ಬೆಳಗಾವಿ, 08 : 07ರಂದು ಎಪ್. ಪಿ. ಎ. ಐ. ಬೆಳಗಾವಿ ಶಾಖೆ ಹಾಗೂ ಎಸ್. ಬಿ. ಪಾಟೀಲ ಶಿಕ್ಷಕರ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ "ವಿಶ್ವ ಆರೋಗ್ಯ ದಿನ"ವನ್ನು ಎಸ್.ಬಿ.ಪಾಟೀಲ ಕಾಲೇಜಿನಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಸಸಿಗೆ ನೇರುಣಿಸುವ ಮೂಲಕ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ವಿನೋದ ಸಿ. ಬಾವ್ಡೆಕರ ಎಪ್. ಪಿ. ಎ. ಐ. ಬೆಳಗಾವಿ ಶಾಖೆಯ ಅಧ್ಯಕ್ಷರು ಮಾತನಾಡುತ್ತಾ ಆರೋಗ್ಯಕರ ಆರಂಭ ಭವಿಷ್ಯದ ಭರವಸೆಗಳು ಎಂಬ ವರ್ಷದ ಘೋಷ ವಾಕ್ಯವನ್ನು ನುಡಿಸುತ್ತಾ ವಿಶ್ವ ಆರೋಗ್ಯ ದಿನದ ಮಹತ್ವದ ಕುರಿತು ವಿವರಿಸುತ್ತಾ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಜನರಲ್ಲಿ ಜಾಗ್ರತಿ ಮೂಡುಸುವುದರೊಂದಿಗೆ, ಆರೋಗ್ಯವೇ ಭಾಗ್ಯ ಆರೋಗ್ಯವಂತ ಮತ್ತು ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ದೊಡ್ಡದು. ಯುವಕರು ಇತ್ತೀಚಿನ ದಿನಗಳಲ್ಲಿ ಫಾಸ್ಟ ಫುಡ ತಿನ್ನುವುದರೊಂದಿಗೆ ಅನೇಕ ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದು ಇಂತಹ ದಿನಾಚರಣೆಗಳ ಮೂಲಕ ಜಾಗೃತಿ ಮೂಡಿಸುವುದು ಆತ್ಯವಶ್ಯಕ ಎಂದು ಅಭಿಪ್ರಾಯ ಪಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಅರುಣ ಜೋಶಿ, ಪ್ರಾಂಶುಪಾಲರು (ಬಿಎಡ್. ಕಾಲೇಜ) ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಯಾರು ಆರೋಗ್ಯವಂತ ವ್ಯಕ್ತಿ ಇರುತ್ತಾನೆಯೇ ಅವನೇ ದೊಡ್ಡ ಶ್ರೀಮಂತ. ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ, ಸರಿಯಾದ ಆಹಾರ, ಶ್ರಮದೊಂದಿಗೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳು ಅಷ್ಟ್ಯೆ ಮುಖ್ಯ. ಉತ್ತಮ ಆರೋಗ್ಯವನ್ನು ಹೊಂದಿದಲ್ಲಿ ಮಾತ್ರ ನಿಮ್ಮ ದಿನ-ನಿತ್ಯದ ಚಟುವಟಿಗಳೊಂದಿಗೆ ಜೀವನವನ್ನು ಆನಂದಿಸಲು ಮಾನಸಿಕ ಮತ್ತು ದೈಹಿಕ ಆರೋಗ್ಯ ಬಹು ಮೂಖ್ಯ ಈ ನಿಟ್ಟಿನಲಿಪ್ರಶಿಕ್ಷಣಾರ್ಥಿಗಳು ಈ ಕಾರ್ಯಕ್ರಮದ ಸದುಪಯೊಗ ಪಡೆದು ಕೊಳ್ಳಬೇಕೆಂದು ಕರೆನೀಡುದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಪ್ರಶಿಕ್ಷಣಾರ್ಥಿಗಳು ಹಾಗೂ ಎಪ್.ಪಿ.ಎ.ಐ. ಬೆಳಗಾವಿ ಶಾಖೆಯ ಸಿಬ್ಬಂದಿವರ್ಗದವರು ಮತ್ತಿತರರು ಉಪಸ್ಥಿತರಿದ್ದರು.