ಯಲುಬುರ್ಗ : ಕಾರ್ನಾಡ ಬಹುಮುಖ ವ್ಯಕ್ತಿತ್ವದ ಪ್ರತಿರೂಪ: ಪಾಟೀಲ್

ಲೋಕದರ್ಶನ ವರದಿ

ಯಲುಬುರ್ಗ  10: ನಮ್ಮನ ಅಗಲಿದ ಹಿರಿಯ ಸಾಹಿತಿ ಗಿರಿಶ ಕಾರ್ನಾಡ  ಬಹುಮುಖ ವ್ಯಕ್ತಿತ್ವದ ಪ್ರತಿರೂಪವಾಗಿದ್ದು ಅವರ ಅಗಲಿಕೆ ಕರ್ನಾಟಕ   ಹಾಗೂ ಇಡೀ ದೇಶಕ್ಕೆ ಚಂಡಮಾರುತ ಅಪ್ಪಳಿಸಿದಂತ್ತಾಗಿದೆ ಎಂದು ಕರ್ನಾಟಕ ಜನ ಕಲ್ಯಾಣ ವೇದಿ ಕೆಯ ರಾಜ್ಯ ಯುವ ಘಟಕದ ರಾಜ್ಯಾದ್ಯಕ್ಷ ಸಶರಣಪ್ಪ ಪಾಟೀಲ್ ಕರಮುಡಿ ವಿಷಾದ ವ್ಯಕ್ತ ಪಡಿಸಿದರು ಅವರು ಪಟ್ಟಣದ ಪತ್ರಿಕಾ ಭವನದ ಆವರಣದಲ್ಲಿ ಜನ ಕಲ್ಯಾಣ ವೇದಿಕೆಯ ವತಿಯಿಂದ ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯ ಕುರಿತು ಮಾತನಾಡಿದರು ಮೊದಲಿನಿಂದಲು ಕಾನರ್ಾಡ ಎಡಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತ ತಮ್ಮ ಅಚಿತ್ಯ ಕಾಲದವರೆಗೆ ಎಡಪಂಥೀಯ ವಿಚಾರಗಳನ್ನು ಪ್ರತಿಪಾದಿಸಿದರು ಎಂದರು.  

ಕನರ್ಾಟಕ ಜನ ಕಲ್ಯಾಣ ವೇದೀಕೆಯ ರಾಜ್ಯ ಕಾರ್ಯದಶರ್ಿ ಸಾಹಿತಿ ಶರಣಬಸಪ್ಪ ದಾನಕೈ ಅವರು ಮಾತನಾಡಿ ಗಿರೀಶ ಕಾನರ್ಾಡ ಅಗಲಿಕೆಯಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಅವರು ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಕರ್ನಾಟಕ  ರಾಜ್ಯೋತ್ಸವ ಪ್ರಶಸ್ತಿ ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದುಕೊಂಡಿರುತ್ತಾರೆ ಅಲ್ಲದೇ ಕೇಂದ್ರ್ರ ಸಂಗೀತ ನಾಟಕ ಅಕಡೆಮಿಯ ಅಧ್ಯಕ್ಷರಾಗಿ ಹಾಗೂ ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ನಿದರ್ೇಶಕರಾಗಿ  ಸೇವೆ ಸಲ್ಲಿಸಿದ್ದು ಅಮೋಘವಾಗಿದೆ ಎಂದು ಸಾಹಿತಿ ಶರಣಬಸಪ್ಪ ದಾನಕೈ ಮಾತನಾಡಿದರು. 

ಈ ಸಂಧರ್ಭದಲ್ಲಿ ಪಟ್ಟಣದ ವರ್ತಕ ಸಂಗಣ್ಣ ಟೇಗಿನಕಾಯಿ, ಕರವೇ ಯುವ ಸೇನೆ ತಾಲೂಕಾಧ್ಯಕ್ಷ ಶಿವುಕುಮಾರ ನಾಡಗೌಡ್ರ ಉಪಾಧ್ಯಕ್ಷ ಕೋಟೇಶ ಬೂತೆ, ಹೋರಾಟಗಾರ ರ್ಶರೀಕಾಂತಗೌಡ ಮಾಲೀಪಾಟೀಲ್, ರುದ್ರಪ್ಪ ಹರಿಜನ, ಮತ್ತಣ್ನ ಸೂಡಿ ರಮೇಶಗೌಡ ಮಾಲಿಪಾಟೀಲ್ ಮಲ್ಲಪ್ಪ ಬಾಚಲಾಪೂರ ದೇವಪ್ಪ ಗೌಡ್ರ ಸಿದ್ದಪ್ಪ ಅರಕೇರಿ ನಬೀಸಾಬ ಮಾರನಾಳ ಇಮಾಮಸಾಬ ಮಾರನಾಳ ಲಾಲಸಾಬ ಮಾರನಾಳ ಶರಣಪ್ಪ ಚಾಕರಿ ಬಾಗವಹಿಸಿದರು.