ಯರಗಟ್ಟಿ 07: ರಾಜ್ಯ ರೈತ ಸೇನೆ, ಕರವೇ, ಡಿಎಸ್ಎಸ್, ಡಾ.ಬಿ.ಆರ್.ಅಂಬೇಡ್ಕರ ಮಹಿಳಾ ಸಂಘ, ಆಟೋಚಾಲಕರ ಸಂಘ, ಜನಕಲ್ಯಾಣ ಇಲ್ಲಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಂಘಟನೆಗಳು ಮತ್ತು ಗ್ರಾಮಸ್ಥರು ಯರಗಟ್ಟಿ ತಾಲೂಕಾ ಕೇಂದ್ರ ಘೋಷಣೆ, ನ್ಯಾಯಾಲಯ ಸಂಕೀರ್ಣ, ಅಗ್ನಿ ಶಾಮಕ ಠಾಣೆ, ಪೋಲೀಸ್ ಠಾಣೆ, ಈ ಭಾಗದ ನೀರಾವರಿ ಯೋಜನೆಗಳ ಜಾರಿಗಾಗಿ ಆಗ್ರಹಿಸಿ ಹಮ್ಮಿಕೊಂಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೋಕಾಕ-ಧಾರವಾಡ, ಬೆಳಗಾವಿ-ಬಾಗಲಕೋಟ ರಾಜ್ಯ ಹೆದ್ದಾರಿ ತಡೆದು ರಸ್ತಾರೋಕೋ ಚಳುವಳಿ ಸಂಪೂರ್ಣ ಯಶಸ್ವಿಗೊಂಡಿತು.
ತಾಲೂಕಾ ಹೋರಾಟ ಸಮಿತಿ ಮುಖಂಡ ಎಚ್.ಎಸ್.ಗಂಗರಡ್ಡಿ ಮಾತನಾಡುತ್ತಾ ಯರಗಟ್ಟಿ ಹೋಬಳಿಯ ಕಟ್ಟಕಡೆಯ ಹಳ್ಳಿಗಳಿಂದ ತಾಲೂಕು ಕೇಂದ್ರ ಸವದತ್ತಿಯು ಸುಮಾರು ಐವತ್ತರಿಂದ ಅರವತ್ತು ಕೀ.ಮೀ. ಅಂತರವಿದ್ದು ಸರಿಯಾಗಿ ಬಸ್ ಸೌಕರ್ಯ ಇಲ್ಲದೇ ತಾಲೂಕಾ ಕಛೇರಿಯ ಕೆಲಸ ಮುಗಿಸಿಕೊಂಡು ಮರಳಿ ಹಳ್ಳಿಗಳಿಗೆ ಬರುವುದು ತುಂಬಾ ದುಬಾರಿಯೊಂದಿಗೆ ಕಷ್ಟಕರವಾಗಿದೆ. ಮತ್ತು ಬಸ್ ತಪ್ಪಿಸಿಕೊಂಡು ಎಷ್ಟೋ ಬಾರಿ ಯರಗಟ್ಟಿ ಬಸ್ ನಿಲ್ದಾಣದಲ್ಲಿ ಜಾಗರಣೆ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಇದನ್ನು ಅರಿತು ಯರಗಟ್ಟಿ ತಾಲುಕಾ ಕೇಂದ್ರವೆಂದು ಘೋಷಣೆ ಮಾಡಬೇಕು ಮತ್ತು ತಾಲೂಕಾ ಕೇಂದ್ರಗಳ ಕಛೇರಿಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ರಾಜ್ಯ ಸಕರ್ಾರವನ್ನು ಆಗ್ರಹಿಸಿದರು.
ಹೊಟೇಲ್ ಉದ್ಯಮಿ ಜೆ.ರತ್ನಾಕರ ಶೆಟ್ಟಿ ಮಾತನಾಡುತ್ತಾ ನಾಲ್ಕು ರಾಜ್ಯಗಳ ಹೆದ್ದಾರಿಗೆ ಹೊಂದಿಕೊಂಡು ವಾಹನಗಳ ದಟ್ಟನೆ ಹಾಗೂ ಜನದಟ್ಟನೆ ಸವರ್ೆ ಸಾಮಾನ್ಯವಾಗಿದೆ ಮತ್ತು ಹಲವಾರು ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಶೀಘ್ರದಲ್ಲಿ ಪಿಎಸ್ಐ ಪೋಲಿಸ್ ಠಾಣೆ, ಅಗ್ನಿಶಾಮಕ ಠಾಣೆ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ದಿನನಿತ್ಯ ಸುಮಾರು ಆರುನೂರಕ್ಕೂ ಹೆಚ್ಚು ಬಸ್ ಸಂಚರಿಸುತ್ತಿದ್ದು ಜನಜಂಗುಳಿಯಿಂದ ಜುನಗುಟ್ಟುತ್ತಿದ್ದ ನಿಲ್ದಾಣ ಪ್ರತಿಭಟನೆಯಿಂದ ಬಿಕೋ ಎನ್ನುತ್ತಿತ್ತು. ಬಸ್ಗಾಗಿ ಕಾದುಕುಳಿತ ಪ್ರಯಾಣಿಕರು ಸುಸ್ತಾಗಿ ನಿಲ್ದಾಣದ ಕಟ್ಟೆ ಮೇಲೆ ಮಲಗಿ ನಿದ್ದೆ ಮಾಡುತ್ತಿದ್ದರು.
ವಾದಿ ಪ್ರತಿವಾದಿ ಚವಡಕಿ ಪದಗಳ ಮಹಿಳಾ ತಂಡಗಳು ಚವಡಕಿ ಪದಗಳನ್ನು ಹಾಡುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರಯಾಣಿಕರ ಪರದಾಟ: ಸಂಪೂರ್ಣ ವ್ಯಾಪಾರಸ್ಥರು ಸ್ವ-ಇಚ್ಚೆಯಿಂದ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಪ್ರಾಯಾಣಿಕರು ನೀರು, ಆಹಾರಕ್ಕಾಗಿ ಪರದಾಡುತ್ತಿರುವ ದೃಶ್ಯ ಕಂಡು ಬಂತು ಮತ್ತು ಅಮವಾಸ್ಯೆ ಇದ್ದುದ್ದರಿಂದ ಪುಣ್ಯ ಕ್ಷೇತ್ರಗಳಿಗೆ ಹೋಗುವ ಭಕ್ತರು ಮಹಿಳೆಯರು ಸಣ್ಣ ಮಕ್ಕಳನ್ನು ಎತ್ತಿಕೊಂಡು ವಾಹನಗಳಿಗಾಗಿ ಅಲೆದಾಡುತ್ತಿರುವುದು ಸವರ್ೆ ಸಾಮಾನ್ಯವಾಗಿತ್ತು.
ರೈತ ಸೇನೆ ಜಿಲ್ಲಾಧ್ಯಕ್ಷ ಸೋಮು ರೈನಾಪೂರ, ಕರವೇ ತಾಲೂಕಾ ಯುವಘಟಕಾಧ್ಯಕ್ಷ ರಫೀಕ್.ಡಿ.ಕೆ, ಶಿವಾನಂದ ಕರಿಗೊಣ್ಣವರ, ಮಹಾಂತೇಶ ಗೋಡಿ, ಪೈಗಂಬರ ನಧಾಪ, ಸಂಜು ಚನ್ನಮೇತ್ರಿ, ವೆಂಕಣ್ಣ ಹುರುಕನವರ, ಬಿ.ಪಿ.ಗೋಡಿ, ಗೂಳಪ್ಪ ಬಾವಿಕಟ್ಟಿ, ವಿಲ್ಸನ್ ಸೊಪ್ಪಡ್ಲ, ಬಾಳೇಶ ಬಡಿಗೇರ, ಹಸನ ಹುಸೇನಾಯ್ಕರ, ಸುಬಾನಿ ಹುಕ್ಕೇರಿ, ಜಗದೀಶ ಹಿರೇಮಠ, ಮಂಜುನಾಥ ಬಾವಿಹಾಳ, ಶಿವಾನಂದ ಪಟ್ಟಣಶೆಟ್ಟಿ, ಗೋರೇಸಾಬ ನಧಾಪ, ಶೇಖರ ಇಟ್ನಾಳ, ಬಾಬು ಚನ್ನಮೇತ್ರಿ, ಚಿಚ್ಚಾ ಹಾರೂಗೇರಿ, ಮೋಹನ ಹುಣಶಿಕಟ್ಟಿ ಮುಂತಾದವರಿದ್ದರು.