ಯೋಗಿ ನಾರೇಯಣ 299ನೇ ಜಯಂತ್ಯೋತ್ಸವ
ಬಳ್ಳಾರಿ 14: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಬಲಿಜ ಸಂಘ (ರಿ), ಬಳ್ಳಾರಿ ಇವರ ವತಿಯಿಂದ ಶುಕ್ರವಾರ ಯೋಗಿ ನಾರೇಯಣ ಯತೀಂದ್ರರ 299ನೇ ಜಯಂತ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಬೆಳಿಗ್ಗೆ 9.30 ಗಂಗೆ ವಡ್ಡರಬಂಡೆ ರಸ್ತೆಯಲ್ಲಿರುವ ಬಲಿಜ ಭವನದಿಂದ ಬೆಳ್ಳಿ ರಥದಲ್ಲಿ, ಡೊಳ್ಳು ಕುಣಿತ, ತಾಷ ವಾದ್ಯಗಳೊಂದಿ ಯೋಗಿ ನಾರೇಯಣ ಯತೀಂದ್ರರ ಭಾವಚಿತ್ರದೊಂದಿಗೆ ಮೆರವಣಿಗೆ ಪ್ರಾರಂಭಿಸಿ ನಗರದ ಮುಖ್ಯರಸ್ತೆಗಳಾದ ಕೆ.ಸಿ.ರಸ್ತೆ, ಇಂದಿರಾ ವೃತ್ತ, ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಮೆರವಣಿಗೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್, ಬಳ್ಳಾರಿ ಬಲಿಜ ಸಂಘದ ಆಧ್ಯಕ್ಷರಾದ ಎಸ್.ಮುರಳಿಕೃಷ್ಣ, ಬಳ್ಳಾರಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಕೆ. ರಮೇಶ್ ಬುಜ್ಜಿ, ಅನಿಲ್ ನಾಯ್ಡು, ಸೊರಗು ನಾಗರಾಜ್, ಗೋವಿಂದರಾಜುಲು, ಗಾಜುಲ ಶ್ರೀನಿವಾಸುಲು, ರಾಜೇಶ್, ರಂಗನಾಥ್, ಸತ್ಯನಾರಾಯಣ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.