ಲೋಕದರ್ಶನ ವರದಿ
ಧಾರವಾಡ 17: ಪರಿಸರ ಪ್ರಜ್ಞೆಯನ್ನು ಯುವ ಪೀಳಿಗೆ ಬೆಳೆಸಿಕೊಳ್ಳಬೇಕಿದೆ. ಅವರು ತಮ್ಮ ಜವಾಬ್ದಾರಿ ಅರ್ಥಮಾಡಿಕೊಳ್ಳದೇ ಹೋದಲ್ಲಿ ಮುಂದೊಂದು ದಿನ ಓಜೋನ್ ಪರದೆಯನ್ನು ಸಂರಕ್ಷಿಸಲಾರದೇ ಜೀವ ಸಂಕುಲಕ್ಕೆ ಅಪಾಯ ಎದುರಾಗುವುದರಲ್ಲಿ ಸಂದೇಹವೇ ಇಲ್ಲ. ಈ ಬರುವ ಅಪಾಯದ ದಿನಗಳ ಬಗ್ಗೆ ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಂಡು ತನ್ನ ಜೀವನ ರೂಪಿಸಿಕೊಳ್ಳಬೇಕಾಗಿದೆ.
ಅವರು ವೈ.ಬಿ. ಅಣ್ಣಿಗೇರಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಮತ್ತು ವೈ.ಬಿ. ಅಣ್ಣಿಗೇರಿ ಕಾಲೇಜಿನ ಸಹಯೋಗದಲ್ಲಿ ವಿಶ್ವ ಓಜೋನ್ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಬರೀ ಸಮಾರಂಭಕ್ಕೆ ಸಿಮಿತನಾಗಿರದೇ ದಿನಾಚರಣೆಯ ಮಹತ್ವವನ್ನು ಅರ್ಥಮಾಡಿಕೊಂಡು ನಮ್ಮ ಜೀವನದ ಶೈಲಿಯಲ್ಲಿ ಅಳವಡಿಸಿಕೊಳ್ಳುವಂತಾದಾಗ ಮಾತ್ರ ಏನಾದರು ಬದಲಾವಣೆ ಕಂಡುಕೊಳ್ಳಲು ಸಾಧ್ಯ. ವಿದ್ಯಾಥರ್ಿಗಳು ಹೆಚ್ಚು ಪ್ಲಾಸ್ಟಿಕ್ ಹೊದಿಕೆಯಿರುವ ತಿಂಡಿ ತಿನಿಸುಗಳನ್ನು ಬಳಸುವದನ್ನು ನಿಲ್ಲಿಸಬೇಕು. ಹಾಗೆಯೇ ಇಂದು ಪರಿಸರದ ಮೇಲೆ ಆಗುತ್ತಿರುವ ಆಕ್ರಮವನ್ನು ತಡೆಗಟ್ಟುವದಕ್ಕೆ ವಿದ್ಯಾಥರ್ಿಗಳು ಸಾಂಘಿಕ ಪ್ರಯತ್ನದೊಂದಿಗೆ ಒಂದು ಚಳುವಳಿ ರೂಪದಲ್ಲಿ ಮಾಡಬೇಕು, ಮೊದಲು ನಾವು ನಮ್ಮ ಮನೆಯಿಂದಲೇ ಪರಿಸರ ಸ್ನೇಹಿ ಬದುಕನ್ನು ನಡೆಸಲು ಪ್ರಾರಂಭಿಸುವ ಮೂಲಕ ಉಳಿದವರಿಗೆ ಮಾದರಿಯಾಗಬೇಕು ಎಂದುರು.
ಅತಿಥಿಯಾಗಿ ಮಾತನಾಡಿದ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ಶೋಭಾ ಪೋಳ ಮನುಷ್ಯ ನಿಯಂತ್ರಣ ಮೀರಿ ಪರಿಸರವನ್ನು ಬಳಕೆ ಮಾಡಹತ್ತಿ ಪರಿಸರ ಮಾಲಿನ್ಯ ಹೆಚ್ಚಾಗಹತ್ತಿದ್ದರಿಂದ ಈ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಳ್ಳುವಂತಾಯಿತು. ಇಂದು ಮಕ್ಕಳ, ವಿದ್ಯಾಥರ್ಿಗಳ ಮಧ್ಯ ಪರಿಸರ ಮಾಲಿನ್ಯ ಮತ್ತು ಅದನ್ನು ನಿಯಂತ್ರಿಸುವ ಬಗ್ಗೆ ಚಚರ್ೆ ಮತ್ತು ಪ್ರಯತ್ನ ಆಗಬೇಕಿದೆ. ಆ ನಿಟ್ಟಿನಲ್ಲಿ ಈ ಮಂಡಳಿ ಹೆಚ್ಚು ತೊಡಗಿಸಿಕೊಂಡಿದೆ ಎಂದು ಪೋಳ ಮುಂದಿನ ಪೀಳಿಗೆಗೆ ನಾವೇನು ಬಿಟ್ಟುಹೋಗುತ್ತಿದ್ದೇವೆ ಎಂದು ಆಲೋಚಸಬೇಕಿದೆ ಎಂದರು.
ಓಜೋನ್ ಕುರಿತು ವಿಶೇಷ ಉಪನ್ಯಾಸ ಮಾಡಿದ ಕನರ್ಾಟಕ ಕಾಲೇಜಿನ ವಿಜ್ಞಾನ ಪ್ರಾಧ್ಯಾಪಕ ಕೆ. ಕೊಟ್ರೇಶ ಓಜೋನ್ ಅದರ ಮಹತ್ವ ಅದು ಈಗ ಯಾವ ಸ್ಥಿತಿಯಲ್ಲಿದೆ, ಓಜೋನ್ ಪರದೆ ತಿಳುವಾಗಲು ಕಾರಣಗಳನ್ನು ಹೇಳಿ, ಓಜೋನ್ ಪರದಿ ಒಂದೇ ದಿನಕ್ಕೆ ತೆಳುವಾಗಿದ್ದಿಲ್ಲ ಹತ್ತಾರು ವರ್ಷಗಳಿಂದ ಪರಿರಸದ ಅಸತೋಲನದಿಂದ ಆಗಿದ್ದು ಆ ಪರದೆಯನ್ನು ದಪ್ಪ ಮಾಡಲು ಒಂದೆರಡು ವರ್ಷಗಳಿಂದ ಸಾಧ್ಯವಿಲ್ಲ ಸತತ ಪ್ರಯತ್ನದಿಂದ ನಿರಂತರವಾಗಿ ಪರಿಸರವನ್ನು ಉಳಿಸಿ ಬೆಳೆಸುವದರಿಂದ ಸಾಧ್ಯವಿದೆ ಎಂದರು. ಓಜೋನನ್ನು ಎರಡು ರೀತಿಯಲ್ಲಿವೆ. ಒಂದು ಮಾಲಿನ್ಯ ಮೂಲಕ ನಿಮರ್ಿತ ಓಜೋನ್ಗೆ ಬ್ಯಾಡ್ ಓಜೋನ್ ಎಂದರೆ ಇನ್ನೊಂದು ಒಳ್ಳೆಯ ಪರಿಸರದಿಂದ ನಿಮರ್ಿತ ಓಜೋನ್ ಗುಡ್ ಓಜೋನ್ ಎನ್ನಲಾಗುವುದು ನಾವು ಯಾವ ಓಜೋನ್ ಹೊಂದಬೇಕು ಎಂಬುದು ಇಂದು ಮುಖ್ಯವಾಗಿದೆ ಎಂದರು. ಕಾಲೇಜಿನ ಪ್ರಚಾರ್ಯ ಡಾ. ರಮೇಶ ಒಡವಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್. ನಾಗರಾಜ ಸ್ವಾಗತಿಸಿ ವಂದಿಸಿದರು.