ಆರೋಗ್ಯ ಸಮತೋಲನತೆಗೆ ಯೋಗವು ಅತ್ಯಂತ ಸಹಕಾರಿ- ರವೀಂದ್ರ ಬಿಜಾಪುರ
ರಾಣೇಬೆನ್ನೂರು 09: ಹೊಸ ವರ್ಷದ ಆರಂಭದಲ್ಲಿ ಬರುವ ರಥಸಪ್ತಮಿಯು ಸೂರ್ಯನು ತನ್ನ ಪಥವನ್ನು ಬದಲಾಯಿಸುವ ಮಹತ್ವದ ಕಾರ್ಯ ಇದಾಗಿದೆ. ಮನುಷ್ಯನ ಆರೋಗ್ಯಯುತ ಜೀವನ ಬದುಕಿಗೆ, ನಿತ್ಯವೋ ಯೋಗ, ದ್ಯಾನ, ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರ ಪ್ರಮುಖವಾಗಿದೆ ಎಂದು ಮಹಿಳಾ ಪತಂಜಲಿ ಜಿಲ್ಲಾ ಪ್ರಭಾರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಜ್ಯೋತಿ ಜಂಬಿಗಿ ಹೇಳಿದರು. ಅವರು ಇಲ್ಲಿನ ಆದಿಶಕ್ತಿ ದೇವಸ್ಥಾನದ ಯೋಗ ಕೇಂದ್ರದಲ್ಲಿ ಆಯೋಜಿಸಲಾಗಿದ್ದ, 108 ಸೂರ್ಯ ನಮಸ್ಕಾರ ಮತ್ತು ರಥಸಪ್ತಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ದಿನನಿತ್ಯವು ಒತ್ತಡದ ಜೀವನದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಅವರ ಮಾನಸಿಕ, ದೈಹಿಕ, ಮತ್ತು ಬೌದ್ಧಿಕ, ಸಮತೋಲನತೆಗೆ ಯೋಗವು ಅತ್ಯಂತ ಸಹಕಾರಿಯಾಗಿದೆ ಎಂದರು. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ, ರವೀಂದ್ರ ಬಿಜಾಪುರ ಅವರು ಮಾತನಾಡಿ, ವಾಣಿಜ್ಯ ನಗರವು ಸೇರಿದಂತೆ, ತಾಲೂಕಿನ 35ಕ್ಕೂ ಹೆಚ್ಚು ಗ್ರಾಮಾಂತರ ಪ್ರದೇಶದಲ್ಲಿನ ಯೋಗ ಕೇಂದ್ರಗಳಲ್ಲಿ ಯೋಗದ ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮನುಷ್ಯನ ನಿತ್ಯದ ವಿಕಾಸತೆಗೆ ಯೋಗ ಧ್ಯಾನ, ಪ್ರಾಣಯಾಮ ಇಂದಿನ ಅಗತ್ಯವಾಗಿದ್ದು ಬಾಬಾ ರಾಮದೇವ್ ಜಿ ಅವರ ಸಂಕಲ್ಪ ಸಮಗ್ರ ಭಾರತವೇ ಯೋಗ ಮಯವಾಗಬೇಕು ಎನ್ನುವುದಾಗಿದೆ ಅದರಂತೆ ನೂರಾರು ಯೋಗ ಸಾಧಕರು ನಿತ್ಯ ಯೋಗವು ಮಾಡುವುದರ ಮೂಲಕ ಆರೋಗ್ಯ ಜೀವನ ಶೈಲಿ ಅಳವಡಿಸಿಕೊಂಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಭಾರತ್ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ಆರ್.ಎನ್. ರಾಥೋಡ, ಯುವ ಪ್ರಭಾರಿ ಕೆ. ಜಿ. ದಿವಾಕರ ಮೂರ್ತಿ, ಮಹಿಳಾ ಪತಂಜಲಿ ಸಂಘಟನಾ ಪ್ರಭಾರಿ ಕವಿತಾ ಕುಬಸದ, ಖಜಾಂಚಿ ಲಲಿತಾ ಮೇಲಗಿರಿ, ಪ್ರಭಾರಿ ಮಹೇಶ್ವರಿ ಕುಬಸದ , ಲತಾ ಮಾಕನೂರ, ಮಂಡಲ ಪ್ರಭಾರಿ ವಜ್ರೇಶ್ವರಿ ಲದ್ವಾ, ಮಂಜುಳಾ, ರೇಖಾ ವರಮೂರ್ತಿ ಸೇರಿದಂತೆ ನೂರಾರು ಯೋಗ ಸಾಧಕರು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.