ಯಶ್ - ರಾಧಿಕಾಗೆ ಕನ್ಯಾರತ್ನ

ಬೆಂಗಳೂರು: ಸ್ಯಾಂಡಲ್ ವುಡ್ ತಾರಾ ಜೋಡಿ  ಯಶ್ -ರಾಧಿಕಾ ಪಂಡಿತ್ ಮನೆಗೆ  ಹೊಸ ಅತಿಥಿಯ ಆಗಮನವಾಗಿದೆ. ರಾಕಿಂಗ್ ಸ್ಟಾರ್  ಯಶ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 

ಖಾಸಗಿ ಆಸ್ಪತ್ರೆಯಲ್ಲಿ  ಬೆಳಗ್ಗೆ 6-10 ಕ್ಕೆ ಹೆಣ್ಣು ಮಗುವಿಗೆ ರಾಧಿಕಾ ಪಂಡಿತ್ ಜನ್ಮ ನೀಡಿದ್ದಾರೆ.  ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯಶ್ ತಿಳಿಸಿದ್ದಾರೆ. 

ಡಿಸೆಂಬರ್ 9 ರಂದು ವೈದ್ಯರು ದಿನಾಂಕ ನೀಡಿದ್ದರೂ ಅದಕ್ಕೂ  ಒಂದು ವಾರ ಮುಂಚಿತವಾಗಿಯೇ  ರಾಧಿಕಾ ಪಂಡಿತ್ ತಾಯಿಯಾಗಿದ್ದು, ರಾಕಿಂಗ್ ಸ್ಟಾರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.  ಪುಟ್ಟ ಅತಿಥಿಯನ್ನು ಮನೆಗೆ ಬರಮಾಡಿಕೊಂಡಿದ್ದು, ಯಶ್ ಸಂತಸ ವ್ಯಕ್ತಪಡಿಸಿದ್ದಾರೆ. 

 ಇತ್ತೀಚಿಗೆ  ಅಮೆರಿಕಾದ  ಚಿಕಾಗೋದಲ್ಲಿ ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಹಾಗೂ ಅತ್ತಿಗೆ ಸಹನ ಅವರಿಗೆ ಹೆಣ್ಣು ಮಗು ಜನಿಸಿತ್ತು.  ಯಶ್ ಹಾಗೂ ರಾಧಿಕಾ ತಮ್ಮ ಸೊಸೆಗೆ ರಿಯಾ ಎಂದು ಹೆಸರಿಟ್ಟು ಬಂದಿದ್ದರು. ಈಗ ತಮ್ಮಗೂ ಹೆಣ್ಣು ಮಗು ಆಗಿದ್ದು, ಯಶ್ ಕುಟುಂಬದಲ್ಲಿ ಸಂತಸ ಮನೆಮಾಡಿದೆ.