ಕೊಪ್ಪಳ 21: ಭಾರತ ದೇಶದಲ್ಲಿ ಹಿಂದಿನ ಕಾಲದಿಂದಲೂ ಬಂದಿರುವ ಯೋಗವು ಇಡೀ ವಿಶ್ವದ ಮನ್ನಣೆಯನ್ನು ಪಡೆದಿದ್ದು, ಯೋಗದಿಂದ ದೇಹವನ್ನಷ್ಟೇ ಅಲ್ಲ ಮನಸ್ಸನ್ನೂ ಕೂಡ ಗಟ್ಟಿಗೊಳಿಸಬಹುದಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಐದನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿಜಿರವರು 2015 ರಲ್ಲಿ ಯೋಗ ದಿನಾಚರಣೆಗೆ ಕರೆ ನೀಡಿದಾಗ ವಿಶ್ವದ ಎಲ್ಲಾ ರಾಷ್ಟ್ರಗಳು ಇದಕ್ಕೆ ಬೆಂಬಲವನ್ನು ವ್ಯಕ್ತ ಪಡಿಸಿದವು. ಇದೇ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ಭಾರತದಲ್ಲಷ್ಟೇ ಅಲ್ಲದೇ, ಜಗತ್ತಿನ ನೂರಾರು ದೇಶಗಳಲ್ಲಿ ಆಚರಿಸುತ್ತಿದ್ದಾರೆ. ಭಾರತ ಪರಿಚಯಿಸಿದ ಯೋಗದ ಮಹತ್ವದಿಂದಾಗಿ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಪ್ರತಿವರ್ಷ ಒಂದು ಮಹತ್ವದ ವಾಕ್ಯದೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ವರ್ಷ ``ನಿಸರ್ಗ ಸ್ನೇಹಿ ಯೋಗ'' ಎಂಬ ವಾಕ್ಯದೊಂದಿಗೆ ಯೋಗ ಆಚರಿಸುತ್ತಿರುವುದು ಮಹತ್ವದ ವಿಷಯವಾಗಿದೆ. ಒತ್ತಡದ ನಡುವೆ ಬದುಕು ಸಾಗಿಸುವ ಇಂದಿನ ಜೀವನ ಶೈಲಿಗೆ ಯೋಗ ಅವಶ್ಯಕವಾಗಿ ಬೇಕಾಗಿದ್ದು, ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗದಿಂದ ಅನೇಕ ರೋಗಗಳು ದೂರವಾಗಲಿವೆ ಮತ್ತು ಮಾನಸಿಕ ಆರೋಗ್ಯ ಸದೃಡತೆ ಹೊಂದುವುದರ ಜೊತೆಗೆ ಶಾಂತಿ, ಸಹನೆ ಮನೋಭಾವ ಬೆಳೆಯಲು ಸಾಧ್ಯವಾಗಲಿದೆ. ರಷ್ಯ ದೇಶದಲ್ಲಿ ಯೋಗ ಗುರುಗಳು ಬೇಕಾಗಿದ್ದಾರೆ ಎಂದು ಮಾಹಿತಿ ಬರುತ್ತಿದೆ ಎಂದರೆ ಯೋಗಕ್ಕೆ ಎಷ್ಟು ಮಹತ್ವವಿದೆ ಎಂಬುವುದು ನಾವು ತಿಳಿಯಬೇಕು. ಜಿಲ್ಲೆಯ ಆನೆಗುಂದಿಯು ಪ್ರಾಕೃತಿಕ ನೈಸಗರ್ಿಕ ತಾಣವಾಗಿದ್ದು, ಇಲ್ಲಿ ಯೋಗ ವಿದ್ಯಾಲಯ ಅಥವಾ ಇದಕ್ಕೆ ಸಂಬಂಧಿಸಿದ ಆಶ್ರಮ ಸ್ಥಾಪಿಸುವಂತೆ ಕೇಂದ್ರ ಸಕರ್ಾರಕ್ಕೆ ಮನವಿ ಸಲ್ಲಿಸುತ್ತೇನೆ. ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನದಲ್ಲಿ ದಿನದ ಕೆಲ ಸಮಯ ಯೋಗಕ್ಕೆ ಮೀಸಲಿಡುವುದು ಅಗತ್ಯವಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಮಾತನಾಡಿ, ದಿನನಿತ್ಯ ಯೋಗಾಭ್ಯಾಸ ಮಾಡುವವರು, ಇಡೀ ದಿನ ಹುರುಪಿನಿಂದ ಹಾಗೂ ಚೈತನ್ಯದಿಂದ ಕಾರ್ಯ ನಿರ್ವಹಿಸಲು ಸಾಧ್ಯವಿದೆ. ಯೋಗವು ಇಂದಿನ ಸಾಮಾಜಿಕ ಬದುಕಿನಲ್ಲಿನ ಒತ್ತಡಗಳನ್ನು ಕೆಲವೇ ನಿಮಿಷಗಳಲ್ಲಿ ನಿವಾರಿಸುವ ದಿವ್ಯ ಔಷಧಿಯಾಗಿದೆ. ಯೋಗದಿಂದ ಬದುಕಿನಲ್ಲಿ ಏಕಾಗ್ರತೆ ಹಾಗೂ ದೃಢ ಮನಸ್ಸು ಪಡೆಯಲು ಸಾಧ್ಯವಿದೆ. ಯೋಗದಿಂದ ಮಾತ್ರ ಏಕಾಗ್ರತೆ ಪಡೆಯಲು ಸಾಧ್ಯವಿದೆ. ರಕ್ತದೊತ್ತಡದಂತಹ ರೋಗಗಳನ್ನು ನಿಗ್ರಹಿಸಲು ಯೋಗ ಉತ್ತಮ ವಿಧಾನವಾಗಿದ್ದು, ಸಕರ್ಾರಿ ನೌಕರರು ಹೆಚ್ಚಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇದ್ದರಿಂದ ಒತ್ತಡದಿಂದ ಮುಕ್ತರಾಗಲು ಯೋಗ ಮಾಡುವುದು ಅಗತ್ಯವಾಗಿದೆ ಎಂದರು.
ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಅವರು ಮಾತನಾಡಿ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಶಾಂತ ಮನಸ್ಸು ಕಾಪಾಡಿಕೊಳ್ಳಲು ಯೋಗದಿಂದ ಸಾಧ್ಯ. ನಿರ್ಸಗ ಸ್ನೇಹಿ ಯೋಗ ಎಂಬ ಅಂಶದೊಂದಿಗೆ ಈ ವರ್ಷ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸ್ವಚ್ಛ ಭಾರತ ಯೋಜನೆಯಡಿ ಶೌಚಾಯಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಸದ್ಬಳಕೆಯಾಗಬೇಕು. ಜಿಲ್ಲಾ ಪಂಚಾಯತ್ ಯಿಂದ ಸ್ವಚ್ಛ ಮೇವ ಜಯತೆ ಅಭಿಯಾನ ಹಮ್ಮಿಕೊಂಡಿದ್ದು, ಇದರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯ ವತಿಯಿಂದ ಸಿದ್ಧಗೋಳಿಸಲಾದ ಐದನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪರಿಸರ ದಿನಾಚರಣೆ ಹಾಗೂ 2019-20ನೇ ಸಾಲಿನ ವಾಷರ್ಿಕ ಕ್ರೀಯಾ ಯೋಜನೆಯ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಸಮಾರಂಭಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೈ.ಜೆ. ಶಿರವಾರ ಹಾಗೂ ಕೊಪ್ಪಳದ ಯೋಗ ಗುರು ಅಶೋಕಸ್ವಾಮಿ ಹಿರೇಮಠ ಅವರು, ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾಥರ್ಿಗಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಸವರಾಜ ಕುಂಬಾರ, ಈಶ್ವರಿ ವಿಶ್ವವಿದ್ಯಾಲಯದ ಯೋಗಿನಿ ಅಕ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೂರಾರು ವಿದ್ಯಾಥರ್ಿಗಳು, ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ಸಂದರ್ಭದಲ್ಲಿ ವಿವಿಧ ಆಸನಗಳೊಂದಿಗೆ ಯೋಗಾಭ್ಯಾಸ ಮಾಡಿದರು.