ಕಾಗವಾಡ : ಮದಭಾವಿಯಲ್ಲಿ ಕೊಳವೆಬಾವಿ ಕಾಮಗಾರಿಗೆ ಪೂಜೆ

ಕಾಗವಾಡ 02: ಬೇಸಿಗೆಯ ಉರಿ-ಬಿಸಿಲಿನಲ್ಲಿ ನೀರಿನ ಸಮಸ್ಯೆ ಎಲ್ಲೆಡೆ ಗಂಭೀರಗೊಳ್ಳುತ್ತಿದೆ. ಇದರಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರ ಅನುದಾನ ಬಳಿಸಿ, ಮದಭಾವಿ ಜಿಪಂ ವ್ಯಾಪ್ತಿಯ ಬಿರೇಶ್ವರ ದೇವಸ್ಥಾನದಲ್ಲಿ ಕೊಳವೆಬಾವಿ ತೋಡಿದರು.

ರವಿವಾರರಂದು ಮದಭಾವಿಯಲ್ಲಿಯ ಬಿರೇಶ್ವರ ದೇವಸ್ಥಾನದಲ್ಲಿ ಜಿಪಂ ಸದಸ್ಯ ಎಂ.ಆರ್.ಪಾಟೀಲ, ಮತ್ತು ಕಾಂಗ್ರೆಸ್ ಘಟಕ ಆಧ್ಯಕ್ಷ ಮಹಾದೇವ ಕೋರೆ ಇವರು ಪೂಜೆ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಈಶ್ವರ ಕುಂಬಾರ, ಮಾಯಪ್ಪಾ ಖಿಲಾರೆ, ಅಜರ್ುನ ಇಬ್ರಾಹಿಂಪುರ, ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.