ಲೋಕದರ್ಶನ ವರದಿ
ಮುದಗಲ್ಲ 08: ಮಕ್ಕಳು ಕೇವಲ ಓದು-ಬರಹದಿಂದ ಸಮಾಜದಲ್ಲಿ ಗುರುತಿಸುವುದಕಿಂತಲೂ ಕ್ರೀಡೆಯಿಂದ ಉತ್ತಮ ಸಾಧನೆಮಾಡಬಹುದಾಗಿದೆ ಎಂದು ಮುದಗಲ್ಲ ಠಾಣೆಯ ಪಿ.ಎಸ್.ಐ ಜೆ.ದೊಡ್ಡಪ್ಪ ಹೇಳಿದರು.
ಪಟ್ಟಣದ ಮದರ್ ತೆರೆಸಾ ಶಾಲೆಯ ಆವರಣದಲ್ಲಿ ಸರಕಾರಿ ಉದರ್ು ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಮುದಗಲ್ಲ ವಲಯ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಡಿಮೆ ಅಂಕಗಳಿಸುವ ಮಕ್ಕಳನ್ನು ಪಾಲಕರು ಬೈದಾಡುವ ಬದಲಾಗಿ ಮಕ್ಕಳಿಗೆ ಯಾವ ವಿಷಯದಲ್ಲಿ ಅಭಿರುಚಿ ಇದೆ ಎಂಬುವುದನ್ನು ಕಾಣಬೇಕು, ಕ್ರೀಡೆ, ಸಂಗೀತ, ಹಾಸ್ಯ, ನಟನೆ, ಉತ್ತಮ ವ್ಗಾಮೀಯಾಗಬಹುದು, ಅಭಿನಯಗಳಂತಹ ಹವ್ಯಾಸಗಳಿಂದ ದೇಶದಲ್ಲಿ ಮಾತ್ರವಲ್ಲದೇ ಪ್ರಪಂಚದಲ್ಲಿಯೂ ಹೆಸರು ಮಾಡಬಹುದು ಎಂದರು. ಪುರಸಭೆ ಮುಖ್ಯಾಧಿಕಾರಿ ನರಸಿಂಹ ಮೂತರ್ಿ ಮಾತನಾಡಿ, ಕ್ರೀಡೆಯಿಂದ ಮಕ್ಕಳಲ್ಲಿ ಅಡಗೀರುವ ಪ್ರತಿಭೆಯನ್ನು ಗುರುತಿಸಬಹುದಾಗಿದೆ ಎಂದರು.
ಪ್ರಸ್ತಾವಿಕವಾಗಿ ಶಿಕ್ಷಣ ಇಲಾಖೆಯ ಅಧಿಕಾರಿ ಡಿ.ಜಿ. ಸಜ್ಜನ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸಲು ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿದೆ. ಮಕ್ಕಳಿಗೆ ಪಾಲಕರು ಆಟೋಟಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಮುದಗಲ್ಲ ವಲಯ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಮುದಗಲ್ಲ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರ ದಾವೂದಸಾಬ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಧ್ವಜಾರೋಹಣವನ್ನು ಸೈಯದ್ ಫಕ್ರುದ್ದೀನ್ ಸಾಬ ರವರು ನೇರವೇರಿಸಿಕೊಟ್ಟರು. ಕ್ರೀಡಾ ಜ್ಯೋತಿ ಎಸ್.ಆರ್.ರಸೂಲ್ ಸ್ವೀಕರಿದರು. ಪುರಸಭೆ ಸದಸ್ಯ ಅಮೀರ್ ಬೇಗ್ ಉಸ್ತಾದ್,
ಉದ್ಘಾಟನಾ ಸಮಾರಂಭದಲ್ಲಿ ಬಿಆರ್ಪಿ ಮಂಜುನಾಥ, ಶಿಕ್ಷಕಿ ಅಕ್ಕಮಾಹದೇವಿ. ಉಮೇಶ್ ಕುಲಕಣರ್ಿ ಶಿಕ್ಷಕರು ಮುನ್ನಬಾಯಿ, ಮಹ್ಮದ ಶಾದಿಕ್ ಅಲಿ, ಚಂದಾವಲಿಸಾಬ ಹಳೆಪೇಟೆ, ರಾಜಸಾಬ ಮಿಠಾಯಿ, ಮಾಜಿ ಪುರಸಭೆ ಸದಸ್ಯ ಬಾಷಸಾಬ, ಬಾಷಸಾಬ ಜಂಬಳಿ, ಹಾಗೂ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಜರಿದ್ದರು.