ಲೋಕದರ್ಶನ ವರದಿ
ಕಾರವಾರ,19 : ಯುವ ಭಾರತ ಯೋಗ ಪ್ರಮುಖ ಆಕರ್ಷಣೆಯಾಗಲಿದೆ. ಆಯರ್ುವೇದ ಔಷಧಿ ಪದ್ಧತಿ ಆರೋಗ್ಯ ಕ್ಷೇತ್ರದಲ್ಲಿ ಪ್ರಧಾನವಾಗಿ ಜನರನ್ನು ತನ್ನತ್ತ ಸೆಳೆದುಕೊಳ್ಳಲಿದೆ ಎಂದು ಕಾರವಾರ ಉಪ ವಿಭಾಗದ ಸಹಾಯಕ ಕಮಿಷನರ್ ಅಭಿಜಿನ್ ಬಿ. ಆಶಯ ವ್ಯಕ್ತಪಡಿಸಿದರು.
ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ನಿಂದ ನಗರದ ಕಾಜುಬಾಗ ಮಹಾಸತಿ ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಅವರು ಭಾನುವಾರ ಮಾತನಾಡಿದರು.
ಪಾಶ್ಚಾತ್ಯ ಔಷಧಿ ಪದ್ಧತಿಯ ಬಗೆಗೆ ಜನರಲ್ಲಿ ಹೆಚ್ಚು ಒಲವಿತ್ತು. ಆದರೆ, ಅದರಿಂದ ಆಗುವ ಕೆಲವು ಅಡ್ಡ ಪರಿಣಾಮಗಳ ಕುರಿತು ಜನರಿಗೆ ಈಗೀಗ ಅರ್ಥವಾಗುತ್ತಿದೆ. ನಿಧಾನವಾಗಿ ಯೋಗ, ಆಯುವರ್ೇದ ಪದ್ಧತಿಯತ್ತ ಯುವ ಪೀಳಿಗೆ ಆಸಕ್ತಿ ತೋರುತ್ತಿದೆ.
ಪ್ರಾಣಾಯಾಮದಿಂದ ಮಾನಸಿಕ ಒತ್ತಡ ದೂರಮಾಡಿಕೊಳ್ಳಬಹುದು. ಪ್ರತಿಯೊಬ್ಬರ ಸ್ವಸ್ತ ಜೀವನಕ್ಕೆ ಯೋಗ ಅತ್ಯಗತ್ಯ ಎಂದರು.
ರಾಮಕೃಷ್ಣಾಶ್ರಮದ ಸ್ವಾಮಿ ಭವೇಶನಂದಜೀ ಸಾನ್ನಿಧ್ಯ ವಹಿಸಿದ್ದರು. ಮಹಾಸತಿ ಕಲ್ಯಾಣ ಮಂಟಪದ ಮಾಲೀಕ ದೀಪಕ ಅಣ್ವೇಕರ್, ಭಾರತ ಸ್ವಾಭಿಮಾನ ಟ್ರಸ್ಟ್ನ ಜಿಲ್ಲಾ ಪ್ರಭಾರಿ ರಾಮಚಂದ್ರ ಹೆಗಡೆ, ಸಂಘಟನಾ ಪ್ರಭಾರಿ ರಘುರಾಮ ಹೆಗಡೆ, ಪತಂಜಲಿ ಯೋಗ ಸಮಿತಿ ಶ್ರೀನಾಥ ಜಿ.,ಯಮುನಾ ಶೇಟ್,ಗೋದಾವರಿ ಇದ್ದರು.
ವಾರದಲ್ಲಿ 3 ಕೆಜಿ ಇಳಿಕೆ:
ಬೆನ್ನು ನೋವು, ನಿದ್ರಾ ಹೀನತೆ ಹಾಗೂ ತೂಕ ಇಳಿಕೆಯನ್ನು ಕೇಂದ್ರೀಕರಿಸಿ ನವೆಂಬರ್ 8 ರಿಂದ 11 ದಿನಗಳ ಕಾಲ ಯೋಗ ಶಿಬಿರ ಆಯೋಜಿಸಲಾಗಿತ್ತು. 60 ರಷ್ಟು ಶಿಬಿರಾಥರ್ಿಗಳು ಪಾಲ್ಗೊಂಡಿದ್ದರು. ಪತಂಜಲಿ ಯೋಗ ಸಮಿತಿಯ ಹಿರಿಯ ಯೋಗ ಗುರುಗಳಾದ ಪ್ರಶಾಂತ ರೇವಣಕರ್ ಹಾಗೂ ಎಂ.ಡಿ.ವೆಂಕಟೇಶ್ ಅವರು ಯೋಗ ಹಾಗೂ ಪ್ರಾಣಾಯಾಮ ತರಬೇತಿ, ಆಹಾರ ಕ್ರಮದ ಮಾಹಿತಿ ನೀಡಿದ್ದರು. ಶಿಬಿರಾಥರ್ಿಗಳು ವಾರದಲ್ಲಿ 3 ರಿಂದ 4 ಕೆಜಿ ತೂಕ ಇಳಿಸಿಕೊಂಡು ಸಮಾರೋಪ ಸಮಾರಂಭದಲ್ಲಿ ತಮ್ಮ ಅನುಭವ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು. ಯೋಗ ಗುರು ಪ್ರಶಾಂತ ರೇವಣಕರ್ ಅವರನ್ನು ಸನ್ಮಾನಿಸಿದರು.