ಯಮಕನಮರಡಿ 19: ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎ.ಪಿ ಜಯಮಾಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷಿ ನಿರ್ಣಯ ತೆಗೆದುಕೊಳ್ಳುತ್ತಿದ್ದು ಸದಸ್ಯರೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆಂದು ಯಮಕನಮರಡಿ ಗ್ರಾ.ಪಂ ಉಪಾಧ್ಯಕ್ಷ ಓಂಕಾರ ತುಬಚಿ ಹೇಳಿದರು.
ಅವರು ಬುಧವಾರ ದಿ 19 ರಂದು ಯಮಕನಮರಡಿ ಕೋ.ಆಪ್ ಕ್ರೇಡಿಟ್ ಸೊಸೈಟಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಕಳೆದ 5 ತಿಂಗಳಿನಿಂದ ಯಾವುದೇ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಯನ್ನು ಕರೆದಿಲ್ಲ. ಒಂದು ವೇಳೆ ಸಾಮಾನ್ಯ ಸಭೆ ಕರೆದರೂ ಅದು ಯಾರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷಿಯಾಗಿ ಠರಾವುಗಳನ್ನು ಮಂಜೂರಮಾಡಿಸಿದ್ದಾರೆ. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. 14 ನೇ ಹಣಕಾಸು ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಯನ್ನು ಆಯಾ ವಾಡರ್ಿನ ಸದಸ್ಯರ ಗಮನಕ್ಕೆ ತರುವುದಿಲ್ಲ. ಗ್ರಾಮದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಆಗಿಲ್ಲ. ಗ್ರಾಮದಲ್ಲಿ ನೀರಿನ ಹಾಹಾಕಾರವಿದ್ದು 6 ದಿನಕ್ಕೊಮ್ಮೆ ಗ್ರಾಮಸ್ಥರಿಗೆ ನೀರು ಮುಟ್ಟುತ್ತಿದೆ. ರಸ್ತೆ ಗಟಾರುಗಳು ಸರಿಯಾಗಿಲ್ಲ. ಸದಸ್ಯರು ಗ್ರಾ.ಪಂ.ಗೆ ಕೇಳಲು ಹೋದಾಗ ಅಭಿವೃದ್ಧಿ ಅಧಿಕಾರಿಗಳು ಸದಸ್ಯರೊಡನೆ ಸರಿಯಾಗಿ ವರ್ತನೆ ಮಾಡುವುದಿಲ್ಲ. ಅವಾಚ್ಯ ಪದಗಳನ್ನು ಬಳಸುತ್ತಾರೆ ಎಂದು ಓಂಕಾರ ತುಬಚಿ ಹೇಳಿ ಜನೇವರಿ 26 ರೊಳಗಾಗಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯನ್ನು ವಗರ್ಾವಣೆ ಮಾಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದರು.
ಹಿರಿಯ ಸಹಕಾರಿ ಧುರೀಣ ಬಿ.ಬಿ ಹಂಜಿ ಮಾತನಾಡಿ ಯಮಕನಮರಡಿ ವಾಯ್.ವಿ.ಎಸ್ ಶಾಲೆಗೆ ಅಭಿವೃದ್ಧಿ ಅಧಿಕಾರಿಗಳು ಮೂನ್ಸೂಚನೆ ನೀಡದೆ ನೀರು ಪೂರೈಕೆ ಬಂದು ಮಾಡಿದ್ದಾರೆ. ಕುಂದು ಕೊರತೆ ನ್ಯಾಯಾಲಯವು ಈ ಶಾಲೆಗೆ ನೀರು ಪೂರೈಸಬೇಕೆಂದು ಆದೇಶ ನೀಡಿದರೂ ಕೂಡ ಅಭಿವೃದ್ದಿ ಅಧಿಕಾರಿಗಳು ನೀರು ಪೂರೈಸುತ್ತಿಲ್ಲ. ಶಾಲಾ ಮಕ್ಕಳಿಗೆ ತೊಂದರೆಯಾಗಿದೆ. 10 ದಿನಗಳ ಒಳಗಾಗಿ ಶಾಲೆ ನೀರಿನ ಸಮಸ್ಯೆಯನ್ನು ಬಗೆ ಹರಿಸದಿದ್ದರೆ ದಿನಾಲೂ ಮುಂಜಾನೆ 10 ಗಂಟೆಗೆ ಗ್ರಾ.ಪಂ ಮುಂದೆ ಮಕ್ಕಳಿಂದ ಬೊಬ್ಬೆ ಹೊಡಿಸಿ ಶಾಲೆಗೆ ಕಳಿಹಿಸಿ ಕೊಡಲಾಗುವುದು ಎಂದು ಬಿ.ಬಿ ಹಂಜಿ ತಿಳಿಸಿದರು.
ಗ್ರಾ.ಪಂ ಅಧ್ಯಕ್ಷೆಯ ಪತಿ ರಮೇಶ ಮಾದರ ಮಾತನಾಡಿ ಗ್ರಾ.ಪಂ ಕಾರ್ಯಲಯಕ್ಕೆ ಹೋಗಿ ಅಲ್ಲಸಲ್ಲದ ಮಾತುಗಳನ್ನು ಆಡುತ್ತಾರೆ. ಒಬ್ಬ ಸಾಮಾನ್ಯ ನಾಗರಿಕರನ್ನು ಕೂಡ ಸರಿಯಾಗಿ ಮಾತನಾಡಿಸುವುದಿಲ್ಲ ಎಂದು ಆರೋಪಿಸಿದರು.
ಗ್ರಾ.ಪಂ ಸದಸ್ಯ ಉದಯ ನಿರ್ಮಳ ಮಾತನಾಡಿ ಪಿ.ಡಿ.ಓ ಅಭಿವೃದ್ಧಿ ವಿಷಯಗಳ ಕುರಿತು ಕೇಳಲು ಹೋಗಿದ್ದಾಗ 7 ಪಿ.ಸಿ.ಆರ್ ಕೇಸು ಹಾಕುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಸಂಬಂಧಿತರು ಈ ಕುರಿತು ಕ್ರಮಕೈಗೊಳ್ಳದಿದ್ದರೆ ಎಲ್ಲ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಲಾಗುವುದು ಎಂದರು.
ಸಭೆಯಲ್ಲಿ ಉದಯ ನಿರ್ಮಳ, ಜಾವೇದ ಜಕಾತಿ, ತಿಪ್ಪವ್ವಾ ಬರಗಾಲಿ, ಲಗಮಾ ದಾಸನಟ್ಟಿ, ಮುಂತಾದವರು ಉಪಸ್ಥಿತರಿದ್ದರು.