ಯುವಕವಿ ಎಸ್.ಡಿ.ದೊಡ್ಡಚಿಕ್ಕಣ್ಣನವರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ

ಲೋಕದರ್ಶನವರದಿ

ರಾಣೇಬೆನ್ನೂರ ಏ.23: ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಾಣಾವರ ಘಟಕವು, ಕಳೆದ 21 ರಂದು ರವಿವಾರ ರಾಜ್ಯಮಟ್ಟದಲ್ಲಿ ವಕೀಲರ ವಿಶೇಷ ಕವಿಗೋಷ್ಠಿ, ಯುವಕಾವ್ಯ ಪ್ರತಿಭಾ ಪ್ರಶಸ್ತಿ ಮತ್ತು ಕನ್ನಡ ಸೇವಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭವು ಆಯೋಜಿಸಿತ್ತು. ಹಾವೇರಿ ಜಿಲ್ಲೆಯ ಕವಿ, ಕಾವ್ಯ, ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮೇರೆದ ರಾಣೇಬೆನ್ನೂರು ನಗರದ ನ್ಯಾಯವಾಧಿ, ಯುವ ಕವಿ ಎಸ್.ಡಿ.ದೊಡ್ಡಚಿಕ್ಕಣ್ಣನವರ ಅವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಸಾರ್ವನಿಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. 

   ಈ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಾಹಿತ್ಯ ಕೊಟ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಎಂ.ತಿಮ್ಮಯ್ಯ, ಲೇಖಕಿ ಶ್ರೀಮತಿ ಇಂದಿರಾ ಕೃಷ್ಣಪ್ಪ. ಗ್ರಾಪಂ ಅಧ್ಯಕ್ಷ ಎನ್.ಚೆನ್ನಕೇಶವಮೂತರ್ಿ. ಅನಿಕೇತನ ಕನ್ನಡದಳ ಅಧ್ಯಕ್ಷ ಮಾಯಣ್ಣ, ಸಾಹಿತಿ ಶ್ರೀನಿವಾಸ ಮೂತರ್ಿ, ಸಮಾಜಸೇವಕಿ ಎಂ,ಭಾಗ್ಯದೇವಿ, ಈ ಗಂಗಾಧರ, ವೈ.ಬಿ.ಎಚ್.ಜಯದೇವ್, ಈ ರವೀಶ ಹಿರಿಯೂರು ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.