ವಿಶ್ವ ಧ್ಯಾನ ದಿನಾಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು
ಹುಬ್ಬಳ್ಳಿ 21: ಪತಂಜಲಿ ಯೋಗ ಸಮಿತಿ, ಕರ್ನಾಟಕದ ವತಿಯಿಂದ ಇಂದು ಬೆಳಿಗ್ಗೆ ಹುಬ್ಬಳ್ಳಿಯ ಕೇಶ್ವಾಪುರದ ಅಜಾದ ಕಾಲೋನಿಯ ಪತಂಜಲಿ ರಾಜ್ಯ ಕಾರ್ಯಾಲಯದಲ್ಲಿ ್ರ್ರಥಮ ವಿಶ್ವ ಧ್ಯಾನ ದಿನಾಚರಣೆಯನ್ನು ಪತಂಜಲಿ ಯೋಗ ಪೀಠ, ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿ, ಅಂತರರಾಷ್ಟ್ರೀಯ ಯೋಗ ಗುರು ಶ್ರೀ ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ 5.30 ರಿಂದ 6.30 ಯೋಗ ಕಾರ್ಯಕ್ರಮ, 6.30 ರಿಂದ 7.00 ಅಗ್ನಿಹೋತ್ರ ಮತ್ತು 7.00 ರಿಂದ 8.00 ರ ವರೆಗೆ ವಿಶ್ವ ಧ್ಯಾನ ದಿನಾಚರಣೆ ನಡೆಯಿತು. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪತಂಜಲಿ ವತಿಯಿಂದ ಏಕ ಕಾಲದಲ್ಲಿ ವಿಶ್ವ ಧ್ಯಾನ ದಿನಾಚರಣೆ ಆಚರಿಸಲಾಯಿತು. ಯೋಗ, ಅಗ್ನಿಹೋತ್ರ, ಧ್ಯಾನದ ಮಾರ್ಗದರ್ಶನವನ್ನು ಮಾಡಿ ಮಾತನಾಡಿದ ಯೋಗ ಗುರು ಶ್ರೀ ಭವರಲಾಲ್ ಆರ್ಯ ಅವರು," ವಿಶ್ವಸಂಸ್ಥೆಯು ಡಿಸೆಂಬರ್ 21 ನ್ನು ಜಾಗತಿಕವಾಗಿ ವಿಶ್ವ ಧ್ಯಾನ ದಿನ ಎಂದು ಘೋಷಿಸಿದೆ. ಯೋಗ, ಅಗ್ನಿಹೋತ್ರ, ಧ್ಯಾನ ನಮ್ಮ ಸನಾತನ ಪರಂಪರೆ. ಇವುಗಳನ್ನು ಪ್ರತಿಯೊಬ್ಬರೂ ಪ್ರತಿದಿನ ಅಭ್ಯಾಸ ಮಾಡಬೇಕು. ಮುಖ್ಯವಾಗಿ ಈಗಿನ ಯುವಜನತೆ ಯೋಗ, ಅಗ್ನಿಹೋತ್ರ, ಧ್ಯಾನವನ್ನು ಪ್ರತಿದಿನ ಅಭ್ಯಾಸ ಮಾಡಬೇಕು. ಇವುಗಳಿಂದ ಮಾನಸಿಕ, ದೈಹಿಕ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆ. ಯೋಗಾಭ್ಯಾಸದಲ್ಲಿ ಧ್ಯಾನ ಪ್ರಮುಖವಾದದ್ದು, ಧ್ಯಾನದಲ್ಲಿ ಆನೇಕ ವಿಧಗಳಿವೆ.
ಪತಂಜಲಿ ಋಷಿಗಳು ಓಂಕಾರ ಧ್ಯಾನವನ್ನು ಹೇಳಿದ್ದಾರೆ. ದೀರ್ಘ ಓಂಕಾರವನ್ನು 11 ಬಾರಿ ಉಚ್ಛಾರಣೆ ಮಾಡಿ, ಸಾಧ್ಯವಿದ್ದವರು 108 ಬಾರಿ ಓಂಕಾರವನ್ನು ಉಚ್ಛಾರಣೆ ಮಾಡಿ, ನಂತರ ಧ್ಯಾನ ಮುದ್ರೆಯಲ್ಲಿ ಆಜ್ಞಾ ಚಕ್ರದಲ್ಲಿ ಓಂಕಾರ ಧ್ಯಾನ ಮಾಡಬೇಕು. ಬಹಳಷ್ಟು ಮಾನಸಿಕ ರೋಗಿಗಳ ಮೇಲೆ ಈ ಪ್ರಯೋಗ ಮಾಡಲಾಗಿದೆ. ಬಿನ್ನತೆಯಿಂದ ಬಳಲುತ್ತಿರುವವರು ಅರ್ಧ ಗಂಟೆ ಅಥವಾ ಒಂದು ಗಂಟೆ ನಿರಂತರ ಧ್ಯಾನ ಮಾಡಬೇಕು, ಕನಿಷ್ಠ 10 ನಿಮಿಷ ಧ್ಯಾನವನ್ನು ಪ್ರತಿ ಆರೋಗ್ಯವಂತ ವ್ಯಕ್ತಿ ಪ್ರತಿನಿತ್ಯ ಮಾಡಬೇಬೇಕು.ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನ ವ್ಯಕ್ತಿತ್ವ ಯಂತ್ರದಂತೆ ಆಗಿದೆ. ಹೀಗಾಗಿ ಮಾನಸಿಕ ನೆಮ್ಮದಿಗೆ ಧ್ಯಾನ ಅಗತ್ಯ.
ಪ್ರತಿಯೊಬ್ಬರೂ ನಿತ್ಯವೂ ’ಓಂಕಾರ’ ಉಚ್ಛಾರಣೆ ಮಾಡಬೇಕು. ಇದು ಡಿವೈನ್ ಎನರ್ಜಿ (ದೈವಿಕ ಶಕ್ತಿ), ಬ್ರಾಹ್ಮಮುಹೂರ್ತದಲ್ಲಿ ಎದ್ದು ಅಂದರೆ, ಸೂರ್ಯೋದಯಕ್ಕೆ ಒಂದೂವರೆ ಗಂಟೆ ಮುಂಚೆ ಎದ್ದು, ಕನಿಷ್ಠ 11 ರಿಂದ 108 ಬಾರಿ ಓಂ ಕಾರ ಉಚ್ಛಾರಣೆ ಮಾಡಬೇಕು. ಕಣ್ಣು ಮುಚ್ಚಿ ಈ ರೀತಿ ಓಂ ಕಾರ ಅಭ್ಯಾಸ ಮಾಡಿದರೆ ಓಂ ಕಾರ ಧ್ಯಾನ ಅಭ್ಯಾಸವಾಗುತ್ತದೆ. ಹೀಗೆ ನಿತ್ಯವೂ ಉಚ್ಛಾರಣೆ ಮಾಡುವುದರಿಂದ ಮನೋರೋಗ, ಒತ್ತಡ, ನಿದ್ರಾಹೀನತೆ ನಿವಾರಣೆಯಾಗಲಿದೆ, ಜೀರ್ಣಾಂಗ ವ್ಯೂಹ ಚೆನ್ನಾಗಿ ಕೆಲಸ ಮಾಡುತ್ತದೆ. ಯೋಗ, ಅಗ್ನಿಹೋತ್ರ, ಧ್ಯಾನವನ್ನು ಪ್ರತಿದಿನ ನಾವೆಲ್ಲರೂ ಅಭ್ಯಾಸ ತಪ್ಪದೇ ಅಭ್ಯಾಸ ಮಾಡೋಣ. ಪತಂಜಲಿ ಯೋಗ ಸಮಿತಿ ವತಿಯಿಂದ ಉಚಿತವಾಗಿ ಇವುಗಳ ತರಬೇತಿಯನ್ನು ಕರ್ನಾಟಕ ರಾಜ್ಯದಾದ್ಯಂತ ನೀಡುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ರಾಜ್ಯ ಕಾರ್ಯಾಲಯ ಸಂಪರ್ಕ ಸಂಖ್ಯೆ 9008100896 ಗೆ ಸಂಪರ್ಕಿಸಿರಿ. 24 ಗಂಟೆಗಳಲ್ಲಿ 1 ಗಂಟೆ ಯೋಗಾಭ್ಯಾಸಕ್ಕೆ ಸಮಯ ನೀಡಿದರೆ 23 ಗಂಟೆ ನೀವು ಆರೋಗ್ಯವಾಗಿ ಇರಬಹುದು. " ಎಂದು ಆರೋಗ್ಯದ ಸಂದೇಶ ನೀಡಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಪತಂಜಲಿ ಹುಬ್ಬಳ್ಳಿಯ ವಾಮನ ಶಾನುಭಾಗ, ಮಹೇಶ ಕೊಟ್ಟಿಗೆರೆ, ಡಾ. ನಳಿನಿ ಮಗದುಮ್, ರಾಜಶೇಖರ ಕುದರಿ, ಮುತ್ತಪ್ಪ ನಲವಾಡಿ, ಭರಮಪ್ಪನವರ, ಮಾಳಪ್ಪನವರ, ಬೆಳಗಾವಿಯ ವಿದ್ಯಾ ಜೋಶಿ, ಶ್ರೀದೇವಿ , ಉಪೇಂದ್ರ ಜೋಶಿ, ಧಾರವಾಡದ ಬಸವರಾಜ, ಶ್ರೀದೇವಿ, ವೀರೇಶ, ಅಕ್ಷಯ, ವಿಜಯ, ರೂಪಾ, ದೇವೇಂದ್ರ, ಮುಂತಾದವರು ಉಪಸ್ಥಿತರಿದ್ದರು.