ಯೋಗ ನಮ್ಮ ಪ್ರಾಚೀನ ಭಾರತದ ಸಂಸ್ಕೃತೀಯ ಕೊಡುಗೆ: ಸಂಸದ ಕಾಗೇರಿ
Yoga is a cultural contribution of our ancient India: MP Kageri
ನೇಸರಗಿ 21 ; ಯೋಗವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿಗೆ ಮಹತ್ವ ಪಡೆದು ಪ್ರಪಂಚದ ಎಲ್ಲ ದೇಶಗಳಲ್ಲಿ ಆಚರಣೆಗೆ ಬರುತ್ತಿದ್ದು ಯೋಗವು ನಮ್ಮ ಪ್ರಾಚೀನ ಭಾರತದ ಸಂಸ್ಕೃತೀಯ ಕೊಡುಗೆ ಆಗಿದೆ ಎಂದು ಉತ್ತರ ಕನ್ನಡ (ಕೆನರಾ ) ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ಎಂ ಕೆ ಹುಬ್ಬಳ್ಳಿ ಪಟ್ಟಣದ ಶಿ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಆಯೋಜಿಸಲಾಗಿದ್ದ 12 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಮನುಷ್ಯನು ದೈಹಿಕವಾಗಿ, ಮಾನಸಿಕವಾಗಿ,ಸದೃಢವಾಗಿ ಇರಲು ನಾವು ನೀವೆಲ್ಲರೂ ಪ್ರತಿದಿನ ಯೋಗಾಸನ ಮಾಡುವದು ಅಗತ್ಯತೆ ಇದ್ದು ಪ್ರಸಕ್ತವಾಗಿ ಯುವಕರು, ವಿದ್ಯಾರ್ಥಿಗಳು ಯೋಗ ಅಭ್ಯಾಸದಲ್ಲಿ ಪ್ರತಿನಿತ್ಯ ಪಾಲ್ಗೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಕಿತ್ತೂರು ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಪಟ್ಟಣದ ಮುಖಂಡರು, ಶಿಕ್ಷಕರು, ಯುವಕರು, ವಿದ್ಯಾರ್ಥಿಗಳು, ಶಿಕ್ಷಕರು, ಉಪಸ್ಥಿತರಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 