ವಿಶ್ವ ನವಕಾರ ದಿವಸ: ನವ ಸಂಕಲ್ಪಕ್ಕೆ ಪ್ರಧಾನಿ ಮೋದಿ ಕರೆ

World Innovation Day: PM Modi calls for new resolve

ವಿಶ್ವ ನವಕಾರ ದಿವಸ: ನವ ಸಂಕಲ್ಪಕ್ಕೆ ಪ್ರಧಾನಿ ಮೋದಿ ಕರೆ  

ಬೆಳಗಾವಿ 09: ಇಡಿ ವಿಶ್ವಕ್ಕೆ ಮತ್ತು ಸಕಲ ಜೀವಾತ್ಮಾಗಳಿಗೆ ಪರಿಶುದ್ದ ಜೀವನ ಶೈಲಿ ನೀಡುವ ಹಾಗೂ  ವಿಶ್ವ ಶಾಂತಿಯ ಮಹಾಮಂತ್ರವಾಗಿರುವ ನವಕಾರ ಮಂತ್ರ ಇದೊಂದು ಆಧ್ಯಾತ್ಮದ ಮಂತ್ರವಾಗಿದ್ದು, ಇಂದು ನಡೆಯುತ್ತಿರುವ ವಿಶ್ವ  ನವಕಾರ ದಿವಸ ಆಚರಣೆ ಸಂದರ್ಭದಲ್ಲಿ ನಾವೆಲ್ಲರೂ  ನವ (ಒಂಬತ್ತು)  ಸಂಕಲ್ಪ ಮಾಡಬೇಕಾಗಿದೆ ಎಂದು  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.  

 ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ  ಜಿತೊ ಬೆಳಗಾವಿ ವಿಭಾಗದ ವತಿಯಿಂದ ಬೆಳಗಾವಿಯ ಮಹಾವೀರ ಭವನದ ಬಳಿ ಆಯೋಜಿಸಲಾದ ಹಾಗೂ ದೇಶದ ವಿವಿಧ 6000  ನಗರ, ಪಟ್ಟಣಗಳಲ್ಲಿ ಮತ್ತು 108 ವಿವಿಧ ದೇಶಗಳಲ್ಲಿ ಹಮ್ಮಿಕೊಳ್ಳಲಾದ ವಿಶ್ವ ನವಕಾರ ದಿವಸ ಸಮಾರಂಭವನ್ನು ವರ್ಚುಲವಾಗಿ ಉದ್ಘಾಟಿಸಿ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.   

ಜೈನ ಧರ್ಮದಲ್ಲಿ ನವಕಾರ ಮಂತ್ರ ಅತೀ ಮಹತ್ವದ ಹಾಗೂ ಪ್ರಾವಿತ್ಯತೆ  ಹೊಂದಿದ ಮಂತ್ರವಾಗಿದೆ. ಈ ಮಂತ್ರ ಪಠಣದಿಂದ  ಆತ್ಮಶುದ್ದಿಗೆ ಸಹಕಾರಿಯಾಗಲಿದೆ. ರಾಗ,ದ್ವೇಷ, ಮೋಹವನ್ನು ಎಲ್ಲವನ್ನು ತ್ಯಜಿಸಿ ತಮ್ಮ ಆತ್ಮ ಕಲ್ಯಾಣ ಮಾಡಿಕೊಳ್ಳಲು ಈ ಮಂತ್ರದ ಪಠಣ ಸಹಕಾರಿಯಾಗಲಿದೆ. ಇಂತಹ ಅಧ್ಬುತ ಮಂತ್ರ ದೊರಕಿರುವುದು  ನಮ್ಮೆಲ್ಲರ ಸೌಭಾಗ್ಯ ಎಂದು ಅವರು ಹೇಳಿದರು.  

ಈ  ವಿಶ್ವ ನವಕಾರ ದಿವಸ ಆಚರಣೆಯ ಅಂಗವಾಗಿ ನಾವೆಲ್ಲರೂ ಇಂದು ನವ (ಒಂಬತ್ತು) ಸಂಕಲ್ಪಗಳನ್ನು ಮಾಡಬೇಕಾಗಿದೆ. 1 ನೀರು ಮಿತ ಬಳಕೆ ಮಾಡುವುದು,  2. ಪರಿಸರ ಕಾಳಜಿ  ವಹಿಸುವುದು ಮತ್ತು ಪ್ರತಿಯೊಬ್ಬರು ತಮ್ಮ ತಾಯಿಯ ನೆನಪಿನಲ್ಲಿ ಒಂದು ಸಸಿ ನೆಡುವುದು,  3 ಸ್ವಚ್ಛತೆ, 4 .ವೋಕಲ ಟೂ ಲೋಕಲ ವ್ಯಾಪಾರ, 5. ದೇಶ ದರ್ಶನ, 6 ಸಾವಯವ ಕೃಷಿ ಮಾಡುವುದು, 7 ಭಾರತೀಯ ಶುದ್ದ ಆಹಾರ 8 ಯೋಗ ಮತ್ತು ದೇಶಿಯ ಆಟೋ ಪಾಠಗಳು ಹಗೂ 9  ಬಡವರಿಗೆ ಸಹಾಯ ಮಾಡುವ ಸಂಕಲ್ಪ ಈ ರೀತಿ ಒಂಬತ್ತು ಸಂಕಲ್ಪಗಳನ್ನು ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.  

ಹಿಂದವಾಡಿಯ ಮಹಾವೀರ ಭವನದ ಬಳಿ ನಡೆದ ಈ ಸಮಾರಂಭದ ಸಾನಿಧ್ಯವನ್ನು ಆಚಾರ್ಯ ಅನೇಕಾಂತಸಾಗರಜೀ ಮಹಾರಾಜರು ವಹಿಸಿ ಮಾತನಾಡಿ, ನವಕಾರ ಮಂತ್ರ ಪಠಣ ಇಡಿ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆ, ಸತ್ಯದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಮಂತ್ರವಾಗಿದೆ. ಇದೊಂದು ಆಧ್ಯಾತ್ಮಿಕವಾದ ಹಾಗೂ ಎಲ್ಲ ಮಾನವ ಕುಲಕ್ಕೆ  ಅವಶ್ಯಕವಾಗಿರುವ ಮಂತ್ರವಾಗಿದ್ದು, ಈ ಮಂತ್ರವನ್ನು  ಪ್ರತಿಯೊಬ್ಬರು  ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.  

ಬೆಳಗಾವಿಯ ಮಹಾವೀರ ಭವನದ ಬಳಿ ನಡೆದ ಈ  ಐತಿಹಾಸಿಕ ಕಾರ್ಯಕ್ರಮದಲ್ಲಿ ಸುಮಾರು  ಏಳು ಸಾವಿರ ಜನರು ಸೇರಿ ಏಕಕಾಲಕ್ಕೆ ನವಕಾರ ಮಂತ್ರ ಪಠಣ ಮಾಡಿದರು. ಅದಲ್ಲದೇ ಜಿಲ್ಲೆಯ  ಎಲ್ಲ ತಾಲೂಕುಗಳಲ್ಲಿನ ಎಲ್ಲ ಬಸದಿಗಳಲ್ಲಿ ಶ್ರಾವಕ ಶ್ರಾವಕಿಯರು ಏಕಕಾಲಕ್ಕೆ ನವಕಾರ ಮಂತ್ರ ಪಠಣ ಮಾಡಿದರು.. ವಿಶ್ವದಾದ್ಯಂತ ನಡೆದ ಈ ಕಾರ್ಯಕ್ರಮದಲ್ಲಿ ಜಿತೋ ಬೆಳಗಾವಿ ವತಿಯಿಂದ ಅತೀ ಹೆಚ್ಚು 1,23,352 ಜನರು ಹೆಸರು  ನೋಂದಣಿ ಮಾಡುವ  ಮೂಲಕ  ಜತೋ ಬೆಳಗಾವಿ ವಿಭಾಗ ದಾಖಲೆ ನಿರ್ಮಿಸಿದೆ.  

ಸಮಾರಂಭದಲ್ಲಿ ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ ಅತಿಥಿಗಳನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಭಯ ಆದಿಮನಿ ವಂದಿಸಿದರು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಶ್ರೀಪಾಲ ಖೇಮಲಾಪುರೆ ಸೇರಿದಂತೆ ಸಮಾಜದ ಹಿರಿಯರು ಉಪಸ್ಥಿತರಿದ್ದರು.