ಢಫಳಾಪುರ ಶಾಲೆಯಲ್ಲಿ ಯುವ ದಿನಾಚರಣೆ
ರನ್ನ ಬೆಳಗಲಿ 15: ರನ್ನ ಬೆಳಗಲಿಯ ಪಟ್ಟಣದ ಢಪಳಾಪುರ ವಿದ್ಯಾ ವಿಹಾರ ಸಿಬಿಎಸ್‌ಸಿ ಶಾಲೆಯಲ್ಲಿ ದಿ. 12ರ ರವಿವಾರದಂದು ಭಾರತದ ಯುವಕರಿಗೆ ಹಾಗೂ ಜಗತ್ತಿಗೆ ಆದರ್ಶ ಪ್ರಾಯರಾದ, ವೇದಾಂತದ ಕುರಿತು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಏಕಗಮ್ಯಾನಂದ ನಿಜಲಿಂಗೇಶ್ವರ ಸ್ವಾಮೀಜಿಯವರು ಸ್ವಚ್ಛತೆಯ ಪ್ರಾಮುಖ್ಯತೆಯನ್ನು, ಸಮಾಜದ ಪ್ರಜ್ಞೆ , ದೇಶಭಕ್ತಿ , ಸೇವೆಯ ಕುರಿತಾಗಿ, ಹಸಿ ಕಸ ನಿರ್ವಹಣೆ, ಸಾವಯವ ಗೊಬ್ಬರದ ಮಹತ್ವತೆ ಇನ್ನು ಮೊದಲಾದವುಗಳ ಬಗ್ಗೆ ತಿಳಿಸಿಕೊಟ್ಟರು. ಅತಿಥಿಗಳಾಗಿ ಆಗಮಿಸಿದ್ದ ಅಕ್ಷಯಾ ಗೋಖಲೆಯವರು ರಾಷ್ಟ್ರ ನಿರ್ಮಾಣದ ಕುರಿತಾಗಿ, ವ್ಯಕ್ತಿತ್ವ ನಿರ್ಮಾಣದ ಬಗ್ಗೆ, ಯಶಸ್ವಿನ ಸೂತ್ರಗಳು ಮತ್ತು ದೃಷ್ಟಿಕೋನ, ವೀರ ಪುರುಷರ ಸಾಧನೆಗಳು ಅವರಿಗೆ ಪ್ರೇರಣೆಯಾದ ಸಂಗತಿಗಳು, ಕನಸಿನ ಬಗ್ಗೆ, ಶಿಸ್ತು, ದೃಢ ನಿರ್ಧಾರಗಳು ಇನ್ನು ಮೊದಲಾದ ವಿಷಯಗಳ ಬಗ್ಗೆ ಪ್ರೇರಣಾದಾಯಕ ಉಪನ್ಯಾಸವನ್ನು ನೀಡಿದರು.
ಅತಿಥಿ ಮಹೋದಯರು ಶಾಲೆಯಲ್ಲಿನ ಸಮಾಜ ವಿಜ್ಞಾನ ಮತ್ತು ಗಣಿತದ ಪ್ರಯೋಗಾಲಯಗಳನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ತಾಯಿ ಸರಸ್ವತಿ ದೇವಿಗೆ ನಮನಗಳನ್ನು ಸಲ್ಲಿಸಿ, ವೇದಿಕೆಯ ಕಡೆಗೆ ಆಗಮಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿದರು. ಏಕಗಮ್ಯಾನಂದ ಸ್ವಾಮೀಜಿ ಅವರು ರಾಷ್ಟ್ರೀಯ ಯುವ ದಿನದ ಕುರಿತು ಮಾತನಾಡಿದರು.
ಶಾಲೆಯ ವ್ಯವಸ್ಥಾಪಕ ವಿವೇಕ ಢಪಳಾಪುರ ಅವರು ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ, ಚಾಂಪಿಯನ್ ಹೌಸ್ ಪ್ರಶಸ್ತಿಯನ್ನು ಪ್ರಧಾನ ಮಾಡಿದರು ಜೊತೆಗೆ ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಸನ್ಮಾನವನ್ನು ಮಾಡಲಾಯಿತು.ಎಂಟನೇ ತರಗತಿಯ ವಿದ್ಯಾರ್ಥಿನಿ ಅನುಷಾ ಬಡಿಗೇರ ನಿರೂಪಿಸಿದರೆ, ಪ್ರಾರ್ಥನಾ ಗೀತೆಯನ್ನು ಸನ್ನಿಧಿ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಸ್ವಾಗತ ನೃತ್ಯವನ್ನು ಎಂಟನೇ ತರಗತಿಯ ವಿದ್ಯಾರ್ಥಿಗಳಿಂದ ನಡೆಯಿತು. ಆರನೇ ತರಗತಿಯ ವಿದ್ಯಾರ್ಥಿನಿ ನಂದಿತಾ ಚಿಮ್ಮಡ ಭಗವದ್ಗೀತೆಯ 12ನೆಯ ಅಧ್ಯಯನದ ಶ್ಲೋಕಗಳನ್ನು ಪಠಿಸಿದಳು. ಪೂರ್ವ ಪ್ರಾಥಮಿಕ ವಿಭಾಗದಿಂದ ಶ್ರೇಯಸ್ ಮತ್ತು ಶ್ರೇಣಿಕ್ ನಿಂದ ಕಾವ್ಯವಾಚನ ಮತ್ತು ಚಿಕಾಗೋದ ಸರ್ವಧರ್ಮ ಸಮಯದ ಕುರಿತಾಗಿ ನಿತಿನ್ ನಡೆಸಿಕೊಟ್ಟನು. ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ಆಲೋಚನೆಯ ನುಡಿಮುತ್ತುಗಳು ಸೃಜನ್ ಮತ್ತು ಪ್ರಪುಲ್ ನಿಂದ ನಡೆಯಿತು. ಕಾರ್ಯಕ್ರಮವು ವಂದನಾರೆ್ಣಯೊಂದಿಗೆ ಮುಕ್ತಾಯಗೊಂಡಿತು.