ಗದಗ 24: ಜಿಲ್ಲಾ ಆಡಳಿತ ಗದಗ, ಜಿಲ್ಲಾ ಪಂಚಾಯತ್, ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾಯರ್ಾಕ್ರಮ ವಿಭಾಗ, ಗದಗ ವೈದ್ಯಕೀಯ ಮಹಾವಿದ್ಯಾಲಯ, ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಪೋಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಾತರ್ಾ ಮತ್ತು ಪ್ರಚಾರ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಅಬಕಾರಿ ಇಲಾಖೆ, ಜಿಲ್ಲಾ ಕಾರಾಗೃಹ, ಹಾಗೂ ಸಕರ್ಾರೇತರ ಸಂಸ್ಥೆಗಳು, ಮುನ್ಸಿಪಲ್ ಪದವಿ ಪೂರ್ವ ಮಹಾವಿದ್ಯಾಲಯ, ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜ್, ಮಹಾತ್ಮಾ ಗಾಂಧೀಜಿ ಪ್ಯಾರಾ ಮೆಡಿಕಲ್ ಕಾಲೇಜ್, ಪಾಲನ್ ಗಾಲಾ ನಸರ್ಿಂಗ್ ಕಾಲೇಜ್, ಮದರ ಥೇರೆಸಾ ಪ್ಯಾರಾಮೆಡಿಕಲ್ ಕಾಲೇಜ್ ಗದಗ, ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾಯರ್ಾಲಯ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ. 24ರಂದು ವಿಶ್ವ ಸ್ಕಿಝೋಫ್ರೀನಿಯಾ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ನಗರದ ಮುನ್ಸಿಪಲ್ ಕಾಲೇಜ್ ಆವರಣದಿಂದ ಹಮ್ಮಿಕೊಳ್ಳಲಾಗಿತ್ತು.
ಡಾ. ವ್ಹಾಯ್.ಕೆ. ಭಜಂತ್ರಿ ಅನುಷ್ಠಾನಾಧಿಕಾರಿಗಳು ಸ್ವಾಗತಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಪ್ರಥಾನ ದಿವಾನಿ ನ್ಯಾಯಾಧಿಶರು ಹಾಗೂ ಸದಸ್ಯ ಕಾರ್ಯದಶರ್ಿಗಳಾದ ಶ್ರೀನಿವಾಸರವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟನೆ ಮಾಡಿದರು. ಮಂಜುನಾಥ ಚವ್ಹಾಣ, ಮಾನ್ಯ ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಜಾಥಾ ಕಾರ್ಯಕ್ರಮವು ನಗರದ ಪ್ರಮುಖ ಬೀದಿಗಳಾದ ಮಹಾತ್ಮಾ ಗಾಂಧಿ ಸರ್ಕಲ್, ಟಾಂಗಾಕೂಟ್, ಹಳೇ ಬಸ್ ನಿಲ್ದಾಣ, ರೋಟರಿ ಸರ್ಕಲ್ ಮಾರ್ಗವಾಗಿ ಗದಗ ನಗರ ಆರೋಗ್ಯ ಕೇಂದ್ರದಲ್ಲಿ ಮುಕ್ತಾಯಗೊಂಡಿತು. ದ್ವನಿ ವರ್ದಕಗಳ ಮೂಲಕ ಜನರಿಗೆ ಸ್ಕಿಝೋಫ್ರೀನಿಯಾದ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಪ್ರಥಾನ ದಿವಾನಿ ನ್ಯಾಯಾಧಿಶರು ಹಾಗೂ ಸದಸ್ಯ ಕಾರ್ಯದಶರ್ಿಗಳಾದ ಶ್ರೀನಿವಾಸರವರು ಮಾತನಾಡಿ ಸ್ಕಿಝೋಫ್ರೀನಿಯಾ ಒಂದು ತೀವ್ರತರನಾದ ಮಾನಸಿಕ ಖಾಯಿಲೆಯಾಗಿದ್ದು, ಇದರ ಕುರಿತು ಜಾಗೃತಿ ಹಾಗೂ ಅರಿವು ಇತ್ತೀಚಿನ ದಿನಗಳಲ್ಲಿ ಅತ್ಯವಶ್ಯವಾಗಿದ್ದು, ಖಾಯಿಲೆ ಲಕ್ಷಣಗಳನ್ನು ಮೊದಲೆ ಗುರುತಿಸಿ ಶೀಘ್ರ ಚಿಕಿತ್ಸೆ ಪಡೆಯುವದರಿಂದ ಖಾಯಿಲೆಯಿಂದ ಗುಣಮುಖರಾಗಬಹುದೆಂದು ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಮಂಜುನಾಥ ಚವ್ಹಾಣ, ಮಾನ್ಯ ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು, ಇವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಒತ್ತಡ ಹಾಗೂ ಒಂಟಿತನದಿಂದ ಮಾನಸಿಕ ಖಾಯಿಲೆಗಳು ಹೆಚ್ಚುತ್ತಿರುವದರಿಂದ, ಜನರು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯವಂತ ಸಮಾಜ ನಿಮರ್ಿಸುವಲ್ಲಿ ಯುವಕರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ವಿರುಪಾಕ್ಷರಡ್ಡಿ ಮಾದಿನೂರ ಇವರು ಮಾತನಾಡಿ ಸ್ಕಿಝೋಫ್ರೀನಿಯಾ ಖಾಯಿಲೆಯ ಲಕ್ಷಣಗಳು ಹಾಗೂ ಕಾರಣಗಳ ಬಗ್ಗೆ ತಿಳಿಸುತ್ತಾ ಪ್ರಥಮ ಹಂತದಲ್ಲೇ ಖಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಲು ಹತ್ತಿರದ ಸಕರ್ಾರಿ ಆಸ್ಪತ್ರೆಗೆ ಭೇಟಿ ನೀಡಲು ತಿಳಿಸಿದರು. ಡಾ. ಸೋಮಶೇಖರ ಬಿಜ್ಜಳ ಮನೋವೈದ್ಯರು (ಜಿಲ್ಲಾ ಆಸ್ಪತ್ರೆ ಗದಗ) ಇವರು ಸ್ಕಿಝೋಫ್ರೀನಿಯಾ ಖಾಯಿಲೆಯ ಬಗ್ಗೆ ಇರುವ ಮೂಢನಂಬಿಕೆಗಳ ಕುರಿತು ತಿಳಿಸಿದರು. ಚ್. ಸುರೇಶ (ಜಿಲ್ಲಾ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗದಗ), ಇವರು ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಜಿ.ಎಸ್. ಪಲ್ಲೇದ್ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಅನುಷ್ಠಾನಅಧಿಕಾರಿಗಳಾದ ಡಾ. ಎಸ್.ಎಮ್. ಹೊನಕೇರಿ, ಡಾ. ಅರುಂಧತಿ ಕುಲಕಣರ್ಿ, ಡಾ. ಎಸ್.ಎಸ್. ನೀಲಗುಂದ (ಟಿ.ಎಚ್.ಓ ಗದಗ) ಮನೋವೈದ್ಯರುಗಳಾದ ಡಾ. ಜಿತೇಂದ್ರ ಮುಗಳಿ, ಡಾ. ಶಿವಾನಂದ, (ಜಿಮ್ಸ್ ಗದಗ), ಡಾ. ವೈಶಾಲಿ ಎನ್.ಹೆಗಡೆ (ಡಿ.ಎಮ್.ಎಚ್.ಪಿ.) ಡಾ. ಮಹೇಶ ಹುಗಾರ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕತರ್ೆಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಪಾಲ್ಗೊಂಡಿದ್ದರು.