ವಿಶ್ವ ಯೋಗ ದಿನಾಚರಣೆ: ಧ್ಯಾನ ಮಾಡುವದರಿಂದ ಅನೇಕ ದುಶ್ಚಟಗಳು ದೂರವಾಗುತ್ತವೆ

World Yoga Day: Meditation removes many evils

ವಿಶ್ವ ಯೋಗ ದಿನಾಚರಣೆ: ಧ್ಯಾನ ಮಾಡುವದರಿಂದ ಅನೇಕ ದುಶ್ಚಟಗಳು ದೂರವಾಗುತ್ತವೆ  

ಹನಮಸಾಗರ 21: ಧ್ಯಾನದಿಂದ ದುಶ್ಚಟಗಳು ತಾನಾಗಿಯೇ ದುರವಾಗುತ್ತವೆ ಎಂದು ಪಿಎಸ್‌ಎಸ್‌ಎಮ್ ಮಾಸ್ಟರ್ ಇ.ಜಿ ಮೇದಿಕೆರಿ ಹೇಳಿದರು.     ಗ್ರಾಮದ ರಾಯಲ್ ಫೌಂಡೇಷನ್ ಸೇವಾ ಸಂಸ್ಥೆ ಹಾಗೂ ಮೆದಿಕೇರಿ ಆರ್ಟ್‌ ಗ್ಯಾಲರಿ ಸಹಯೋಗದಲ್ಲಿ ಕುರುಬಗೇರಾ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಆನಾಪಾನಸತಿ ಧ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.      ನಿರಂತರವಾಗಿ ಧ್ಯಾನ ಮಾಡುವದರಿಂದ ನಮ್ಮಲ್ಲಿ ಇರತಕ್ಕ ಅನೇಕ ದುಶ್ಚಟಗಳು ತಾನಾಗಿಯೇ ಹೋಗುವುದರ ಜೊತೆಗೆ ಮನಸ್ಸು ಸದಾ ಉಲ್ಲಾಸವಾಗುತ್ತದೆ, ಮನಸ್ಸು ಶಾಂತವಾಗಿ ನಮ್ಮ ಎಲ್ಲ ಆಲೋಚನಾ ರಹಿತವಾಗುತ್ತೆವೆ.  

ಧ್ಯಾನಮಾಡಬೇಕಾದರೆ ಎರಡು ಕೈಗಳನ್ನು ಜೋಡಿಸಿಕೊಂಡು ಎರಡು ಕಣ್ಣುಗಳನ್ನು ಮುಚ್ಚಿ, ಸಹಜವಾಗಿ ನಡೆಯುತ್ತಿರುವ ಉಸಿರಾಟವನ್ನು ಗಮನಿಸುತ್ತಿರಬೇಕು. ಯಾವ ಮಂತ್ರಜಪ ಅಥವಾ ನಾಮಸ್ಮರಣೆ ಇರಬಾರದು. ಯಾವ ದೈವಿ ಕಲ್ಪನೆಗಳ ಅಗತ್ಯವಿಲ್ಲ. ಸಹಜವಾಗಿಯೇ ನಡೆಯುತ್ತಿರುವ ಉಸಿರಾಟವನ್ನು ಗಮನಿಸಿ. ಆ ಸಹಜವಾದ ಉಸಿರಾಟದ ಮೇಲೆ ಗಮನವಿಡುತ್ತಿದ್ದರೆ ಕ್ರಮೇಣ ಆಲೋಚನಾರಹಿತ ಸ್ಥಿತಿ ಉಂಟಾಗುತ್ತದೆ. ಇದೇ ಧ್ಯಾನದ ಸ್ಥಿತಿ. ಆ ಧ್ಯಾನದ ಸ್ಥಿತಿಯಲ್ಲಿ ಅಪಾರವಾಗಿ ವಿಶ್ವಮಯ ಪ್ರಾಣಶಕ್ತಿ (ಕಾಸ್ಮಿಕ್ ಎನರ್ಜಿ) ಶರೀರದಲ್ಲಿ ಪ್ರವೇಶಿಸಿ ನಾಡೀಮಂಡಲ ಶುದ್ಧಿಯಾಗಿ ಸಂಪೂರ್ಣ ಆರೋಗ್ಯ ದೊರಕುತ್ತದೆ.  

ಪ್ರತಿ ದಿನ ನಿಯಮಬದ್ಧವಾಗಿ ಧ್ಯಾನ ಮಾಡುವುದರಿಂದ ದೇಹದಲ್ಲಿ ಪ್ರಾಣಶಕ್ತಿಯ ಮಟ್ಟ ಹೆಚ್ಚಿ ಸೂಪ್ತ ಚೇತನಗಳು ಜಾಗೃತಿಯಾಗುತ್ತವೆ. ಕ್ರಮೇಣ ನಮ್ಮಲ್ಲಿನ ದಿವ್ಯಚಕ್ಷು ಉತ್ತೇಜನಗೊಳ್ಳುತ್ತದೆ. ಪಿರಮಿಡ್ ಶಕ್ತಿ ಲಭ್ಯವಿದ್ದಡೆ ಪಿರಮಿಡ್ಗಳನ್ನು ಬಳಸಿ ಧ್ಯಾನ ಮಾಡಿದರೆ, ಧ್ಯಾನ ಸ್ಥಿತಿಗೆ ಬೇಗ ತಲುಪುತ್ತೇವೆ. ಧ್ಯಾನದ ಶಕ್ತಿ ಅಪಾರವಾಗಿ ಹೆಚ್ಚುತ್ತದೆ ಎಂದರು.    ಮುಖ್ಯ ಶಿಕ್ಷಕ ಚಂದಪ್ಪ ಹಕ್ಕಿ ಮಾತನಾಡಿ ಧ್ಯಾನದಿಂದ ಜೀವನದ ಗುರಿಯ ಸ್ಪಷ್ಟತೆ ಯಾಗುತ್ತದೆ. ವಿಧ್ಯಾರ್ಥಿಗಳು ಚಿಕ್ಕವರಿದ್ದಾಗಲೇ ಒಳೆಯ ಗುರಿಯನ್ನು ಇಟ್ಟುಕೊಳ್ಳಬೇಕು ಇದರಿಂದ ನಿಮ್ಮ ಜೀವನದಲ್ಲಿ ಸಫಲತೆ ಹೊಂದುತ್ತಿರಿ ಎಂದರು.    

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ 15 ನಿಮಿಷ ಆನಾಪಾನಸತಿ ಧ್ಯಾನವನ್ನು ಮಾಡಿಸಲಾಯಿತು.   ದೈಹಿಕ ಶಿಕ್ಷಕಿ ಗೌರಮ್ಮ ತಳವಾರ, ಜರಿನಾ ಬೇಗಂ, ಮಧುಮತಿ ಗುಬ್ಬಣ್ಣವರ, ವಿದ್ಯಾ ಮಾವಿನಕಟ್ಟಿ, ತುಂಗಾ ಶಿರಗುಂಪಿ, ವಿದ್ಯಾರ್ಥಿಗಳು ಇತರರ  ಇದ್ದರು.  ಹನಮಸಾಗರ  ಕುರುಬಗೇರಾ ಶಾಲೆಯಲ್ಲಿ ಶನಿವಾರ ವಿಶ್ವ ಯೋಗ ಧ್ಯಾನ ದಿನಾಚರಣೆಯನ್ನು ಮಾಡಲಾಯಿತು.