ಲೋಕದರ್ಶನ ವರದಿ
ಅಥಣಿ 01: ಋಷಿ ಮುನಿಗಳ ನಾಡಾದ ಭಾರತದಲ್ಲಿ ಯೋಗ ಪ್ರಾಚೀನ ಕಾಲದಿಂದಲೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದ್ದು, ಇಂದು ಈಡೀ ಜಗತ್ತೇ ಭಾರತದತ್ತ ಹೊರಳಿ ನೋಡುವಂತೆ ಮಾಡಿದೆ ಎಂದು ಜೆ.ಇ ಶಿಕ್ಷಣ ಸಂಸ್ಥೆಯ ಕಾಯರ್ಾಧ್ಯಕ್ಷರಾದ ಅರವಿಂದರಾವ ದೇಶಪಾಂಡೆ ಹೇಳಿದರು.
ಇಲ್ಲಿಯ ಭೋಜರಾಜ ಕ್ರೀಡಾಂಗಣದಲ್ಲಿ ಶ್ವಾಸಗುರು ಶ್ರೀ ವಚನಾನಂದ ಅವರು ನಡೆಸಿಕೊಡುತ್ತಿರುವ ಯೋಗ ಶಿಬಿರದ ಉದ್ಘಾಟನೆಯನ್ನು ಸಸಿಗೆ ನೀರೆರೆಯುವ ಮೂಲಕ ನಡೆಸಿಕೊಡುತ್ತ, ಮೇಲಿನಂತೆ ಮಾತನಾಡಿ, ಹೊರದೇಶಗಳಿಗೆ ಭಾರತದಿಂದ ಯೋಗ ಶಿಕ್ಷಕರನ್ನು ತರಬೇತಿಗೊಳಿಸಿ ಕೊಡುವ ತುಂಬ ಮಹತ್ವದ ಜವಾಬ್ದಾರಿ ಭಾರತದ ಮೇಲಿದೆ ಎಂದರು.
ಶ್ವಾಸ ಗುರು ವಚನಾನಂದ ಸ್ವಾಮೀಜಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಈ ಸಮಯದಲ್ಲಿ ಪತಂಜಲಿ ಯೋಗ ಪೀಠದ ಕೃಷಿ ರಾಜ್ಯ ಪ್ರಭಾರಿ ಸಂಜಯ ಕುಸ್ತಿಗಾರ, ಯೋಗಶಿಕ್ಷಕರಾದ ಎಂ ಎ ಪಾಟೀಲ, ಶಿವಪುತ್ರ ಯಾದವಾಡ, ಅಜರ್ುನ ದೇವರು, ಸದಾಶಿವ ಚಿಕ್ಕಟ್ಟಿ, ಅಶೋಕ ಜಗದೇವ, ಶಿವಾನಂದ ಮಾಲಗಾಂವಿ ಉಪಸ್ಥಿತರಿದ್ದರು.ಯೋಗ ಗುರು ಎಸ್ ಕೆ ಹೊಳೆಪ್ಪನವರ ಸ್ವಾಗತಿಸಿದರು. ಡಾ ಆರ್ ಎಸ್ ದೊಡ್ಡನಿಂಪ್ಪಗೋಳ ನಿರೂಪಿಸಿದರು.