ಯೋಗದಿಂದ ಮಾನಸಿಕ ನೆಮ್ಮದಿ: ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಮಂಜುಳಾ

ಲೋಕದರ್ಶನ ವರದಿ

ಗಜೇಂದ್ರಗಡ 21:  ಪ್ರಾಚೀನ ಕಾಲದಿಂದಲೂ, ಈಗೀನ ದಿನಮಾನಗಳಲ್ಲೂ ಮಠ ಮಾನ್ಯಗಳಲ್ಲಿ ಯೋಗಾಭ್ಯಾಸವನ್ನು ನಿರಂತರವಾಗಿ ಕಲಿಸಿಕೊಡಲಾಗುತ್ತಿದೆ. ಹಲವಾರು ಶರಣರು ಯೋಗವನ್ನು ನಿರಂತರವಾಗಿ ಮಾಡುತ್ತ ತಮ್ಮ ಸಾವನ್ನು ಮುಂದಕ್ಕೆ ದೂಡಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ, ಪ್ರಾಣಾಯಾಮ, ವಾಯುವಿಹಾರ, ಸದ್ವಿಚಾರ, ಸದಾ ಎಲ್ಲರಿಗೂ ಒಳ್ಳೆಯದನ್ನೆ ಬಯಸುವುದು, ಲೋಕ ಕಲ್ಯಾಣಕ್ಕಾಗಿ ಶ್ರಮಿಸುವುದರಿಂದ ತನು-ಮನ ಎರಡು ಆರೋಗ್ಯವಾಗಿರುತ್ತವೆ  ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಮಂಜುಳಾ ರೇವಡಿ ಹೇಳಿದರು.

    ಚಲನಚಿತ್ರಗಳಲ್ಲಿ ನಟಿಯರು ಯೋಗ ಹಾಗೂ ಏರೊಬಿಕ್ಸಗಳಲ್ಲಿ ಹೆಚ್ಚು  ತೊಡಗಿಕೊಳ್ಳುತ್ತಿದ್ದು, ದೀರ್ಘಕಾಲದವರೆಗೆ ತಮ್ಮ ಸೌಂದರ್ಯ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಾಮಾನ್ಯ ಜನರಿಗೆ ಏರೊಬಿಕ್ಸನಂತಹ ಕ್ಲಾಸ್ ಗಳನ್ನು ಕಲಿಯಲಿಕ್ಕೆ ಆಗುವುದಿಲ್ಲ. ಆದ್ದರಿಂದ ಮನೆಯಲ್ಲಿಯೇ ಯೋಗ ಇಲ್ಲವೆ ಸರ್ವಸನಗಳ ರಾಜ ಎಂದೆ ಕರೆಯುವ ಸುರ್ಯಾಸನ ಒಂದನ್ನೆ ದಿನಕ್ಕೆ ಹತ್ತು ಸಲ ಮಾಡಿದರೆ ಆರೋಗ್ಯವೃದ್ದಿ, ಮಾನಸಿಕ ನೆಮ್ಮದಿ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು. ಪಟ್ಟಣದ ಮೈಸೂರು ಮಠದಲ್ಲಿ ಆಯೋಜಿಸಿದ ವಿಶ್ವ 5ನೇ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಪ.ಪೂ.ವಿಜಯಮಹಾಂತ ಮಹಾಸ್ವಾಮಿಗಳು ವಹಿಸಿದ್ದರು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಉಮಾ ಮ್ಯಾಕಲ್, ದ್ರಾಕ್ಷಾಯಣಿ ಚೋಳಿನ, ಯು.ಆರ್.ಚನ್ನಮ್ಮನವರ,  ಅಪ್ಸರಾಬಾನು ಒಂಟಿ, ಶ್ರದ್ಧಾ ಸವಡಿ, ಟಿ ಎಸ್ ರಾಜೂರ, ಬಾಳು ಪವಾರ, ಕಲ್ಲಪ್ಪ ಸಜ್ಜನರ, ಎಸ್.ಎಸ.ವಾಲಿ, ವೀರೇಶ ಗಾಳಿ, ರಾಘವೇಂದ್ರ ಅಮಟೆ, ಪ್ರೆಮನಾಥಸಾ ದಲಬಂಜನ, ಲಕ್ಷಣ ಬಾಕಳೆ, ಮೀನಾಕ್ಷಿ ಚುಂಚಾ, ಎಸ.ಆಯ್.ಪತ್ತಾರ,ಕೆ ಎಸ್ ಗಾರವಾಡಹಿರೇಮಠ, ಬಿ ವ್ಹಿ ಮುನವಳ್ಳಿ, ಎಂ.ಎಸ್. ಮಕಾನದಾರ ಸೇರಿದಂತೆ ಉಪಸ್ಥಿತರಿದ್ದರು.

ಶಿಬಿರಾಥರ್ಿಗಳು ಯೋಗ ಶಿಕ್ಷಕರಾದ ಸುರೇಶ ಹೊಸಮನಿ ಮಾರ್ಗದರ್ಶನದಲ್ಲಿ ಹಲವಾರು ಆಸನಗಳನ್ನು ನಿರ್ವಹಿಸಿದರು. ಈ ಶಿಬಿರವು ಇನ್ನು  ನಿರಂತರವಾಗಿ 15 ದಿವಸ ಎಂದಿನಂತೆ ಬೆಳಿಗ್ಗೆ 5 ಗಂಟೆ  ನಡೆಯಲಿದೆ ಎಂದು ಯೋಗಶಿಬಿರದ ನಿರ್ವಾಹಕರು ತಿಳಿಸಿದ್ದಾರೆ.