ಶೆಟ್ಟಿ, ಸುನೀಲ ಪಡನಾಡ, ಅಪ್ಪಾಸಾಹೇಬ ಮಗದುಮ್ಮ, ಮನೋಜ ಮಾಲಗತ್ತೆ, ರಾಜೇಂದ್ರ ನಾಗಾವೆ, ಕಾರ್ಯದಶರ್ಿ ಚಂದ್ರಕಾಂತ ಉಪಾಧ್ಯೆ, ಪ್ರೌಢ ವಿಭಾಗದ ಮುಖ್ಯಾಧ್ಯಾಪಕ ಪ್ರಶಾಂತ ಮೋಳೆ, ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಿಕೆ ಪೂಣರ್ಿಮಾ ಬೆಳಗಲಿ, ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು.